ನದಿಯ ನಾಚಿಕೆ
ವೀಚೀಕ್ಷೋಭಸ್ತನಿತವಿಹಗಶ್ರೇಣಿಕಾಂಚೀಗುಣಾಯಾ
ಸ್ಸಂಸರ್ಪಂತ್ಯಾಸ್ಸ್ಖಲಿತ ಸುಭಗಂ ದರ್ಶಿತಾವರ್ತನಾಭೇಃ
ನಿರ್ವಿಂಧ್ಯಾಯಾಃ ಪಥಿ ಭವ ರಸ್ಯಾಭ್ಯಂತರಸ್ಸನ್ನಿಪತ್ಯ
ಸ್ತ್ರೀಣಾಮಾದ್ಯಂ ಪ್ರಣಯವಚನಂ ವಿಭ್ರಮೋ ಹಿ ಪ್ರಿಯೇಷುಃ
ಇದು ಕಾಳಿದಾಸನ 'ಮೇಘದೂತ'ದಲ್ಲಿ ಬರುವ ಶ್ಲೋಕ. ಕುಬೇರನ ಶಾಪ ಪಡೆದ ಯಕ್ಷ ಪ್ರೇಯಸಿಯ ನೆನಪಿನಲ್ಲಿ ವಿರಹತಪ್ತನಾಗಿ ರಾಮಗಿರಿಯಲ್ಲಿದ್ದಾನೆ. ಅಲಕಾವತಿಯಲ್ಲಿರುವ ಪತ್ನಿಗೆ ಮೋಡದ ಮೂಲಕ ಸಂದೇಶ ಕಳುಹಿಸುತ್ತಿದ್ದಾನೆ. ವಿಶೇಷ ಎಂದರೆ, ರಾಮಗಿರಿಯಿಂದ ಅಲಕಾವತಿಯವರೆಗೆ ಸಾಗುವ ದಾರಿಯ ಸಂಪೂರ್ಣ ಸ್ಪಷ್ಟ ಚಿತ್ರಣವನ್ನು, ಆಕಾಶದಿಂದ ಹೇಗೆ ಕಾಣಿಸಬಹುದೋ ಹಾಗೆ ಬರೆದಿರುವುದು.
'ಮುಂದೆ ಸಾಗುತ್ತಿದ್ದಂತೆ ನಿನಗೆ ಗೋದಾವರೀ ನದಿ ಎದುರಾಗುತ್ತಾಳೆ. ಕಾಣಿಸಿಕೊಂಡ ಕೂಡಲೇ ಆಕೆಯ ತೆರೆಗಳ ಕ್ಷೋಭೆ ನಿನ್ನ ಗಮನಕ್ಕೆ ಬರುತ್ತದೆ. ಆಕೆಯ ಒಡಲಲ್ಲಿ ಆಡುವ ಹಂಸಪಕ್ಷಿಗಳನ್ನು ಕಾಣಬಹುದು. ಬಂಡೆಗಳಿಗೆ ತೆರೆಗಳು ಅಪ್ಪಳಿಸುವಾಗ ಆಗುವ ಗೆಜ್ಜೆಯ ಶಬ್ದವನ್ನೂ ನೀನು ಕೇಳಬಹುದು. ಅಲ್ಲಲ್ಲಿ ತರುಣಿಯರ ನಾಭಿಗಳಂತೆ ಸುಂದರವಾಗಿ ಕಾಣಿಸಿ ಸೆಳೆಯುವ ಸುಳಿಗಳೂ ಇವೆ. ಆಕೆಯ ಈ ವರ್ತನೆಗೆ ನೀನು ಅಸಮಾಧಾನ ತೋರಿಸದೆ ಸಂತುಷ್ಟಚಿತ್ತನಾಗಿರು. ಯಾಕೆಂದರೆ, ತರುಣಿಯರು ತಮ್ಮ ಒಲವನ್ನು ಮಾತಿನಲ್ಲಿ ಹೇಳಿಕೊಳ್ಳುವುದಿಲ್ಲ. ಅವರ ವರ್ತನೆಯೇ ಮಾತಿಗಿಂತಲೂ ಮೊದಲು ಅದನ್ನು ಹೇಳುತ್ತದೆ'
ಗೋದಾವರೀ ನದಿಯ ವರ್ಣನೆಯೂ, ಪ್ರಿಯಕರನೆದುರು ನಾಚಿಕೊಂಡು ಬರುವ ಪ್ರೇಯಸಿಯ ವರ್ಣನೆಯೂ ಇಲ್ಲಿ ಒಂದಕ್ಕೊಂದು ಸಮ್ಮಿಲಿತವಾಗಿರುವುದನ್ನು ಗಮನಿಸಿ. ಹಾಗೆಯೇ ಕಾಳಿದಾಸನ ಚಿತ್ರಕಶಕ್ತಿಯನ್ನು ಕೂಡ.
- ಹರಿಹರ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.