ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಮಿತ್ತ ಬೈಲು ಯಮುನಕ್ಕ ನಾಟಕ

Rashmi Kasaragodu
Updated On : 25 Oct 2013, 4:42 am

ಖ್ಯಾತ ರಂಗಕರ್ಮಿ ಸಿ.ಜಿ.ಕೆ. ಯವರ ಕನಸಿನ ರಂಗನಿರಂತರ ತಂಡವು ಡಾ. ಡಿ.ಕೆ. ಚೌಟ ಅವರ 75ನೇ ವರ್ಷದ ಹುಟ್ಟುಹಬ್ಬದ ಅಭಿನಂದನೆ ಸಮಾರಂಭದ ಪ್ರಯುಕ್ತ ಅವರದೇ ರಚನೆ 'ಮಿತ್ತ ಬೈಲು ಯಮುನಕ್ಕ' ಕಾದಂಬರಿಯನ್ನು ನಾಟಕಕ್ಕೆ ಅಳವಡಿಸಿ, ಅಭಿನಯಿಸಿ ಚೌಟರಿಗೆ ಅಭಿನಂದನೆ ಸಲ್ಲಿಸಲು ಯೋಚಿಸಿದೆ. ದಿನಾಂಕ 29-10-2013ರ ಸಂಜೆ 7 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ರಂಗೋತ್ಸವದಲ್ಲಿ ಡಾ. ಡಿ.ಕೆ. ಚೌಟರ  'ಮಿತ್ತ ಬೈಲು ಯಮುನಕ್ಕ' ಎಂಬ ಮಹತ್ತರ ತುಳು ಕಾದಂಬರಿಗೆ ಹೆಸರಾಂತ ಬರಹಗಾರರಾದ ಬಸವರಾಜ ಸೂಳೆರಿ ಪಾಳ್ಯರವರು ರಂಗರೂಪ ನೀಡಿದ್ದಾರೆ. ಖ್ಯಾತ ರಂಗ ನಿರ್ದೇಶಕರಾದ ಪ್ರಮೋದ್ ಶಿಗ್ಗಾಂವ್ 'ಮಿತ್ತಬೈಲು ಯಮುನಕ್ಕ' ಕನ್ನಡ ನಾಟಕವನ್ನು ನಿರ್ದೇಶನ ಮಾಡಿದ್ದಾರೆ. ಈ ನಾಟಕಕ್ಕೆ ರಂಗವಿನ್ಯಾಸ ಮಾಡಿದವರು ಶಶಿಧರ ಅಡಪ, ಬೆಳಕು ವಿನ್ಯಾಸ ಮೈಕೋ ಶಿವಣ್ಣ, ಸಂಗೀತ ನಿರ್ದೇಶನ ಗಜಾನನ ಟಿ. ನಾಯ್ಕ ಅವರದು.

ಸ್ಥಳ: ರವೀಂದ್ರ ಕಲಾಕ್ಷೇತ್ರ, ಬೆಂಗಳೂರು.
ದಿನಾಂಕ: 29-10-2013.
ಸಮಯ: ಸಂಜೆ 7 ಗಂಟೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement