ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ವಿವಿಐಪಿಗೆ ಭದ್ರತೆ

Lingaraj Badiger
Updated On : 9 Oct 2013, 6:58 am

ಪೊಲೀಸರು ಸಂಚಾರ ಭದ್ರತೆ, ಕಾನೂನು ಮತ್ತು ಸುವ್ಯವಸ್ಥೆ ಮಾತ್ರ ಕಾಪಾಡುವುದಿಲ್ಲ. ಜತೆಗೆ ಗಣ್ಯ ವ್ಯಕ್ತಿಗಳಿಗೆ ಭದ್ರತೆ ನೀಡುವ ಕೆಲಸವನ್ನೂ ಸಹ ಮಾಡುತ್ತಾರೆ.
ಅದಕ್ಕಾಗಿ ಬೇರೆ ಪೊಲೀಸ್ ಸಿಬ್ಬಂದಿ ಇರುತ್ತಾರೆ. ವಿವಿಐಪಿ ವಿಭಾಗ ಎಂದೇ ಪ್ರತ್ಯೇಕವಾಗಿ ಒಂದು ವಿಭಾಗ ಕೆಲಸ ನಿರ್ವಹಿಸುತ್ತಿದೆ. ಪ್ರತಿ ಜಿಲ್ಲೆಯಲ್ಲಿ ಸಂಬಂಧಪಟ್ಟ ಪೊಲೀಸ್ ಆಯುಕ್ತ ಅಥವಾ ಪೊಲೀಸ್ ವರಿಷ್ಠಾಧಿಕಾರಿಗಳ ಅಡಿಯಲ್ಲಿ ಈ ವಿವಿಐಪಿ ವಿಭಾಗ ಕೆಲಸ ನಿರ್ವಹಿಸುತ್ತದೆ.

ಉದಾಹರಣೆಗೆ, ಮುಖ್ಯಮಂತ್ರಿ, ಸಚಿವರು, ಶಾಸಕರು ಸೇರಿದಂತೆ ಜನಪ್ರತಿನಿಧಿಗಳಿಗೆ ಭದ್ರತೆ ಒದಗಿಸುವುದು ಈ ವಿವಿಐಪಿ ವಿಭಾಗದ ಪೊಲೀಸರ ಜವಾಬ್ದಾರಿ. ಉನ್ನತ ಹುದ್ದೆಯಲ್ಲಿರುವ ಸರ್ಕಾರಿ ಅಧಿಕಾರಿಗಳಿಗೂ ಈ ವಿವಿಐಪಿ ಸಿಬ್ಬಂದಿ ಭದ್ರತೆ ನೀಡಲಿದ್ದಾರೆ.
ಉಳಿದಂತೆ ಖಾಸಗಿ ವ್ಯಕ್ತಿಗಳಿಗೂ ಭದ್ರತೆ ನೀಡಬಹುದು. ಆದರೆ, ಅದಕ್ಕೂ ಮುನ್ನ ಪೊಲೀಸ್ ಭದ್ರತೆ ಇಚ್ಚಿಸಿದ ಅಥವಾ ಅಗತ್ಯವಿರುವ ಗಣ್ಯರು/ಪ್ರಮುಖ ವ್ಯಕ್ತಿಗಳು ಸಂಬಂಧಪಟ್ಟ ಆಯುಕ್ತ/ಪೊಲೀಸ್ ವರಿಷ್ಠಾಧಿಕಾರಿಗೆ ಭದ್ರತೆಗೆ ಪೊಲೀಸ್ ಸಿಬ್ಬಂದಿ ನೀಡುವ ಕುರಿತು ಹಾಗೂ ಎಷ್ಟು ಸಿಬ್ಬಂದಿ ಬೇಕು ಎಂಬ ಬಗ್ಗೆ ಮನವಿ ಪತ್ರ ಸಲ್ಲಿಸಬೇಕು.

ಆ ಪತ್ರವನ್ನು ಪರಿಶೀಲಿಸುವ ಹಿರಿಯ ಅಧಿಕಾರಿಗಳು ಭದ್ರತೆಗೆ ಸಿಬ್ಬಂದಿಯನ್ನು ನೀಡುತ್ತಾರೆ. ಪೊಲೀಸ್ ಪೇದೆ, ಮುಖ್ಯಪೇದೆ, ಸಹಾಯಕ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ವರ್ಗದ ಸಿಬ್ಬಂದಿ ವಿವಿಐಪಿ ಭದ್ರತೆ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಾರೆ. ಈ ವಿಭಾಗಕ್ಕೆ ಉಪ ಪೊಲೀಸ್ ಆಯುಕ್ತ(ಡಿಸಿಪಿ) ವರ್ಗದ ಅಧಿಕಾರಿ ಮುಖ್ಯಸ್ಥರಾಗಿದ್ದು, ಅದರ ಜವಾಬ್ದಾರಿ ನಿರ್ವಹಿಸುತ್ತಾರೆ.

- ಶಾಂತ ತಮ್ಮಯ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement