ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಮನಸ್ಸು ಮಾಡಿ, ಅಷ್ಟೆ

ಯಶಸ್ವಿ ವ್ಯಕ್ತಿಗಳ ಮೊಟ್ಟ ಮೊದಲ ಅರ್ಹತೆಯೇ ಸಂಪರ್ಕ. ಅತ್ಯುತ್ತಮ ನೆಟ್‌ವರ್ಕ್ ಹೊಂದಿದ್ದವರು ಮಾತ್ರ ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯ. ನಿಮಗೆ ಹಣ...

Rashmi Kasaragodu
Updated On : 25 Oct 2013, 4:42 am

ಯಶಸ್ವಿ ವ್ಯಕ್ತಿಗಳ ಮೊಟ್ಟ ಮೊದಲ ಅರ್ಹತೆಯೇ ಸಂಪರ್ಕ. ಅತ್ಯುತ್ತಮ ನೆಟ್‌ವರ್ಕ್ ಹೊಂದಿದ್ದವರು ಮಾತ್ರ ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯ. ನಿಮಗೆ ಹಣ, ಅಧಿಕಾರ, ವಿದ್ಯೆ, ಪ್ರತಿಭೆ ಎಲ್ಲವು ಇರುತ್ತದೆ ಎಂದಿಟ್ಟುಕೊಳ್ಳಿ. ಅದನ್ನು ಬಳಸಿಕೊಳ್ಳುವ ಬುದ್ಧಿವಂತಿಕೆಯೂ ನಿಮಗಿದೆ. ಇಷ್ಟಿದ್ದರೂ ನೀವು ಯಶಸ್ವಿಯಾಗಲು ಸಾಧ್ಯವಿಲ್ಲ. ಏಕೆಂದರೆ ಯಾವುದೇ ಒಂದು ಕೆಲಸ ಒಬ್ಬ ವ್ಯಕ್ತಿಯಿಂದ ಆಗಲು ಸಾಧ್ಯವೇ ಇಲ್ಲ. ಜಯವೆನ್ನುವುದು ಸಂಘಟಿತ ಶಕ್ತಿಗೆ ಒಲಿಯುವ ಆಭರಣ. ಒಂದು ಸೇನೆಯೆಂದರೆ ಅಲ್ಲಿ ಕಾಲಾಳುಗಳೂ ಬೇಕು. ಕುದುರೆ ಸವಾರರು, ಗಜಪಡೆಯ ಯೋಧರು, ರಥಿಕರು, ಮಲ್ಲಯುದ್ಧ ಪ್ರವೀಣರು, ಮುಷ್ಟಿ ಕಾಳಗ ನಿಪುಣರು, ಬಿಲ್ಲುಗಾರರು ಹೀಗೆ ಎಲ್ಲ ವಿಧದ ವೀರರೂ ಅಗತ್ಯ. ಅಂತಿಮವಾಗಿ ಸೇನೆಯನ್ನು ಮುನ್ನೆಡೆಸುವುದು ಸೇನಾಧಿಪತಿಯ ತಂತ್ರಗಾರಿಕೆ, ಅವನ ಕೆಚ್ಚು ಇತ್ಯಾದಿಗಳನ್ನು ಅವಲಂಬಿಸಿರುತ್ತದೆ ಎಂಬುದು ಸತ್ಯವೇ ಆದರೂ ಒಬ್ಬನೇ ವೈರಿಯೆದುರು ಸೆಣಸಾಡಲು ಸಾಧ್ಯವೇ ಇಲ್ಲ. ಅಥವಾ ಸೇನೆಯಲ್ಲಿರುವವರೆಲ್ಲರೂ ಸೇನಾಧಿಪತಿಗಳೇ ಆಗಿದ್ದರೂ ಜಯ ಹುಸಿಯಾಗುತ್ತದೆ.
ಹೀಗಾಗಿ ಅತ್ಯಂತ ಸಣ್ಣ ಕೆಲಸ ಮಾಡುವವನಿಂದ ಹಿಡಿದು ಜತೆಯಲ್ಲಿ ನಿಂತು ಸಲಹೆ ಕೊಡುವ ಕಾರ್ಯದರ್ಶಿಯವರೆಗೆ ಎಲ್ಲರನ್ನೂ ವಿಶ್ವಾಸದಲ್ಲಿಯೇ ಇಟ್ಟುಕೊಳ್ಳಬೇಕಾಗುತ್ತದೆ. ಇಲ್ಲಿ ಯಾರೂ ಕನಿಷ್ಠರಲ್ಲ, ಯಾರದ್ದೂ ಹೆಚ್ಚುಗಾರಿಕೆಯೂ ಇಲ್ಲ. ಇದು ನೆಟ್‌ವರ್ಕಿಂಗ್‌ನಿಂದ ಸಾಧ್ಯ. ಅಂದರೆ ಇತರರೊಡನೆ ನಮಗಿರುವ ಹಿತವಾದ ಬಾಂಧವ್ಯ, ಸಂಬಂಧ. ಎಲ್ಲರೊಡನೆ ನಗುನಗುತ್ತಾ ಮಾತನಾಡಿ, ಅವರ ಸುಖ-ದುಃಖಗಳನ್ನು ಹಂಚಿಕೊಳ್ಳುವ ಮನೋವೈಶಾಲ್ಯ ಹೊಂದಿರುವ ವ್ಯಕ್ತಿಗೆ ತಮ್ಮ ಸಮಯ ಶ್ರಮವನ್ನು ಮೀಸಲಿಡಲು ಎಲ್ಲರೂ ಸಿದ್ಧರಿರುತ್ತಾರೆ. ಇತರರೊಡನೆ ನಮಗಿರುವ ಸಂಬಂಧ ಕೇವಲ ವ್ಯಾವಹಾರಿಕವಾಗಿರಕೂಡದು. ಕೆಲಸದ ವಿಷಯ ಬಂದಾಗ ಆ ಮಾತು ಬೇರೆ. ಅಲ್ಲಿ ನೀವು ಎಷ್ಟೇ ನಿಷ್ಠುರವಾಗಿ ವರ್ತಿಸಿ. ಆದರೆ ಕೆಲಸದ ವಾತಾವರಣದಿಂದ ಹೊರ ಬಂದು ಮಾನವೀಯವಾಗಿ ವರ್ತಿಸಿ. ಸ್ನೇಹಪೂರ್ವಕ, ನಿರ್ಮಲ ಮಾತುಗಳನ್ನು ಹಂಚಿಕೊಳ್ಳಲು ಸಿದ್ಧರಿದ್ದರೆ ನೀವು ಗೆದ್ದಂತೆಯೇ ಸರಿ. ಮಾನವ ಬಾಂಧವ್ಯವನ್ನೆಲ್ಲ ಈ ಬಗೆಯ ವ್ಯವಹಾರಕ್ಕೇ ವಿನಿಯೋಗಿಸಬೇಕೆಂದಲ್ಲ. ಕಡೆಗೂ ವ್ಯವಹಾರವೆಂಬುದು ಸಂಬಂಧಗಳ ವಿಸ್ತರಣೆಯೇ ತಾನೆ? ಸಂಬಂಧಗಳನ್ನು ಚೆನ್ನಾಗಿಟ್ಟುಕೊಂಡವನು ವ್ಯವಹಾರದಲ್ಲೂ ಗೆಲ್ಲುತ್ತಾನೆ.

- ಸಹನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement