ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಬೆಂಡು ನೀರಿನಲ್ಲಿ ತೇಲುವುದೇಕೆ?

Lingaraj Badiger
Updated On : 11 Oct 2013, 6:43 am

ನೀರಿಗೆ ಕಾರ್ಕ್‌ನ ತುಂಡನ್ನು ಹಾಕಿದಾಗ ಅದು ತೇಲುತ್ತದೆ. ನೀರಿನಲ್ಲಿ ಮುಳುಗುತ್ತಿರುವ ಜನರನ್ನು ರಕ್ಷಿಸಲು ಹಿಂದಿನ ಕಾಲದಲ್ಲಿ ದೊಡ್ಡ ದೊಡ್ಡ ಕಾರ್ಕ್‌ನ ತುಂಡುಗಳನ್ನು ಉಪಯೋಗಿಸಲಾಗುತ್ತಿತ್ತು. ಕಾರ್ಕ್‌ನ್ನು ಬಿರಡೆ, ತೆಪ್ಪ ಮತ್ತು ಜೀವರಕ್ಷಕ ಸಾಧನಗಳನ್ನು ತಯಾರಿಸಲು ಉಪಯೋಗಿಸಲಾಗುವುದು. ಅಂಟು ಪದಾರ್ಥಗಳನ್ನು ಸೇರಿಸಿ ತಯಾರಿಸುವ ನುಣ್ಣನೆಯ ಕಾರ್ಕಿನ ಪುಡಿಯನ್ನು ಅನೇಕ ಉದ್ದೇಶಗಳಿಗೆ ಬಳಸಲಾಗುವುದು.
ಕಾರ್ಕ್‌ನಲ್ಲಿರುವ ಕಣಗಳು ಒತ್ತಾಗಿರುವುದಿಲ್ಲ. ಒಂದೊಂದು ಕಣದ ನಡುವೆ ತುಂಬಾ ಜಾಗವಿರುತ್ತದೆ. ಆದ್ದರಿಂದ ಹಗುರ. ಒಂದು ತುಂಡು ಕಾರ್ಕ್‌ನ ತೂಕ ಅಷ್ಟೇ ಪ್ರಮಾಣದ ನೀರಿನ ತೂಕದ ಐದನೇ ಒಂದು ಭಾಗದಷ್ಟಿರುತ್ತದೆ. ಅದನ್ನು ನೀರಿಗೆ ಹಾಕಿದಾಗ ಕಾರ್ಕ್‌ನ ಐದನೇ ಒಂದು ಭಾಗ ನೀರಿನಲ್ಲಿರುತ್ತದೆ.

- ಹರಳಹಳ್ಳಿ ಪುಟ್ಟರಾಜು, ಪಾಂಡವಪುರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement