ಕಾಸು ಸಂದೇಶ
ಇನ್ನು ಮುಂದೆ ನೀವು ಮನಿ ಆರ್ಡರ್ ಇನ್ನೂ ಬಂದಿಲ್ಲ ಎಂದು ತಲೆ ಮೇಲೆ ಕೈ ಇಟ್ಟುಕೊಂಡು ಕುಳಿತುಕೊಳ್ಳುವಂತಿಲ್ಲ....
ಇನ್ನು ಮುಂದೆ ನೀವು ಮನಿ ಆರ್ಡರ್ ಇನ್ನೂ ಬಂದಿಲ್ಲ ಎಂದು ತಲೆ ಮೇಲೆ ಕೈ ಇಟ್ಟುಕೊಂಡು ಕುಳಿತುಕೊಳ್ಳುವಂತಿಲ್ಲ.
ಕಾರಣ ಇದೀಗ ಮನಿ ಆರ್ಡರ್ ಕಳುಹಿಸುವುದು ಮತ್ತು ಪಡೆದುಕೊಳ್ಳುವುದು ಕೇವಲ ಮೊಬೈಲ್ನಲ್ಲಿ ಎಂಎಸ್ಎಸ್ ಕಳುಹಿಸಿದಷ್ಟೇ ಸುಲಭ. ಮೆಸೇಜ್ ಸೆಂಡ್ ಆದ ತಕ್ಷಣವೇ ಡೆಲಿವರಿ ರಿಪೋರ್ಟ್ ತೋರಿಸುವಂತೆ ನಿಮ್ಮ ಕೈಗೆ ಮನಿ ಆರ್ಡರ್ ಸೇರಲಿದೆ.
ಈ ವಿಷಯ ಓದಿ ಆಶ್ಚರ್ಯಗೊಳ್ಳಬೇಡಿ. ಭಾರತೀಯ ಅಂಚೆ ಇಲಾಖೆ ತ್ವರಿತಗತಿಯಲ್ಲಿ ಮನಿ ಆರ್ಡರ್ ನೀಡುವ ಉದ್ದೇಶದಿಂದ 'ಮೊಬೈಲ್ ಮನಿ ಟ್ರಾನ್ಸ್ಫರ್ (ಎಂಎಂಟಿ)' ಎಂಬ ಹೊಸ ಸೇವೆ ಪ್ರಾರಂಭಿಸಿದೆ. ಈ ಸೇವೆಯಿಂದಾಗಿ ನೀವು ಎಸ್ಎಂಎಸ್ ಕಳುಹಿಸುವ ಮೂಲಕ ಹಣವನ್ನು ನೀವು ಬಯಸಿದ ವ್ಯಕ್ತಿಗೆ ಕಳುಹಿಸಬಹುದು.
ಈಗಾಗಲೇ ದೆಹಲಿ, ಹರ್ಯಾಣ, ಕೇರಳ, ಪಂಜಾಬ್ ಹಾಗೂ ಉತ್ತರಾಖಂಡದ ಸುಮಾರು 7,000 ಅಂಚೆ ಕಚೇರಿಗಳಲ್ಲಿ ಈಗಾಗಲೇ ಈ ಸೇವೆ ಲಭ್ಯವಿದೆ. ರಾಜ್ಯದ 400 ಅಂಚೆ ಕಚೇರಿಗಳಲ್ಲಿ ಈ ಸೇವೆಗೆ ಚಾಲನೆ ನೀಡಲಾಗಿದೆ.
ಹಣ ಕಳುಹಿಸುವುದು ಹೇಗೆ?
- ಯಾವುದೇ ಕಂಪನಿಯ ಮೊಬೈಲ್ ಸಂಪರ್ಕ ಹೊಂದಿರುವ ಮೊಬೈಲನ್ನು ಅಂಚೆ ಕಚೇರಿಗೆ ಹೋಗಿ ಯಾರಿಗೆ ಎಷ್ಟು ಹಣ ಮತ್ತು ಯಾವ ದೂರವಾಣಿ ಸಂಖ್ಯೆಗೆ ಕಳುಹಿಸಬೇಕು ಎಂದು 'ಕ್ಯಾಶ್ಔಟ್' ಅರ್ಜಿಯಲ್ಲಿ ತುಂಬಬೇಕು.
- ನಂತರ ಹಣವನ್ನು ನೀಡಿದರೆ, ಅವರು ನಿಮಗೆ ಮತ್ತು ಹಣ ಸ್ವೀಕರಿಸಲಿರುವ ವ್ಯಕ್ತಿಗೂ ಸಂದೇಶ ರವಾನಿಸುತ್ತಾರೆ. ಅದರಲ್ಲಿ ಗುಪ್ತ ಸಂಖ್ಯೆ ನೀಡಲಾಗಿರುತ್ತದೆ.
- ಎಸ್ಎಂಎಸ್ ಬಂದ ತಕ್ಷಣ ವ್ಯಕ್ತಿ ಯಾವುದೇ ಅಂಚೆ ಕಚೇರಿಗೆ ಹೋಗಿ ಸಂದೇಶ ಮತ್ತು ಗುಪ್ತ ಸಂಖ್ಯೆ ಹಾಗೂ ಗುರುತಿನ ಚೀಟಿ ತೋರಿಸಿದರೆ, ಹಣ ಸಿಗುತ್ತದೆ.
- ತ್ವರಿತಗತಿಯಲ್ಲಿ ಹಣ ವರ್ಗಾವಣೆ ಮತ್ತು ಸ್ವೀಕಾರ
- ಗ್ರಾಹಕ ಸ್ನೇಹಿ
- ನಿಮ್ಮ ಹತ್ತಿರದ ಅಂಚೆ ಕಚೇರಿಯಲ್ಲಿ ಪಡೆಯಬಹುದು
- ಎಸ್ಎಂಎಸ್ಗೆ ಶುಲ್ಕವಿಲ್ಲ
djtrupti@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.