ಪ್ರಾರ್ಥನೆಗೆ ಒಬ್ಬ ಓದಿಗೆ ಇಬ್ಬರು ಪ್ರಯಾಣಕ್ಕೆ ಮೂವರು
ಪ್ರಾರ್ಥನೆ ಭಕ್ತ ಮತ್ತು ದೇವರ ನಡುವಿನ ಅನುಸಂಧಾನ. ಇದಕ್ಕೆ ಯಾರ ಮಧ್ಯಸ್ಥಿಕೆಯೂ ಬೇಕಾಗಿಲ್ಲ. ಓದುವಾಗ ವಿಚಾರ ವಿನಿಮಯ ಮಾಡಿ ಅರಿವು ಹಂಚಿಕೊಳ್ಳುವುದಕ್ಕೆ ಇಬ್ಬರು ಇದ್ದರೆ ಒಳ್ಳೆಯದು. ಪ್ರಯಾಣದ ಬೇಸರ ಕಳೆಯಲು ಒಬ್ಬಿಬ್ಬರಿಗಿಂತ ಮೂವರು ಇರುವುದು ಲೇಸು.