ವಜ್ರ ಏಕೆ ಅಮೂಲ್ಯ?
ಪ್ರಾಚೀನ ಕಾಲದಿಂದಲೂ ಜನರಿಗೆ ವಜ್ರದ ಮೇಲೆ ವಿಪರೀತ ವ್ಯಾಮೋಹ. ಆಗ ರಾಜ-ರಾಣಿಯರು ಮಾತ್ರ ವಜ್ರದ ಆಭರಣಗಳನ್ನು ಧರಿಸುತ್ತಿದ್ದರು. ವಜ್ರ ಬಹಳ ಕಠಿಣವಾಗಿರುತ್ತದೆ. ನೂರಾರು ವರ್ಷಗಳಾದರೂ ಸವೆಯದು. ಅದರ ಹೊಳಪು ಎಂದಿಗೂ ಮಸುಕಾಗದು. ಈ ಎಲ್ಲ ವೈಶಿಷ್ಟ್ಯಗಳಿರುವುದರಿಂದ ವಜ್ರ ತುಂಬಾ ಅಮೂಲ್ಯ.
ನಿಸರ್ಗದಲ್ಲಿ ದೊರೆಯುವ ವಜ್ರ ಸುಂದರವಾಗಿರುವುದಿಲ್ಲ. ಅದನ್ನು ತೆಗೆದು ನಿರ್ದಿಷ್ಟ ರೂಪ ಹಾಗೂ ಕಲಾತ್ಮಕ ಆಕಾರದಲ್ಲಿ ಕತ್ತರಿಸಬೇಕಾಗುತ್ತದೆ. ನಂತರ ಅದಕ್ಕೆ ಹೊಳಪು ಕೊಡಲಾಗುತ್ತದೆ. ಪರಿಣತ ಕುಶಲಕರ್ಮಿಗಳಿಂದ ಈ ಕೆಲಸ ಸಾಧ್ಯ. ವೇಗವಾಗಿ ತಿರುಗುವ ತಟ್ಟೆಗಳ ನೆರವಿನಿಂದ ವಜ್ರವನ್ನು ಕತ್ತರಿಸಲಾಗುತ್ತದೆ. ಹಾಗೆ ಮಾಡುವುದರಿಂದ ಅದರ ಬೆಲೆಯೂ ಹೆಚ್ಚುತ್ತದೆ.
- ಹರಳಹಳ್ಳಿ ಪುಟ್ಟರಾಜು, ಪಾಂಡವಪುರ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.