ಆರು ತಿಂಗಳಿಗೊಮ್ಮೆ ಶೂಟ್...
ಸಾಮಾನ್ಯವಾಗಿ ಪೊಲೀಸ್ ಸಿಬ್ಬಂದಿ ನೇಮಕ ಸಂದರ್ಭದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿ ವೇಳೆಯೇ ಶಸ್ತ್ರಾಸ್ತ್ರಗಳನ್ನು ಉಪಯೋಗಿಸುವ ಬಗ್ಗೆ ತರಬೇತಿ ನೀಡಲಾಗಿರುತ್ತದೆ.
ಒಮ್ಮೆ ತರಬೇತಿ ಮುಗಿಸಿ ಕರ್ತವ್ಯಕ್ಕೆ ಹಾಜರಾದರೆಂದರೆ ಅವರಿಗೆ ಮತ್ತೆ ತರಬೇತಿ ನೀಡುವುದಿಲ್ಲ. ಪೊಲೀಸ್ ಪೇದೆ, ಮುಖ್ಯಪೇದೆಯಂತಹ ಸಿಬ್ಬಂದಿ ರಾತ್ರಿ ವೇಳೆ ಬಂದೂಕು ಹಿಡಿದು ಗಸ್ತು ತಿರುಗಲು ಹೋಗುತ್ತಾರೆ. ಅದೇ ರೀತಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹಾಗೂ ಮೇಲಧಿಕಾರಿಗಳ ಬಳಿ ಪಿಸ್ತೂಲ್ ಇರುತ್ತದೆ. ಅವರು ಅದನ್ನು ಬಳಸುವುದೇ ಕಡಿಮೆ. ಅಗತ್ಯಬಿದ್ದಾಗ ಮಾತ್ರ ಬಳಸುತ್ತಾರೆ.
ಆದರೆ, ಗಣ್ಯರಿಗೆ ಭದ್ರತೆ ನೀಡುಪ ಪೊಲೀಸ್ ಪೇದೆ, ಮುಖ್ಯಪೇದೆ, ಸಹಾಯಕ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಬಳಿ ಸದಾ ಪಿಸ್ತೂಲ್ ಇರುತ್ತದೆ. ಅವರಿಗೆ ಪ್ರತಿ ಆರು ತಿಂಗಳಿಗೊಮ್ಮೆ ತರಬೇತಿ ನೀಡಲಾಗುತ್ತದೆ.
ಗಣ್ಯವ್ಯಕ್ತಿಗಳ ಭದ್ರತೆ ವೇಳೆ ಎದುರಾಳಿಗಳು ದಾಳಿ ಮಾಡಿದಾಗ ಅವರ ಮೇಲೆ ಪ್ರತಿದಾಳಿ ಮಾಡಲು ಸಿಬ್ಬಂದಿ ಶಕ್ತರಾಗಿರಬೇಕು. ಈ ಹಿನ್ನೆಲೆಯಲ್ಲಿ ವಿವಿಐಪಿ ವಿಭಾಗದ ಎಲ್ಲಾ ಸಿಬ್ಬಂದಿಗೂ ಪ್ರತಿ ಆರು ತಿಂಗಳಿಗೊಮ್ಮೆ ಶಸ್ತ್ರಾಸ್ತ್ರದ ಬಗ್ಗೆ ತರಬೇತಿ ನೀಡಲಾಗುತ್ತದೆ.
ಆಯಾ ಕೇಂದ್ರಗಳಲ್ಲಿ ಹಿರಿಯ ಅಧಿಕಾರಿಗಳು ಶೂಟಿಂಗ್ ನಡೆಸುತ್ತಾರೆ. ಒಬ್ಬೊಬ್ಬ ಸಿಬ್ಬಂದಿಯೂ ಇಂತಿಷ್ಟು ಸುತ್ತು ಗುಂಡುಹಾರಿಸಬೇಕು ಹಾಗೂ ಅದನ್ನು ಸರಿಯಾಗಿ ಗುರಿಯಿಟ್ಟು ಹೊಡೆಯುವ ಬಗ್ಗೆ ಅಭ್ಯಾಸ ಮಾಡಿಸಲಾಗುತ್ತದೆ. ಸಿಬ್ಬಂದಿ ಎಷ್ಟೇ ಪ್ರವೀಣನಾದರೂ ಸಹ ಆತನಿಗೆ ಶೂಟಿಂಗ್ ತರಬೇತಿ ಕಡ್ಡಾಯ.
- ಶಾಂತ ತಮ್ಮಯ್ಯ