ಮಾಡಹಾಗಲ
ಮಾಡಹಾಗಲ ಕಾಯಿ ಮಾಮೂಲಿ ಹಾಗಲಕಾಯಿಯನ್ನೇ ಹೋಲುವು ದಾದರೂ ಇದರ ರುಚಿ ಹಾಗಲಕಾಯಿ ಯಂತೆ ಕಹಿಯಾಗಿರುವುದಿಲ್ಲ.
- ಮಾಡಹಾಗಲ ಕಾಯಿ ಮಾಮೂಲಿ ಹಾಗಲಕಾಯಿಯನ್ನೇ ಹೋಲುವು ದಾದರೂ ಇದರ ರುಚಿ ಹಾಗಲಕಾಯಿ ಯಂತೆ ಕಹಿಯಾಗಿರುವುದಿಲ್ಲ. ಇದರ ಮುಳ್ಳು ಕೂಡ ತುಂಬಾ ಚಿಕ್ಕದಾಗಿದ್ದು ಆಕಾರ ಕೂಡ ಚಿಕ್ಕದು.
- ಮಾಡಹಾಗಲ ಕಾಡಿನ ತರಕಾರಿ. ಇದನ್ನು ಮನೆಯಂಗಳದಲ್ಲಿ ನೆಟ್ಟು ಬೆಳೆಸುತ್ತಿರಲಿಲ್ಲ. ಕಾಡಿನಿಂದ ತಂದು ಅಡುಗೆಯಲ್ಲಿ ಬಳಸುತ್ತಿದ್ದರು. ಒಮ್ಮೆ ಇದನ್ನು ನೆಟ್ಟರೆ ಸಾಕು ಪ್ರತಿವರ್ಷ ಮಳೆಗಾಲದಲ್ಲಿ ಚಿಗುರಿ ಕಾಯಿ ಬಿಡುತ್ತಿರುತ್ತದೆ.
- ಇದರ ಬಳ್ಳಿ ಬೇಸಿಗೆಯಲ್ಲಿ ಒಣಗಿದಂತೆ ಕಂಡರೂ ಬುಡದ ಬೇರು ಜೀವಂತ ವಾಗಿರುತ್ತದೆ. ಹಾಗಾಗಿ ಮಳೆನೀರು ಬಿದ್ದ ತಕ್ಷಣ ಚಿಗುರಿ ಹತ್ತಿರದ ಮರಕ್ಕೆ ಹಬ್ಬಿ ಕೊಂಡು ಕಾಯಿ ಬಿಡುತ್ತದೆ. ಮಾಡಹಾಗಲಿನ ಅಡುಗೆ ಹೆಚ್ಚು ರುಚಿ.
- ಈಗ ಇದನ್ನು ಆರ್ಥಿಕ ಬೆಳೆಯಾಗಿ ಹೊಲಗಳಲ್ಲಿ ಬೆಳೆಸುತ್ತಿದ್ದಾರೆ. ಮಾಡಹಾಗಲ ತುಂಬಾ ಸುಕ್ಷ್ಮವಾದ ಬಳ್ಳಿ. ಹಾಗಾಗಿ ನಾವು ಹೊಲದಲ್ಲಿ, ಹಿತ್ತಲಲ್ಲಿ ನೆಟ್ಟು ಬೆಳೆಸಿದರೆ ಇಳುವರಿ ಸ್ವಲ್ಪ ಕಡಿಮೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.