ತೊಂಡೆಕಾಯಿ
ಕುಕುರ್ಬಿಟೇಸಿ ಕುಟುಂಬಕ್ಕೆ ಸೇರಿದ ತೊಂಡೆ ಮೃದು ಕಾಂಡದ ಬಳ್ಳಿ ಸಸ್ಯ. ಒಮ್ಮೆ ನೆಟ್ಟಲ್ಲಿ ಬಹುಕಾಲ ಕಾಯಿ ಬಿಡುತ್ತಿರುತ್ತದೆ.
- ಕುಕುರ್ಬಿಟೇಸಿ ಕುಟುಂಬಕ್ಕೆ ಸೇರಿದ ತೊಂಡೆ ಮೃದು ಕಾಂಡದ ಬಳ್ಳಿ ಸಸ್ಯ. ಒಮ್ಮೆ ನೆಟ್ಟಲ್ಲಿ ಬಹುಕಾಲ ಕಾಯಿ ಬಿಡುತ್ತಿರುತ್ತದೆ. ಇದರಲ್ಲಿ ಅಧಿಕ ಪ್ರಮಾಣದ ಶರ್ಕರಪಿಷ್ಟ, ಪ್ರೊಟೀನ್, ಕಬ್ಬಿಣ, ಜೀವಸತ್ವಗಳು ಇರುತ್ತವೆ.
- ಇದು ಸುಲಭವಾಗಿ ಜೀರ್ಣಗೊಳ್ಳುವ ತರಕಾರಿ. ಇದರಲ್ಲಿ ಮೂತ್ರವರ್ಧಕ, ವಿರೇಚಕ ಗುಣಗಳಿವೆ. ಅವುಗಳ ಸೇವನೆಯಿಂದ ಮೆದುಳು ಮತ್ತು ಹೃದಯ ಬಲಗೊಳ್ಳುತ್ತವೆ. ತೊಂಡೆಹಣ್ಣಿನಲ್ಲಿ ದಣಿವನ್ನು ಹೋಗಲಾಡಿಸುವ ಗುಣ ಇದೆ.
- ತೊಂಡೆಯ ತವರೂರು ಏಷ್ಯಾ ಮತ್ತು ಉತ್ತರ ಆಫ್ರಿಕಾಗಳ ಉಷ್ಣ ಪ್ರದೇಶಗಳು. ಕೆಲವೆಡೆ ಇದು ಕಾಡುಬಳ್ಳಿಯಾಗಿ ಕಂಡುಬರುತ್ತದೆ. ಇದರ ಬೇಸಾಯ ಭಾರತ, ಶ್ರೀಲಂಕಾ, ಮಲೇಷ್ಯಾ, ಆಫ್ರಿಕಾಗಳಲ್ಲಿ ಕಂಡುಬರುತ್ತದೆ.
- ಈ ಬೆಳೆಗೆ ಮಣ್ಣು ಯಾವಾಗಲೂ ಹಸಿಯಾಗಿರಬೇಕು. ಹದವರಿತು ನೀರು ಕೊಡುವುದು ಮುಖ್ಯ. ತೊಂಡೆ ಬಹುವಾರ್ಷಿಕ ಬೆಳೆ. ಆದ್ದರಿಂದ ಬಲವಾದ ಚಪ್ಪರ ನಿರ್ಮಿಸಬೇಕು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.