ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಸದಾ ಸಿದ್ಧರಿರುತ್ತಾರೆ

Lingaraj Badiger
Updated On : 11 Oct 2013, 6:43 am

ವಿವಿಐಪಿ ಭದ್ರತೆ ವಿಭಾಗ ಪ್ರತಿ ಜಿಲ್ಲಾ ಮಟ್ಟದ ಎಲ್ಲಾ ಪೊಲೀಸ್ ಆಯುಕ್ತ/ಎಸ್ಪಿ ಕಚೇರಿಯಲ್ಲಿ ಇರುತ್ತದೆ. ಗಣ್ಯ ವ್ಯಕ್ತಿಗಳು ನಗರಕ್ಕೆ ಬಂದಾಗ ಅವರಿಗೆ ಭದ್ರತೆ ನೀಡುವುದು, ಸಭೆ ಸಮಾರಂಭಗಳಲ್ಲಿ ರಾಜ್ಯದ ಪ್ರಮುಖರಿಗೆ ಭದ್ರತೆ ನೀಡುವುದು ಇವರ ಕೆಲಸ. ಜತೆಗೆ ಅಗತ್ಯವಿರುವ ಗಣ್ಯರಿಗೆ ಭದ್ರತೆ ಒದಗಿಸುವುದು ಪ್ರಮುಖ ಕರ್ತವ್ಯ.
ಬೆದರಿಕೆ ಇರುವ ಗಣ್ಯರಿಗೆ, ಸರ್ಕಾರಿ ಪ್ರತಿನಿಧಿಗಳಿಗೆ ಭದ್ರತೆ ನೀಡಲು ಅಗತ್ಯಬಿದ್ದಾಗ ಈ ಸಿಬ್ಬಂದಿಯನ್ನು ಬಳಸುತ್ತಾರೆ. ಆದರೆ, ಅವರು ಹೆಚ್ಚು ದಿನ ಇರುವುದಿಲ್ಲ. ಅವರ ಬದಲಾಗಿ ಗಣ್ಯರ ಭದ್ರತೆಗೆಂದೇ ನೇಮಕವಾಗಿರುವ ಸಿಎಆರ್ (ಸಶಸ್ತ್ರ ಮೀಸಲು ಪಡೆ) ಪೊಲೀಸ್ ಸಿಬ್ಬಂದಿಯನ್ನು ನೇಮಿಸುತ್ತಾರೆ.

ಇವರ ಕೆಲಸ ಬೇರೆ ಪೊಲೀಸರಂತಲ್ಲ. ದಿನದ 24 ಗಂಟೆಯೂ ಕರ್ತವ್ಯ ನಿರ್ವಹಿಸಬೇಕು. ಅವರು ರಜೆ ಹೋದಾಗ ಬೇರೆ ಸಿಬ್ಬಂದಿ ಹಾಜರಾಗುತ್ತಾರೆ. ಒಂದು ವೇಳೆ ಭದ್ರತೆ ಪಡೆದಿರುವ ವ್ಯಕ್ತಿ ಭದ್ರತಾ ಸಿಬ್ಬಂದಿ ಬೇಡ ಎಂದಲ್ಲಿ ಮಾತ್ರ ಅಂದು ಅವರಿಗೆ ರಜೆ ಸಿಗುತ್ತದೆ. ಇಲ್ಲವಾದಲ್ಲಿ ಸದಾ ಕರ್ತವ್ಯದಲ್ಲಿರಬೇಕು.

ಅಷ್ಟೇ ಅಲ್ಲ ಅವರಿಗೆ ನೀಡಿರುವ ಪಿಸ್ತೂಲ್‌ನಲ್ಲಿ ಸದಾ ಮದ್ದು ತುಂಬಿಕೊಂಡಿರಬೇಕು. ಗಣ್ಯರು ಹೋದಲ್ಲೆಲ್ಲಾ ಹೋಗಬೇಕು(ಕೆಲ ಜಾಗ ಹೊರತುಪಡಿಸಿ) ಸದಾ ಅವರ ಮೇಲೆ ಹಾಗೂ ಅವರ ಸುತ್ತಮುತ್ತ ಓಡಾಡುವವರ ಮೇಲೆ ಕಣ್ಣಿಟ್ಟಿರಬೇಕು. ಅವರ ಕಣ್ಣು ಹದ್ದಿನ ಕಣ್ಣಿನಂತೆ ಚುರುಕಾಗಿ ಕೆಲಸ ಮಾಡಬೇಕು. ಸಿಎಆರ್ ಹೊರತುಪಡಿಸಿ, ಕಾನೂನು ಮತ್ತು ಸುವ್ಯವಸ್ಥೆ, ಸಂಚಾರ ಪೊಲೀಸ್ ವಿಭಾಗಗಳಲ್ಲಿ ಕೆಲಸ ಮಾಡಲು ಇವರಿಗೆ ಅವಕಾಶ ಇರುವುದಿಲ್ಲ. ಒಟ್ಟಾರೆ ಅವರು ಸದಾ ಸಿದ್ಧರಿರಬೇಕು.

- ಶಾಂತ ತಮ್ಮಯ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement