ಮರಳು ದಸರಾ
ಬೃಹತ್ ದುರ್ಗಾದೇವಿ ಮೂರ್ತಿ ಹಾಗೂ ಇಸ್ಕಾನ್ ದೇವಾಲಯ ನೋಡಬೇಕಾದರೆ ಬಿಜಾಪುರಕ್ಕೆ ಬನ್ನಿ! ...
ಬೃಹತ್ ದುರ್ಗಾದೇವಿ ಮೂರ್ತಿ ಹಾಗೂ ಇಸ್ಕಾನ್ ದೇವಾಲಯ ನೋಡಬೇಕಾದರೆ ಬಿಜಾಪುರಕ್ಕೆ ಬನ್ನಿ! ಹೌದು, ಅಂತಾರಾಷ್ಟ್ರೀಯ ಮರಳು ಕಲಾವಿದ ಸುದರ್ಶನ ಪಟ್ನಾಯಕ್ ನಿರ್ಮಿಸಿದ ಮರಳಿನ ದುರ್ಗಾದೇವಿ ಮೂರ್ತಿ ಹಾಗೂ ಇಚಲಕರಂಜಿಯ ಕಲಾವಿದ ಕೃಷ್ಣ ನಿರ್ಮಿಸಿದ ಇಸ್ಕಾನ್ ದೇವಾಲಯಗಳು ಈ ಬಾರಿಯ ಬಿಜಾಪುರ ದಸರಾ ಹಬ್ಬದ ಹೈಲೆಟ್ಸ್.
ಮರಳಿನ ಮೂರ್ತಿ
ಬಿಜಾಪುರದ ಶಹಪೇಟೆ ಮುಖ್ಯ ರಸ್ತೆಯಲ್ಲಿ ಅಂತಾರಾಷ್ಟ್ರೀಯ ಮರಳು ಕಲಾವಿದ ಒಡಿಸ್ಸಾದ ಸುದರ್ಶನ ಪಟ್ನಾಯಕ್ ಅವರು ಮರಳಿನಿಂದ ದುರ್ಗಾದೇವಿ ಮೂರ್ತಿ ರಚಿಸಿದ್ದಾರೆ. ದೇವಿಯ ಎದುರಿಗೆ ಮಹಿಳೆಯೊಬ್ಬಳು ನಮಿಸುತ್ತಿರುವ ಮರಳಿನ ಮೂರ್ತಿಯನ್ನೂ ಪ್ರತಿಷ್ಠಾಪಿಸಿದ್ದಾರೆ. ದೇಶದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಹಿಳೆಯರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಶಕ್ತಿ ಕೊಡು ತಾಯೆ... ಎಂದು ವಿನಮ್ರವಾಗಿ ಬೇಡಿಕೊಳ್ಳುತ್ತಿರುವ ದೃಶ್ಯ ನೋಡುಗರ ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಪಟ್ನಾಯಕ್ ಪುರಿಯ 6 ಕಲಾವಿದರ ಜೊತೆಗೂಡಿ ದುರ್ಗಾದೇವಿಯ ಭವ್ಯ ಮೂರ್ತಿ ನಿರ್ಮಿಸಲು ತೆಗೆದುಕೊಂಡ ಕಾಲ ಒಂದೇ ದಿನ. 150 ಟನ್ ಉಸುಕು ಬಳಸಲಾಗಿದೆ. ಬಿಜಾಪುರದಲ್ಲಿ ಉಸುಕಿನ ಕೊರತೆ. ಹೀಗಾಗಿ ಗೋವಾದಿಂದ ಉಸುಕು ತರಿಸಿಕೊಳ್ಳಲಾಗಿದೆ. 35್ಢ40 ಉದ್ದಳತೆಯಲ್ಲಿ 9 ಅಡಿ ಎತ್ತರದ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಇದನ್ನು ಪ್ರಾಯೋಜಿಸಿದ್ದು ಬಸವೇಶ್ವರ ಆದಿಶಕ್ತಿ ತರುಣ ಮಂಡಳಿ. 8 ವರ್ಷ ಹಿಂದೆ ಪಟ್ನಾಯಕ್ ಬಿಜಾಪುರದಲ್ಲಿ ಇದೇ ರೀತಿ ದುರ್ಗಾ ಮೂರ್ತಿ ನಿರ್ಮಿಸಿದ್ದರು.
ಇಸ್ಕಾನ್ ಪ್ರತಿರೂಪ
ಬಿಜಾಪುರದ ರಾಮ ಮಂದಿರ ರಸ್ತೆಯ ಸಿದ್ದೇಶ್ವರ ಆದಿಶಕ್ತಿ ತರುಣ ಮಂಡಳಿ 40್ಢ30 ಉದ್ದಳತೆಯ ಜಾಗದಲ್ಲಿ 45 ಅಡಿ ಎತ್ತರದ ಇಸ್ಕಾನ್ ದೇವಾಲಯ ನಿರ್ಮಿಸಿದೆ. ಮಹಾರಾಷ್ಟ್ರದ ಇಚಲಕರಂಜಿಯ ಕೃಷ್ಣಾ ಎಂಬ ಕಲಾವಿದ 15 ಜನ ಸಹ ಕಲಾವಿದರೊಂದಿಗೆ ನಾಲ್ಕು ದಿನಗಳಲ್ಲಿ ಈ ದೇವಾಲಯ ನಿರ್ಮಿಸಿದ್ದಾರೆ. ದೇವಾಲಯದಲ್ಲಿ 101 ಕೆಜಿ ಬೆಳ್ಳಿಯ ದೇವಿ ಮೂರ್ತಿ ಪ್ರತಿಷ್ಠಾಪಿಸಲಾಗಿದೆ.
- ರುದ್ರಪ್ಪ ಆಸಂಗಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.