ಅವರೆಲ್ಲರನ್ನೂ ಮೀರಿಸುವಂಥವರು!
ಸ್ವಾಮಿ ವಿವೇಕಾನಂದರಿಗೆ ಬಾಸ್ಟನ್‌ನಲ್ಲಿ ಮೊದಲು ಆಶ್ರಯ ನೀಡಿ ಸತ್ಕರಿಸಿದ ಸ್ಯಾನ್‌ಬಾರ್ನ್ ಅಧ್ಯಾಪಕಿ, ಹಾಗೂ ಲೇಖಕಿ. ಈಕೆ ತನ್ನ ಪರಿಚಯಸ್ಥರಿಗೆ 'ಭಾರತದಿಂದ ಬಂದಿರುವ ಕೂತೂಹಲಕರ ವ್ಯಕ್ತಿ' ಎಂದು ಸ್ವಾಮೀಜಿಯನ್ನು ಪರಿಚಯಿಸಿದಳು ಈಕೆಯ ಸಂಬಂಧಿ ಫ್ರಾಂಕ್ಲಿನ್ ಬೆಂಜಮಿನ್ ಸ್ಯಾನ್‌ಬಾರ್ನ್ ಪತ್ರಿಕೋದ್ಯಮಿ. ಆತ ಸ್ವಾಮೀಜಿಯ ಪ್ರಕಾಂಡ ಪಾಂಡಿತ್ಯಕ್ಕೆ ಮಾರುಹೋಗಿ, ನ್ಯಾಯಾರ್ಕ್‌ನಲ್ಲಿನ 'ಅಮೆರಿಕ ಸಮಾಜವಿಜ್ಞಾನ ಸಂಘ'ದಲ್ಲಿ ಮಾತನಾಡಲು ಆಹ್ವಾನಿಸಿದ.
ಸ್ವಾಮೀಜಿಗೆ ಪರಿಚಯವಾದವರಲ್ಲಿ ಡಾ. ಜಾನ್ ಹೆನ್ರಿ ರೈಟ್ ಪ್ರಮುಖರು. ಇವರು ಹಾರ್ವರ್ಡ್ ವಿ.ವಿ.ಯಲ್ಲಿ ಗ್ರೀಕ್ ಸಾಹಿತ್ಯದ ಪ್ರಾಧ್ಯಾಪಕರಾಗಿದ್ದರು. ಅಪಾರ ಪಾಂಡಿತ್ಯ ಹೊಂದಿದ್ದ ಅವರು ವಿಶ್ವಧರ್ಮ ಸಮ್ಮೇಳನದ ಅಧ್ಯಕ್ಷರಾದಿಯಾಗಿ ಎಲ್ಲರ ನಿಕಟ ಸಂಪರ್ಕ ಹೊಂದಿದ್ದರು. ಸ್ವಾಮೀಜಿಯ ಸಾಮರ್ಥ್ಯವನ್ನು ಕಂಡುಕೊಂಡ ಪ್ರೊ. ರೈಟ್, ವಿಶ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಬೇಕೆಂದು ಕೇಳಿಕೊಂಡರು. ಅಷ್ಟೇ ಅಲ್ಲ, ಸ್ವಾಮೀಜಿ ಭಾಗವಹಿಸುವಂತೆ ಮಾಡುವ ಹೊಣೆ ತಮ್ಮದೆಂದು ಭರವಸೆ ನೀಡಿದರು.
ಪ್ರೊ. ರೈಟ್‌ರವರು ಸಮ್ಮೇಳನದ ಆಯ್ಕೆ ಸಮೀತಿ ಅಧ್ಯಕ್ಷರಿಗೆ ಪತ್ರ ಬರೆದು, 'ನಮ್ಮ ಅಮೆರಿಕದ ಮೇಧಾವಿಗಳನ್ನೆಲ್ಲ ಒಟ್ಟುಗೂಡಿಸಿದರೆ ಅವರೆಲ್ಲರನ್ನೂ ಮೀರಿಸುವಂಥವರು ಇವರು' ಎಂದು ತಿಳಿಸಿದರು. ಕೆಲವೇ ದಿನಗಳಲ್ಲಿ ಸಮ್ಮೇಳನದ ಅಧಿಕಾರಿಗಳಿಂದ ಒಪ್ಪಿಗೆ ಪತ್ರ ಕೂಡ ಬಂತು. ಸ್ವಾಮೀಜಿಗೆ ಅತ್ಯಾನಂದವಾಯಿತು. ಭಗವಂತನ ಇಚ್ಛೆಗೆ ಸ್ವಾಮೀಜಿಯ ಪ್ರಯತ್ನಗಳುಕ ಸಂಲಗ್ನಗೊಂಡು ಕಾರ್ಯಸಾಧನೆಯತ್ತ ಧಾವಿಸಿದರು.
- ಆನಂದ ಎಸ್.ಎನ್.
anandsn193@gmail.com