ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಸ್ವಾಭಿಮಾನಿಯೇ ದೇಶದ ನಿಜವಾದ ಆಸ್ತಿ!

Mainashree
Updated On : 18 Oct 2013, 6:14 am

ಭಾರತೀಯರು ಮುಗಿಬಿದ್ದು ಗಳಿಸಬೇಕಾದ್ದು ಹಣವನ್ನಲ್ಲ; ಆತ್ಮಗೌರವವನ್ನು! ಶತಶತಮಾನಗಳಿಂದ ದಾರಿದ್ರ್ಯದ ಭಾರಹೊತ್ತು ಬಾಗಿದ ಬೆನ್ನುಳ್ಳ ಭಾರತೀಯರಿಗೆ ತಲೆಯೆತ್ತಿ ನಿಲ್ಲುವ, ನಡೆಯುವುದನ್ನು ಕಲಿಸುವ ಶಿಕ್ಷಣವಾಗಲಿ, ಸಾಮಾಜಿಕ ವ್ಯವಸ್ಥೆಯಾಗಲಿ ಇಲ್ಲದಿರುವುದು ವಿಷಾದ ತರಿಸುತ್ತದೆ. ನಮ್ಮ ವ್ಯಕ್ತಿತ್ವಕ್ಕೆ ಚ್ಯುತಿಯಾದ ಸಂದರ್ಭದಲ್ಲೂ ಪುರುಷಸಿಂಹರಾಗಿ ಭಾರತೀಯರು ಕೆರಳಿ ನಿಲ್ಲದಿದ್ದರೆ ಭಗವದ್ಗೀತೆ ಹುಟ್ಟಿದ ನಾಡಿನಲ್ಲಿ ಕ್ಲೈಬ್ಯತನ ಆವರಿಸಿದಂತಾಗುವುದಿಲ್ಲವೆ? ಪ್ರತಿಯೊಬ್ಬ ಭಾರತೀಯನೂ ಗಳಿಸಬೇಕಾದುದು ಆತ್ಮಗೌರವವನ್ನು; ಅದರ ರಕ್ಷಣೆಯ ಅಭಿಮಾನವನ್ನು!
ಒಮ್ಮೆ ಸ್ವಾಮೀಜಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ, ಒಬ್ಬ ಬಂಗಾಳಿ ರೈಲ್ವೆ ನೌಕರನ ಜತೆ ಮಾತನಾಡುತ್ತಿದ್ದರು. ಅಲ್ಲಿಗೆ ಬಂದ ಐರೋಪ್ಯ ಟಿಕೆಟ್ ಕಲೆಕ್ಟರ್ ಟಿಕೆಟ್ ಚೆಕ್ ಮಾಡಿದ. ಆ ನೌಕರನ ಬಳಿ ಟಿಕೆಟ್ ಇಲ್ಲದ್ದರಿಂದ 'ಇಳಿಯಯ್ಯಾ ಕೆಳಗೆ' ಎಂದು ಒರಟಾಗಿ ಹೇಳಿದ. ಆಗ ಆ ಬಂಗಾಳಿ 'ನಾನೊಬ್ಬ ರೈಲ್ವೆ ನೌಕರ, ನಾನು ಕೆಳಗಿಳಿಯಬೇಕೆಂಬುದಕ್ಕೆ ಯಾವ ಕಾನೂನೂ ಇಲ್ಲ' ಎಂದು ಸೌಮ್ಯವಾಗಿಯೇ ಪ್ರತಿಭಟಿಸಿದ. ಆಗ ಟಿ.ಸಿಗೆ ಈ ಭಾರತೀಯ ತನಗೇ ಎದುರುತ್ತರ ಕೊಡುತ್ತಾನಲ್ಲ ಎಂದು ಸಿಟ್ಟಿಗೆದ್ದ. ಇದನ್ನು ಕಂಡು ಸ್ವಾಮೀಜಿ ಮಧ್ಯಪ್ರವೇಶಿಸಿದರು. ಆಗ ಆ ಟಿ.ಸಿ ಸ್ವಾಮೀಜಿ ಕಡೆ ತಿರುಗಿ 'ತುಮ್ ಕಾಹೆ ಬಾತ್ ಕರ್‌ತೇ ಹೋ?' ಎಂದು ಹಿಂದಿಯಲ್ಲಿ ಹೇಳಿದ. ತುಮ್ ಎಂಬ ಪದ ಕಿವಿಗೆ ಬೀಳುತ್ತಿದ್ದಂತೆಯೇ ಕೆರಳಿನಿಂತ ಸ್ವಾಮೀಜಿ ಇಂಗ್ಲಿಷ್‌ನಲ್ಲಿ ದಬಾಯಿಸಿದರು. ಆಗ ತಣ್ಣಗಾದ ಟಿ.ಸಿ. 'ಕ್ಷಮಿಸಬೇಕು, ನನಗೆ ಹಿಂದಿ ಚೆನ್ನಾಗಿ ಬರುವುದಿಲ್ಲ' ಎನ್ನಲು ಸ್ವಾಮೀಜಿ ಮತ್ತಷ್ಟು ಜೋರಾದರು. ಪರಿಸ್ಥಿತಿ ತನಗೆದುರಾದುದನ್ನು ಕಂಡು ಟಿ.ಸಿ. ಅಲ್ಲಿಂದ ಕಾಲ್ಕಿತ್ತ.

- ಆನಂದ ಎಸ್.ಎನ್.
anandsn193@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement