ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಈ ಮೀನಿಗೆ ಮೂರು ಹೃದಯ!

Mainashree
Updated On : 15 Oct 2013, 5:38 am

ಇದು ಆಶ್ಚರ್ಯವಾದರೂ ನಿಜ! ಮೂರು ಹೃದಯವುಳ್ಳ ಪ್ರಾಣಿ ಕಟಲ್ ಮೀನು. ಇದು ಮೂರು ಹೃದಯಗಳನ್ನು ಒಳಗೊಂಡಿದ್ದು, ಇದರ ಎರಡು ಹೃದಯಗಳು ಅದರ ಕಿವಿರುಗಳ ಕೆಳಭಾಗದಲ್ಲಿವೆ. ಇವು ಅಶುದ್ಧ ರಕ್ತವನ್ನು ಕಿವಿರುಗಳಿಗೆ ಸರಬರಾಜು ಮಾಡುತ್ತವೆ. ಹೀಗೆ ಬಂದ ರಕ್ತದಲ್ಲಿ ಆಮ್ಲಜನಕವಿರುತ್ತದೆ. ಆಮ್ಲಜನಕವನ್ನು ಕಿವಿರುಗಳು ಹೀರಿಕೊಳ್ಳುತ್ತವೆ. ನಂತರ ರಕ್ತವು ಮೂರನೇ ಹೃದಯಕ್ಕೆ ಬರುತ್ತದೆ. ಈ ಹೃದಯವು ರಕ್ತವನ್ನು ದೇಹದ ಇತರ ಎಲ್ಲ ಭಾಗಗಳಿಗೂ ಕಳಿಸುತ್ತದೆ. ಕಟಲ್ ಮೀನಿನ ಇನ್ನೊಂದು ವಿಶೇಷವೆಂದರೆ, ಇದರ ರಕ್ತದ ಬಣ್ಣ ನೀಲಿ. ಈ ಮೀನಿನಲ್ಲಿ 'ಹೆಮೊಸಿಯಾನಿಸ್‌' ಎಂಬ ಸಂಯುಕ್ತ ಪದಾರ್ಥವಿದ್ದು, ಇದು ತಾಮ್ರದಂಶವನ್ನು ಒಳಗೊಂಡಿರುತ್ತದೆ. ಆದ್ದರಿಂದ ರಕ್ತದ ಬಣ್ಣ ನೀಲಿಯಾಗಿರುತ್ತದೆ.

- ಅರಳಕುಪ್ಪೆ ಶ್ರೀನಿವಾಸ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement