ಬೈಟುಕಾಫಿ

ಬಣ್ಣದ ಬಸಿರು

ಬಣ್ಣಗಳಲ್ಲಿ ಬಹಳ ಗುಟ್ಟಿದೆ. ಆ ಗುಟ್ಟನ್ನು ಅರಿತರೆ ಗರ್ಭಿಣಿಗೂ ಬಹಳ ಲಾಭವಿದೆ....

ಗರ್ಭಿಣಿಯರಿಗೆ ಒಂದೆರಡು ಮಾನಸಿಕ ತಳಮಳಗಳು ಕಾಡುವುದಿಲ್ಲ. ನಿರುತ್ಸಾಹ, ಭಾವನೆಗಳಲ್ಲಿ ವ್ಯತ್ಯಾಸಗಳು, ಅತಿ ರಕ್ತದೊತ್ತಡ ಹೀಗೆ ಏನೇನೋ. ಇಂಥದ್ದಕ್ಕೆ ಯೋಗ್ಯ ಔಷಧಗಳೂ ಇಲ್ಲ. ಹೀಗಾಗಿ, ವರ್ಣ ಥೆರಪಿ ಅತ್ಯಮೂಲ್ಯ ದಾರಿ...

ಬಣ್ಣಗಳಲ್ಲಿ ಬಹಳ ಗುಟ್ಟಿದೆ. ಆ ಗುಟ್ಟನ್ನು ಅರಿತರೆ ಗರ್ಭಿಣಿಗೂ ಬಹಳ ಲಾಭವಿದೆ. ಬೆಂಗಳೂರಿನ 'ದಿ ಕ್ರೆಡಲ್' ಆಸ್ಪತ್ರೆ ಗರ್ಭಿಣಿಯರಿಗೆ ವರ್ಣ ಥೆರಪಿ ಕೊಟ್ಟು ಪರಮಾದ್ಭುತ ಪರಿಣಾಮವನ್ನೇ ಕಂಡುಕೊಂಡಿದೆ. ಪ್ರಸವಕ್ಕೂ ಮುನ್ನ ಕಾಡುವ ಉದ್ವೇಗ, ಒತ್ತಡಗಳನ್ನು ಈ ಥೆರಪಿಯಿಂದ ಹೇಳಹೆಸರಿಲ್ಲದೆ ನಿರ್ನಾಮ ಮಾಡುತ್ತದೆ.
ಗರ್ಭಿಣಿಯರಿಗೆ ಒಂದೆರಡು ಮಾನಸಿಕ ತಳಮಳಗಳು ಕಾಡುವುದಿಲ್ಲ. ನಿರುತ್ಸಾಹ, ಭಾವನೆಗಳಲ್ಲಿ ವ್ಯತ್ಯಾಸಗಳು, ಅತಿ ರಕ್ತದೊತ್ತಡ ಹೀಗೆ ಏನೇನೋ. ಇಂಥದ್ದಕ್ಕೆ ಯೋಗ್ಯ ಔಷಧಗಳೂ ಇಲ್ಲ. ಹೀಗಾಗಿ, ವರ್ಣ ಥೆರಪಿ ಅತ್ಯಮೂಲ್ಯ ದಾರಿ. ಗರ್ಭಿಣಿಯರು ದೈನಂದಿನ ಕ್ರಿಯೆಗಳ ಜತೆಗೆ ಇದನ್ನು ಅಳವಡಿಸಿಕೊಳ್ಳಬೇಕು.
ಕಿತ್ತಳೆ ಬಣ್ಣ ವಂಶಾಭಿವೃದ್ಧಿಗೆ ಸಂಬಂಧಿಸಿದ ಅಂಗಗಳೊಂದಿಗೆ ಸಂಪರ್ಕ ಹೊಂದಿದೆ. ಇದು ಲೈಂಗಿಕ ಶಕ್ತಿಯ ಕೇಂದ್ರವಾಗಿದ್ದು ಲೈಂಗಿಕ ಉದ್ವೇಗಗಳು ಮತ್ತು ಅನುಭವಗಳಿಗೆ ಆಧಾರವಾಗಿದೆ. ಇದು ಶಕ್ತಿದಾಯಕ ವರ್ಣ ಮತ್ತು ಶರೀರವನ್ನು ಬೆಚ್ಚಗಿಡುತ್ತದೆ. ಗರ್ಭಿಣಿ ನಿರಾಸಕ್ತಳಾದಾಗ, ಉದಾಸೀನಳಾದಾಗ ಈ ಬಣ್ಣ ನೋಡುವುದರಿಂದ ಉತ್ಸಾಹ ವೃದ್ಧಿಸುತ್ತದೆ. ಹೀಗಾಗಿ, ಮನೆಯ ಒಂದು ಗೋಡೆಗೆ ಕಿತ್ತಳೆ ಬಣ್ಣ ಬಳಿಯಬಹುದು. ಹಸಿರು ಲವಲವಿಕೆಯ ಬಣ್ಣ. ಪ್ರಶಾಂತತೆಯನ್ನು ಪ್ರತಿನಿಧಿಸುತ್ತದೆ. ಗರ್ಭಿಣಿಗೆ ಶಾಂತ ಪರಿಸರ ಮತ್ತು ಮನಸ್ಸನ್ನು ಸಮಾಧಾನಗೊಳಿಸಲು ಈ ವರ್ಣ ಸಹಾಯಕ.
ನೀಲಿ ಬಣ್ಣ ಮನಸ್ಸಿನ ಮೇಲೆ ಶಾಂತ ಪ್ರಭಾವ ಬೀರುತ್ತದೆ. ಇದರಿಂದ ಗರ್ಭಿಣಿ ನೆಮ್ಮದಿಯಿಂದಿರಲು ಸಾಧ್ಯವಾಗುತ್ತದೆ. ಗರ್ಭಿಣಿ ಮಲಗುವ ಕೋಣೆಯಲ್ಲಿ ನೀಲಿ ಬಣ್ಣದ ಹೂದಾನಿ, ನೀಲಿ ಹೂವನ್ನು ಇಟ್ಟುಕೊಳ್ಳುವುದರಿಂದ ಮನಸ್ಸೂ ಅರಳಿಕೊಳ್ಳುತ್ತದೆ. ಉಳಿದ ಚಿಕಿತ್ಸೆಯ ಜತೆಜತೆಗೆ ಕೆಲವು ಸಂದರ್ಭಗಳಲ್ಲಿ ವರ್ಣ ಥೆರಪಿ ನೆಮ್ಮದಿ, ನಿರಾಳತೆಯನ್ನು ನೀಡುವುದಂತೂ ಖಚಿತ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ, ಮೊ. 7259708385.

ಅನಾದಿ ಚಿಕಿತ್ಸೆ
ವೈಜ್ಞಾನಿಕ ಸಂಶೋಧನೆಗಳು 'ಬಣ್ಣ ಮನುಷ್ಯನ ಬದುಕು ಮತ್ತು ಆರೋಗ್ಯ, ನೆಮ್ಮದಿಯ ಮೇಲೆ ಪ್ರಭಾವ ಬೀರುತ್ತದೆ' ಎಂಬುದನ್ನು ಸಾಬೀತುಪಡಿಸಿದೆ. ಒಬ್ಬ ವ್ಯಕ್ತಿ ಐದು ನಿಮಿಷ ಒಂದು ವರ್ಣದ ಪ್ರಭಾವದಲ್ಲಿದ್ದರೆ ಆತನ ಶಾರೀರಿಕ ಮತ್ತು ಮಾನಸಿಕ ಸ್ಥಿತಿಯಲ್ಲಿ ಬದಲಾವಣೆ ಕಂಡುಬರುತ್ತದೆ ಎಂಬುದು ಸಂಶೋಧನೆಗಳಿಂದ ತಿಳಿದುಬಂದಿದೆ. ಈ ವರ್ಣ ಚಿಕಿತ್ಸೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಬಣ್ಣಗಳ ಸಾಂಕೇತಿಕತೆಯ ಕಲ್ಪನೆ ಜಗತ್ತಿನ ಎಲ್ಲ ಪ್ರಾಚೀನ ನಾಗರಿಕತೆಗಳಲ್ಲೂ ಕಂಡುಬಂದಿದೆ. <

ಭಾವನೆಯ ಪ್ರತಿಬಿಂಬ
 ವರ್ಣಗಳ ಮೂಲಕ ಅನೇಕ ಭಾವನೆಗಳನ್ನೂ ಸೃಷ್ಟಿಸಬಹುದು. ಬಣ್ಣಬಣ್ಣದ ಹೂಗಳ ಸುಂದರ ತೋಟವನ್ನು ನೋಡಿದಾಗ, ಒಮ್ಮೆಲೇ ಶಕ್ತಿ ಮತ್ತು ವಿಶ್ರಾಂತಿ ಉಂಟಾದಂತೆ ಆಗುತ್ತದೆ. ಆಕೆ ಧರಿಸುವ ಉಡುಪಿನ ಬಣ್ಣ, ಬಿಂದಿ, ಕೇಶಾಲಂಕಾರಗಳು, ಉಗುರಿನ ಬಣ್ಣ ಎಲ್ಲವೂ ಆಕೆಯ ಭಾವನೆಯನ್ನು ಪ್ರತಿಬಿಂಬಿಸುತ್ತವೆ.

ಆತ್ಮಹತ್ಯೆಯೇ ನಿಂತಿತು!
ಲಂಡನ್ನ ಬ್ಲ್ಯಾಕ್ ಫ್ರೆಯರ್ ಸೇತುವೆಗೆ ಹೆಸರೇ ಸೂಚಿಸುವಂತೆ ಕಪ್ಪು ಬಣ್ಣ ಬಳಿಯಲಾಗಿತ್ತು. ಆಗ ಸೇತುವೆಯ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಿತ್ತು. ಆತ್ಮಹತ್ಯೆಗೆ ಬಣ್ಣ ಕಾರಣವಾಗಿರಬಹುದೆಂದು ಶಂಕಿಸಿದ ತಜ್ಞರು, ಸೇತುವೆಗೆ ಹಸಿರು ಬಣ್ಣ ಬಳಿಯಲು ಸೂಚಿಸಿದರು. ಅಚ್ಚರಿಯೆಂಬಂತೆ, ಆ ಬಳಿಕ ಅಲ್ಲಿ ಒಂದೇ ಒಂದು ಆತ್ಮಹತ್ಯೆಯೂ ನಡೆದಿಲ್ಲವಂತೆ! ಇದು ಬಣ್ಣಗಳ ವೈಶಿಷ್ಟ್ಯ.

- ಡಾ. ಪೂರ್ಣಿಮಾ ರಾಮಕೃಷ್ಣ
 ಸ್ತ್ರೀರೋಗ ತಜ್ಞರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!