ದಿನಕ್ಕೊಂದು ನಾಟಕ
ರಂಗಶಂಕರದಲ್ಲಿ 24ರಂದು 'ದ ಫೈಯರ್ ಆ್ಯಂಡ್ ದ ರೇನ್' ಇಂಗ್ಲಿಷ್ ನಾಟಕ ಪ್ರದರ್ಶನಗೊಳ್ಳಲಿದೆ. ಇದರ ರಚನೆ ವಿ. ಬಾಲಕೃಷ್ಣನ್ ಅವರದು. ಚೆನ್ನೈನ 'ಥಿಯೇಟರ್ ನಿಶಾ' ತಂಡ ನಾಟಕ ಅಭಿನಯಿಸಲಿದೆ. 25ರಂದು ಮರಾಠಿ ನಾಟಕ 'ಉನೆ ಪುರ್ಯೆ ಶಹರ್ ಏಕ್' (ಬೇಕ್ಡ್ ಬೀನ್ಸ್ ಆನ್ ಟೋಸ್ಟ್). ರಚನೆ ಮೋಹಿತ್ ತಕಾಲ್ಕರ್ ಅವರದು. ಪುಣೆಯ 'ಆಸಕ್ತ ಕಲಾಮಂಚ್' ತಂಡ ಅಭಿನಯಿಸಲಿದೆ. 26, ಶನಿವಾರ 'ಬಲಿ'. ಈ ಹಿಂದಿ ನಾಟಕದ ರಚನೆ ಅದಿತಿ ಬಿಸ್ವಾಸ್ ಅವರದು. ಗುರ್‌ಗಾಂವ್‌ನ ದಿ ಆ್ಯಕ್ಟರ್ ಫ್ಯಾಕ್ಟರ್ ಥಿಯೇಟರ್ ಸೊಸೈಟಿ ತಂಡ ಅಭಿನಯಿಸಲಿದೆ. 27ರಂದು ಆಶಿಷ್ ದೇಬರಾಯ್ ಅವರು ರಚಿಸಿದ ಇಂಗ್ಲಿಷ್ ನಾಟಕ 'ಯಯಾತಿ'. ಬೆಂಗಳೂರಿನ ರಾಫಿಕಿ ತಂಡ ಅಭಿನಯಿಸಲಿದೆ.
29ರಂದು 'ಶೇಕ್ಸ್‌ಪಿಯರ್ ಮನೆಗೆ ಬಂದ' ಪ್ರದರ್ಶನಗೊಳ್ಳಲಿದೆ. ಇದರ ರಚನೆ ಹಾಗೂ ನಿರ್ದೇಶನ ಡಾ. ನಟರಾಜ್ ಹುಳಿಯಾರ್. ಬೆಂಗಳೂರಿನ ಥಿಯೇಟರ್ ತತ್ಕಾಲ್ ತಂಡ ಅಭಿನಯಿಸಲಿದೆ. 30ರಂದು ವೈದೇಹಿಯವರ 'ವ್ಯಾನಿಟಿ ಬ್ಯಾಗ್' ನಾಟಕ. ನಿರ್ದೇಶನ ಮಂಗಲಾ ಎನ್. ಬೆಂಗಳೂರಿನ ಸಂಚಾರಿ ಥಿಯೇಟರ್ ಕಲ್ಚರಲ್ ಚಾರಿಟೇಬಲ್ ಟ್ರಸ್ಟ್ ತಂಡದ ಅಭಿನಯ. ಅಕ್ಟೋಬರ್ 31ರಂದು ಮಂಗಲಾ ಎನ್. ಅವರ 'ಪಿನೊಷಿಯೊ' ನಾಟಕದ ನಿದೇರ್ಶನ ವಿಜಯಾ ಬಿ. ಅವರದು. ಈ ನಾಟಕದೊಂದಿಗೆ ಒಂದು ತಿಂಗಳ ನಾಟಕೋತ್ಸವಕ್ಕೆ ತೆರೆಬೀಳಲಿದೆ.