ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಬ್ಲಾಕ್ ಬೆರ್ರಿ

Mainashree
Updated On : 18 Oct 2013, 6:10 am

ವಾಹನ ಸವಾರರು ಸಂಚಾರ ನಿಯಮ ಉಲ್ಲಂಘಿಸಿದಾಗ ಪೊಲೀಸರು ದಂಡ ವಿಧಿಸುವುದು ಸಹಜ. ಅದನ್ನು ಕಾಯಲೆಂದು ಪೊಲೀಸರು ಸಣ್ಣಪುಟ್ಟ ಸಿಗ್ನಲ್‌ಗಳನ್ನು ಹೊರತುಪಡಿಸಿ ಬಹುತೇಕ ಎಲ್ಲಾ ಸಿಗ್ನಲ್‌ಗಳಲ್ಲೂ ಇರುತ್ತಾರೆ.
ಒಬ್ಬ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್, ಸಹಾಯಕ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್, ಮುಖ್ಯಪೇದೆ ಹಾಗೂ ಪೇದೆ ಒಂದು ವೃತ್ತದಲ್ಲಿ ಇರುತ್ತಾರೆ. ವೃತ್ತ ದೊಡ್ಡದಿದ್ದಲ್ಲಿ ಹೆಚ್ಚಿನ ಮಂದಿ ಇರುತ್ತಾರೆ.
ಹೆಲ್ಮೆಟ್ ಧರಸದಿರುವವರನ್ನು, ಸೀಟ್ ಬೆಲ್ಟ್ ಹಾಕದಿರುವವರು, ಝೀಬ್ರಾ ಪಟ್ಟಿ ಮೇಲೆ ವಾಹನ ನಿಲ್ಲಿಸುವವರು, ಸಿಗ್ನಲ್‌ನಲ್ಲಿ ಕೆಂಪು ದೀಪವಿದ್ದರೂ ವಾಹನ ಚಾಲನೆ ಮಾಡಿಕೊಂಡು ಹೋಗುವುದು ಸೇರಿದಂತೆ ವಿವಿಧ ರೀತಿಯ ಸಂಚಾರ ನಿಯಮ ಉಲ್ಲಂಘಿಸುವವರನ್ನು ಗುರುತಿಸಿ ಸಂಚಾರ ಪೊಲೀಸರು ದಂಡ ವಿಧಿಸುತ್ತಾರೆ. ಈ ಹಿಂದೆ ದಂಡ ವಿಧಿಸುವಾಗ ರಸೀತಿ ನೀಡುತ್ತಿದ್ದರು. ಅದಕ್ಕಾಗಿ ಒಂದು ಪುಸ್ತಕ ಸದಾ ಪೊಲೀಸರ ಕೈಯಲ್ಲಿ ಇರುತ್ತಿತ್ತು. ಹಳೆ ಪದ್ಧತಿಯಂತೆ ರಸೀತಿ ಕೆಳಗೆ ಕಾರ್ಬನ್ ಹಾಕಿ ದಂಡ ಹಾಕಿದ ಒಂದು ರಸೀತಿಯನ್ನು ಸವಾರನಿಗೆ ನೀಡುತ್ತಿದ್ದರು. ಮತ್ತೊಂದನ್ನು ಪೊಲೀಸರು ತಮ್ಮ ಬಳಿ ಇಟ್ಟುಕೊಳ್ಳುತ್ತಿದ್ದರು.
ಆದರೆ, ಸಂಚಾರ ಪೊಲೀಸರು ಈಗ ಆ ಹಳೆಯ ಪದ್ಧತಿಗೆ ಬ್ರೇಕ್ ಹಾಕಿದ್ದಾರೆ. ಪ್ರತಿ ಪೊಲೀಸ್ ಠಾಣೆಯಲ್ಲೂ ಬ್ಲಾಕ್ ಬೆರ್ರಿಗಳು ಬಂದಿವೆ. ಎಲ್ಲಾ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್‌ಗಳು ಅದನ್ನು ಬಳಸುತ್ತಾರೆ. ಬ್ಲಾಕ್‌ಬೆರ್ರಿಯಲ್ಲಿ ವಾಹನದ ಸಂಖ್ಯೆಯನ್ನು ನಮೂದಿಸುತ್ತಾರೆ. ನಂತರ ತಮ್ಮ ಬಳಿ ಇರುವ ಸಣ್ಣ ಪ್ರಿಂಟರ್‌ನಿಂದ ದಂಡ ಕಟ್ಟಿದ್ದಕ್ಕೆ ರಸೀತಿ ನೀಡಿ ಕಳುಹಿಸುತ್ತಾರೆ. ಕೆಲವೊಮ್ಮೆ ನ್ಯಾಯಾಲಯಕ್ಕೆ ಹೋಗುವ ಪರಿಸ್ಥಿತಿ ಬಂದಾಗ ರಸೀತಿಯು ಆರೋಪಿಯ ಸಹಾಯಕ್ಕೆ ಬರುತ್ತದೆ.

- ಶಾಂತ ತಮ್ಮಯ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments