ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಚೀನಾದಲ್ಲೊಂದು ಛಲದ ಪ್ರಸಂಗ!

Mainashree
Updated On : 21 Oct 2013, 6:29 am

ಸ್ವಾಮಿ ವಿವೇಕಾನಂದರ ಅಮೆರಿಕ ಪ್ರವಾಸದ ಒಟ್ಟು ದೂರ ಸುಮಾರು ಎಂಟು ಸಾವಿರ ಮೈಲಿಗಳು. ಪ್ರಯಾಣದ ಅವಧಿ ಸುಮಾರು ಎರಡು ತಿಂಗಳು! ಈ ದೀರ್ಘ ಪ್ರಯಾಣದುದ್ದಕ್ಕೂ ಸ್ವಾಮೀಜಿ ಅನೇಕ ನಗರಗಳನ್ನು ಸಂದರ್ಶಿಸಿದರು. ಹಾಂಕಾಂಗ್‌ನಲ್ಲಿ ಸ್ವಾಮೀಜಿಗೆ ಚೀನಿಯರ ಬೌದ್ಧ ಮಠವೊಂದನ್ನು ಸಂದರ್ಶಿಸಬೇಕೆಂಬ ಉತ್ಕಟೇಚ್ಛೆಯಿತ್ತು. ಅವರು ದುಭಾಷಿಗೆ ಕೇಳಿದರು. 'ವಿದೇಶಿಯರಿಗೆ ಆ ಮಠಗಳೊಳಗೆ ಪ್ರವೇಶ ನಿಷಿದ್ಧವಿರುವುದರಿಂದ ಹೋಗುವುದು ಸಾಧ್ಯವೇ ಇಲ್ಲ' ಎಂದ. 'ಒಂದುವೇಳೆ ಹೋಗಿಬಿಟ್ಟರೆ, ಏನಾಗುತ್ತದೆ!' ಎಂದರು. 'ಹಾಗೆ ಹೋದವರಿಗೆ ಒದೆ ಬೀಳುವುದು ಖಂಡಿತ!' ಎಂದ.
ಇದಕ್ಕೆಲ್ಲ ಸ್ವಾಮೀಜಿ ನಿರಾಶರಾಗದೆ ಬೌದ್ಧ ಮಠದ ಬಳಿ ಬಂದರು. ಮಠದೊಳಗೆ ಹೋಗುತ್ತಿದ್ದಂತೆ ಮೂವರು ಬಲಿಷ್ಠ ಭಿಕ್ಷುಗಳು ದೊಣ್ಣೆ ಹಿಡಿದು ಇವರತ್ತಲೇ ಬರುತ್ತಿದ್ದಾರೆ! ಇದನ್ನು ಕಂಡು ಉಳಿದವರೆಲ್ಲ ಪಲಾಯನ ಮಾಡಿದರು. ಮಾರ್ಗದರ್ಶಿ ಓಡುವುದಕ್ಕೆ ಮೊದಲು 'ಹಿಂದೂ ಯೋಗಿ ಎನ್ನುವುದಕ್ಕೆ ಚೀನೀ ಭಾಷೆಯಲ್ಲಿ ಏನೆನ್ನುತ್ತಾರೆ?' ಎಂದರು ಸ್ವಾಮೀಜಿ. ಹತ್ತಿರ ಬರುತ್ತಿದ್ದ ಭಿಕ್ಷುಗಳಿಗೆ ಸ್ವಾಮೀಜಿ 'ಹಿಂದೂ ಯೋಗಿ' ಎಂದು ಚೀನೀ ಭಾಷೆಯಲ್ಲಿ ಕೂಗಿ ಹೇಳಿದರು. ತಕ್ಷಣ ಭಿಕ್ಷುಗಳು ದೊಣ್ಣೆಗಳನ್ನು ಬಿಸಾಕಿ ಸ್ವಾಮೀಜಿ ಕಾಲಿಗೆ ಬಿದ್ದರು. ಬಳಿಕ ಪೂಜ್ಯಭಾವದಿಂದ ಕೈಜೋಡಿಸಿ 'ಕಬಚ್‌' ಎಂದರು. ಕಬಚ್ ಎಂದರೆ ಕವಚ. ತಮಗೆ ತಾಯಿತ, ಯಂತ್ರ ಬೇಕೆಂದು ಕೇಳಿದರು. ಸ್ವಾಮೀಜಿ ತಮ್ಮ ಬಳಿ ಇದ್ದ ಕಾಗದವನ್ನು ಅನೇಕ ಚೂರುಗಳನ್ನಾಗಿ ಹರಿದು 'ಓಂ' ಎಂದು ಬರೆದು ಮಡಿಸಿ ಕೊಟ್ಟರು. ಭಿಕ್ಷುಗಳು ಅವನ್ನು ಭಕ್ತಿಭಾವದಿಂದ ಸ್ವೀಕರಿಸಿ, ಸ್ವಾಮೀಜಿಯನ್ನು ಮಠದೊಳಗೆ ಕರೆದುಕೊಂಡು ಹೋಗಿ ತೋರಿಸಿದರು.

- ಆನಂದ ಎಸ್.ಎನ್.
anandsn193@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement