ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಬೇಸಿಗೆಯಲ್ಲಿ ಬಿಳಿಬಟ್ಟೆ ಏಕೆ?

Rashmi Kasaragodu
Updated On : 25 Oct 2013, 4:45 am

ಬೇಸಿಗೆಯಲ್ಲಿ ಕಪ್ಪು ಹಾಗೂ ಗಾಢ ಬಣ್ಣದ ಬಟ್ಟೆಗಳಿಗಿಂತ ಬಿಳಿ ಬಟ್ಟೆಗಳು ಹೆಚ್ಚು ಹಿತವಾದ ಅನುಭವ ನೀಡುತ್ತವೆ. ಇದಕ್ಕೆ ಕಾರಣ, ಬೇಸಿಗೆಯಲ್ಲಿ ಸೂರ್ಯನ ಕಿರಣಗಳು ಎಷ್ಟೇ ಪ್ರಖರವಾಗಿದ್ದರೂ, ಅವುಗಳನ್ನು ಪ್ರತಿಫಲಿಸುವ ಗುಣವನ್ನು ಬಿಳಿಬಟ್ಟೆಗಳು ಹೊಂದಿವೆ. ಇದರಿಂದಾಗಿ ಬಿಸಿಲಿನ ಶಾಖ ಮೈಗೆ ಅಷ್ಟಾಗಿ ತಾಗುವುದಿಲ್ಲ. ಆದರೆ ಗಾಢ ಬಣ್ಣದ ಬಟ್ಟೆಗಳು ಸೂರ್ಯನ ಕಿರಣಗಳನ್ನು ಹೀರಿಕೊಳ್ಳುವುದರಿಂದ ಧರಿಸಿದವರು ಬೆವತು, ಬೇಗಸುಸ್ತಾಗುತ್ತಾರೆ. ಇನ್ನು ಬೇಸಿಗೆಯಲ್ಲಿ ಗಾಢ ಬಣ್ಣದ ಬಟ್ಟೆಗಳನ್ನು ಧರಿಸಲೇಬೇಕೆನ್ನುವವರು ಸ್ವಲ್ಪ ಸಡಿಲವಾದ ಬಟ್ಟೆಗಳನ್ನು ಧರಿಸುವುದೊಳಿತು. ಇದರಿಂದ ಸಾಕಷ್ಟು ಗಾಳಿಯಾಡಿ, ಬಟ್ಟೆ ಹೀರಿಕೊಂಡ ಶಾಖ ದೇಹಕ್ಕೆ ತಾಕುವಷ್ಟರಲ್ಲಿ ತೀವ್ರತೆ ಕಡಿಮೆಯಾಗಿರುತ್ತದೆ.

- ಅರಳಕುಪ್ಪೆ ಶ್ರೀನಿವಾಸ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement