ಹಾವು ಪುಂಗಿಗೆ ತಲೆದೂಗುವುದೇ?
ಹಾವಿಗೆ ಕಿವಿ ಕೇಳಿಸುವುದಿಲ್ಲ. ಅಂದ ಮೇಲೆ ಅದು ಪುಂಗಿಯ ನಾದವನ್ನು ಕೇಳಲು ಹೇಗೆ ಸಾಧ್ಯ? ಹಾವಿನ ಚರ್ಮ ಸೂಕ್ಷ್ಮವಾಗಿದ್ದು, ನೆಲದ ಕಂಪನದಿಂದಲೇ ಎಲ್ಲವನ್ನೂ ಗ್ರಹಿಸುತ್ತದೆ. ಇಷ್ಟೇ ಅಲ್ಲ, ಹಾವಿನ ಕಣ್ಣಿನ ದೃಷ್ಟಿಬಲು ಚುರುಕು ಮತ್ತು ಅದರ ನಾಲಿಗೆ ಚುರುಕು ವಾಸನಾಗ್ರಹಣ ಶಕ್ತಿಯನ್ನು ಹೊಂದಿದೆ. ಇದರ ನಾಲಿಗೆಯ ತುದಿಯಲ್ಲಿ ಗ್ರಹಣ ಶಕ್ತಿ ಅಧಿಕವಾಗಿರುತ್ತದೆ. ಅದು ನಾಲಿಗೆಯನ್ನು ಹೊರಗೆ-ಒಳಗೆ ಆಡಿಸುವುದರ ಮೂಲಕ ತನ್ನ ಆಹಾರದ ಅಥವಾ ಶತ್ರುವಿನ ಇರುವಿಕೆಯನ್ನು ತಿಳಿದುಕೊಳ್ಳುತ್ತದೆ. ಹಾವು ಪುಂಗಿಗೆ ತಲೆ ಆಡಿಸುವುದು ಅದರ ನಾದಕ್ಕಲ್ಲ, ಚಲನೆಗೆ!
- ಅರಳಕುಪ್ಪೆ ಶ್ರೀನಿವಾಸ