ಪೆನ್ ಆವಿಷ್ಕಾರ
ನಾಗರಿಕತೆಯ ವಿಕಾಸಕ್ಕೆ ಪೆನ್ ಅತ್ಯಂತ ದೊಡ್ಡ ಕೊಡುಗೆ ನೀಡಿದೆ. ಪೆನ್ ಪದ ಲ್ಯಾಟಿನ್ ಭಾಷೆಯ 'ಪೆನ್ನ' ಶಬ್ದದಿಂದ ಬಂದಿದೆ. ಪೆನ್ನ ಎಂದರೆ ಗರಿ ಎಂದರ್ಥ. ಈಜಿಪ್ತ್ ಜನರು ಪೆನ್ನನ್ನು ಮೊದಲು ತಯಾರಿಸಿದರೆಂದು ಭಾವಿಸಲಾಗಿದೆ. ಅವರು ಮರದ ಕಡ್ಡಿಗೆ ತಾಮ್ರದ ನಿಬ್ ಸಿಕ್ಕಿಸಿ ಬರೆಯುತ್ತಿದ್ದರು. ಈಗ 4 ಸಾವಿರ ವರ್ಷಗಳ ಹಿಂದೆ ಪೆನ್ನಿಂದ ಬರೆಯುವ ಪದ್ಧತಿ ಗ್ರೀಸ್ನಲ್ಲಿ ಆರಂಭವಾಯಿತು. ಗ್ರೀಕರು ದಂತದ ಪೆನ್ನುಗಳಿಂದ ಮೇಣದ ಮೇಲೆ ಬರೆಯುತ್ತಿದ್ದರು. 1780ರಲ್ಲಿ ಇಂಗ್ಲೆಂಡ್ನಲ್ಲಿ ಸ್ಟೀಲ್ ಪೆನ್ಗಳನ್ನು ತಯಾರಿಸಲಾಯಿತು. 1884ರಲ್ಲಿ ವಾಟರ್ಮನ್ ಮೊದಲ ಫೌಂಟನ್ ಪೆನ್ ತಯಾರಿಸಿದ. ಇದರ ನಿಬ್ 14 ಕ್ಯಾರೆಟ್ ಚಿನ್ನದಿಂದ ಮಾಡಲಾಗಿತ್ತು. 20ನೇಯ ಶತಮಾನದಲ್ಲಿ ಬಾಲ್ಪಾಯಿಂಟ್ ಪೆನ್ ಅಭಿವೃದ್ಧಿಪಡಿಸಲಾಯಿತು.
- ಹರಳಹಳ್ಳಿ ಪುಟ್ಟರಾಜು
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.