ಪಪ್ಪಾಯಿಹಣ್ಣು
ಪಪ್ಪಾಯ ಒಂದು ವಿಶಿಷ್ಟ ಹಣ್ಣು, ಇದರ ವೈಜ್ಞಾನಿಕ ಹೆಸರು ಕರಿಕಾ ಪಪ್ಪಾಯ, ಈ ಗಿಡ ಯಾವುದೇ ರಂಬೆಗಳನ್ನು ಹೊಂದಿರುವುದಿಲ್ಲ. ಕಾಯಿ ಹಸಿರಾಗಿದ್ದು, ಹಣ್ಣಾದಾಗ ಹಳದಿ ಬಣ್ಣಕ್ಕೆ ತಿರುಗುತ್ತದೆ.
ಈ ಹಣ್ಣು ಜೀರ್ಣಕಾರಿಯಾಗಿದ್ದು, ತಿರುಳು ಹಳದಿ, ಕೆಂಪು ಮಿಶ್ರಿತ ಹಳದಿ ಬಣ್ಣ ಹೊಂದಿರುತ್ತದೆ. ಜೀರ್ಣಾಂಗದ ಅನೇಕ ತೊಂದರೆಗಳನ್ನು ನಿವಾರಿಸುತ್ತದೆ. ಪಪ್ಪಾಯಿಯಲ್ಲಿ 'ವಿಟಮಿನ್ ಎ' ಅಧಿಕವಾಗಿರುತ್ತದೆ.
ಮಲಬದ್ಧತೆ ನಿವಾರಣೆಗೆ ಇದು ಸಹಕಾರಿ. ಪಪ್ಪಾಯಿ ಕಾಯಿಯಿಂದ ಪಲ್ಯ, ಸಾಂಬಾರು ತಯಾರಿಸಬಹುದು. ಹೇರಳವಾಗಿ ಜೀವಸತ್ವಗಳನ್ನು ಹೊಂದಿರುವ ಈ ಹಣು,್ಣ ಕರಳು ಹಾಗೂ ಜೀರ್ಣಾಂಗಕ್ಕೆ ಸಂಬಂಧಿಸಿದ ಸಮಸ್ಯೆ ನಿವಾರಿಸುತ್ತದೆ.
ಗ್ಯಾಸ್ಟ್ರಿಕ್, ಬೊಜ್ಜು ನಿವಾರಣೆ ಜತೆಗೆ ದೇಹದ ಬೆಳವಣಿಗೆಗೂ ಪಪ್ಪಾಯಿ ಸಹಕಾರಿ. ಔಷಧೀಯ ಗುಣಗಳಲ್ಲದೆ, ಸ್ವಾದಿಷ್ಟವನ್ನು ಹೊಂದಿರುವ ಪಪ್ಪಾಯ ನಿಸರ್ಗದ ಅತ್ಯಮೂಲ್ಯ ಕೊಡುಗೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.