ಕೂದಲು ಬೆಳ್ಳಗಾಗುವುದೇಕೆ?
ವಯಸ್ಸಾದಂತೆ ಮನುಷ್ಯನ ಕೂದಲು ಬಿಳಿಯಾಗುವುದು ಸಹಜ. ಕೂದಲಿನ ಕಪ್ಪು ಬಣ್ಣಕ್ಕೆ ಮೆಲಾನಿನ್ ಎಂಬ ರಾಸಾಯನಿಕ ವರ್ಣದ್ರವ್ಯವೇ ಮುಖ್ಯ ಕಾರಣ. ಆದರೆ ಕೆಲವರಿಗೆ ಚಿಕ್ಕ ವಯಸ್ಸಿನಲ್ಲೇ ಕೂದಲು ಬೆಳ್ಳಗಾಗುತ್ತವೆ. ಇದಕ್ಕೆ ಅನುವಂಶೀಯತೆ, ಪೌಷ್ಟಿಕ ಆಹಾರದ ಕೊರತೆ, ಒತ್ತಡ, ಕಾಯಿಲೆ ಹಾಗೂ ಸರಿಯಾಗಿ ಕೂದಲಿನ ಪೋಷಣೆ ಮಾಡದಿರುವುದೇ ಕಾರಣ. ಇದರಿಂದ ಮೆಲಾನಿನ್ ಅಂಶ ಕಡಿಮೆಯಾಗುತ್ತದೆ.
ಕೂದಲಿನ ಬುಡದಲ್ಲಿ ಸಂಗ್ರಹವಾಗುವ ಈ ವರ್ಣದ್ರವ್ಯ ನಮ್ಮ ಕೂದಲಿಗೆ ಕಪ್ಪು ಬಣ್ಣ ನೀಡುತ್ತದೆ. ವಯಸ್ಸಾದಂತೆಲ್ಲ ಹುಟ್ಟುವ ಹೊಸ ಕೂದಲು ಈ ವರ್ಣದ್ರವ್ಯದ ಕಣಗಳನ್ನು ಕಳೆದುಕೊಳ್ಳುವುದರಿಂದ ಕೂದಲು ಬಿಳಿ ಬಣ್ಣಕ್ಕೆ ತಿರುಗುತ್ತದೆ.
- ಅರಳಕುಪ್ಪೆ ಶ್ರೀನಿವಾಸ