ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಸತ್ಯ ಶೋಧನೆಗೆ ಅನುಭವಗಳೇ ರಾಜಮಾರ್ಗಗಳು

Mainashree
Updated On : 15 Oct 2013, 12:12 pm

ಸ್ವಾಮಿ ವಿವೇಕಾನಂದರು ಹೈದರಾಬಾದ್‌ನಲ್ಲಿದ್ದಾಗ ಒಬ್ಬಾತನ ಇಂದ್ರಜಾಲದ ಬಗ್ಗೆ ಕೇಳಿ ತಿಳಿದ ಸ್ವಾಮೀಜಿ ಅವನನ್ನು ಭೇಟಿಯಾಗಿ ವಿದ್ಯೆಯನ್ನು ಪ್ರದರ್ಶಿಸುವಂತೆ ಕೇಳಿಕೊಂಡರು.
ಆತ 'ನಿಮಗೆ ಏನೇನು ಬೇಕೋ ಅದನ್ನೆಲ್ಲ ಚೀಟಿಗಳಲ್ಲಿ ಬರೆದುಕೊಡಿ' ಎಂದ. ಏನಾಶ್ಚರ್ಯ! ನೋಡನೋಡುತ್ತಿದ್ದಂತೆಯೇ ಆ ಮನುಷ್ಯ ಕಂಬಳಿಯೊಳಗಿಂದ ಜನರು ಬರೆದುಕೊಟ್ಟ ವಸ್ತುಗಳನ್ನೆಲ್ಲಾ ಒಂದೊಂದಾಗಿ ತೆಗೆಯಲಾರಂಭಿಸಿದ. ಇದನ್ನೆಲ್ಲಾ ಕಂಡ ಸ್ವಾಮೀಜಿ 'ನೀನು ಇದನ್ನೆಲ್ಲ ಹೇಗೆ ಮಾಡುತ್ತೀಯಾ?' ಎಂದು ಕೇಳಿದರು. ಅದಕ್ಕವನು, 'ಇದೆಲ್ಲ ಕೇವಲ ಕೈಚಳಕ ಅಷ್ಟೇ' ಎಂದು ನುಣುಚಿಕೊಂಡ. ಈ ಉತ್ತರದಿಂದ ತೃಪ್ತರಾಗದ ಸ್ವಾಮೀಜಿ, ಇದು ಕೇವಲ ಕೈಚಳಕದಿಂದ ಸಾಧ್ಯವಿಲ್ಲ ಎಂದು ಆಲೋಚಿಸತೊಡಗಿದರು.ಆ ಮನುಷ್ಯ ತೋರಿಸಿದ ಇಂದ್ರಜಾಲವೂ ಅವನು ಉತ್ಪಾದಿಸಿದ ವಸ್ತುಗಳೂ ಕೇವಲ ಮನೋಗ್ರಾಹ್ಯವಾದಂಥವು. ಅಂದರೆ ಅವು ನಿಜಕ್ಕೂ ಅಲ್ಲಿ ಇರುವುದೇ ಇಲ್ಲ. ಅಂದರೆ ಪ್ರತಿಯೊಬ್ಬ ವ್ಯಕ್ತಿಯ ಮನಸ್ಸೂ ವಿಶ್ವದ ಸಮಷ್ಟಿ ಮನಸ್ಸಿನ ಅಂಗ. ಈ ಸಮಷ್ಟಿ ಮನಸ್ಸನ್ನು ತನ್ನಿಚ್ಛೆಯಂತೆ ನಿಯಂತ್ರಿಸಿ, ಇತರರ ಮನಸ್ಸಿನಲ್ಲಿ ಇಲ್ಲದಿರುವುದನ್ನು ಕಾಣುವ, ಕೇಳುವ ಭ್ರಮೆ ಹುಟ್ಟಿಸುವಲ್ಲಿ ಆತ ಸಮರ್ಥನಾಗಿದ್ದಾನೆ.
ಮುಂದೆ ಸ್ವಾಮೀಜಿ ಅಮೆರಿಕದಲ್ಲಿ ನೀಡಿದ 'ಮನಸ್ಸಿನ ಶಕ್ತಿಗಳು' ಉಪನ್ಯಾಸದಲ್ಲಿ ಈ ಅನುಭವವನ್ನು ಪ್ರಸ್ತಾಪಿಸುತ್ತಾರೆ. ಸಂಚರಿಸುತ್ತಿದ್ದ ಕಾಲದಲ್ಲಿ ತಮಗಾದ ಅನುಭವಗಳನ್ನು ಸ್ವಾಮೀಜಿ ವಿಚಾರಮಂಥನಕ್ಕಿಳಿಸಿ ಸತ್ಯವನ್ನು ಶೋಧಿಸಿ ತತ್ತ್ವಗಳನ್ನು ಕಂಡುಕೊಂಡು ಪ್ರತಿಪಾದಿಸುತ್ತಿದ್ದ ರೀತಿಯೇ ನಮ್ಮ ಪಾಲಿಗೆ ವಿವೇಕ ರಾಜಮಾರ್ಗವಾಗಿದೆ.

- ಆನಂದ ಎಸ್.ಎನ್.
anandsn193@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement