ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಅಪರಾಧ/ಸಾಮಾನ್ಯ ಸಾವಿಗೆ ಪ್ರತ್ಯೇಕ ಸಿಬ್ಬಂದಿ

Rashmi Kasaragodu
Updated On : 28 Oct 2013, 12:43 pm

ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲೂ ಸಂಭವಿಸುವ ಎಲ್ಲಾ ಅಪರಾಧ ಪ್ರಕರಣ ದಾಖಲು ಮಾಡಿಕೊಳ್ಳಲು ಹಾಗೂ ಆ ಪ್ರಕರಣಗಳ ಬಗ್ಗೆ ನಿಗಾವಹಿಸಿ, ಫಾಲೋ ಮಾಡುವ(ತನಿಖೆಯ ಪ್ರಗತಿ ಪರಿಶೀಲಿಸುವ) ಸಿಬ್ಬಂದಿ ಪ್ರತ್ಯೇಕವಾಗಿ ಇರುತ್ತಾರೆ. ಪ್ರತಿ ಪೊಲೀಸ್ ಠಾಣೆಯಲ್ಲಿ ಎಎಸ್‌ಐ ವರ್ಗದ ಅಂತಹ ಒಬ್ಬ ಸಿಬ್ಬಂದಿ ಇರುತ್ತಾರೆ.
ಅದಕ್ಕೆ ಪ್ರತ್ಯೇಕ ಸಿಬ್ಬಂದಿ ಇರುತ್ತಾರೆ. ಕೊಲೆ, ಸುಲಿಗೆ, ದರೋಡೆ, ಕಳ್ಳತನ, ಸಹಜ ಸಾವು ಸೇರಿದಂತೆ ಇಂತಹ ಪ್ರಕರಣಗಳನ್ನು ದಾಖಲಿಸಿಕೊಳ್ಳಲು ಹಾಗೂ ತನಿಖೆ ಪ್ರಗತಿ ಪರಿಶೀಲಿಸಲು ಇಬ್ಬರು ಸಿಬ್ಬಂದಿ(ಎಎಸ್‌ಐ) ನೇಮಿಸಲಾಗಿರುತ್ತದೆ.
ಅಲ್ಲದೆ ತಂಡಗಳನ್ನೂ ಬೇರೆ ಮಾಡಲಾಗಿರುತ್ತದೆ. ಕೊಲೆ, ಸುಲಿಗೆಯಂತಹ ಪ್ರಕರಣಗಳ ತನಿಖೆ, ಆರೋಪಿಗಳ ಪತ್ತೆ, ಬಂಧನಕ್ಕೆ ಪ್ರತ್ಯೇಕ ತಂಡ ಇರುತ್ತದೆ. ಸಹಜ ಸಾವು, ಆತ್ಮಹತ್ಯೆಯಂತಹ ಅಪರಾಧ ಪ್ರಕರಣಗಳ ತನಿಖೆ, ಪರಿಶೀಲನೆಗೆ ಪ್ರತ್ಯೇಕ ಸಿಬ್ಬಂದಿ ಇರುತ್ತಾರೆ.
ಆಯಾ ವರ್ಗದ ಅಪರಾಧ ಪ್ರಕರಣಗಳನ್ನು ಅವರೇ ಗಮನಿಸಬೇಕು. ಒಂದು ವೇಳೆ ಸಂಬಂಧಪಟ್ಟ ಅಧಿಕಾರಿಗಳು ರಜೆ ಇದ್ದಲ್ಲಿ ಮಾತ್ರ ಬೇರೆ ಸಿಬ್ಬಂದಿ ಆ ಬಗ್ಗೆ ಗಮನಹರಿಸುತ್ತಾರೆ. ಇಲ್ಲವಾದಲ್ಲಿ ಆ ಅಪರಾಧಗಳಿಗೆ ಸಂಬಂಧಿಸಿದ ದಾಖಲೆ, ಕಡತಗಳನ್ನು ಆಯಾ ಸಿಬ್ಬಂದಿಯೇ ನೋಡಿಕೊಳ್ಳುತ್ತಾರೆ.
ಪ್ರಕರಣಗಳು ನ್ಯಾಯಾಲಯದಲ್ಲಿ ಬಂದಾಗ, ಆರೋಪಿ ಬಂಧಿತನಾದಾಗ, ಆರೋಪ ಪಟ್ಟಿ ಸಲ್ಲಿಸುವುದು ಇತ್ಯಾದಿ ಮಾಹಿತಿ ಅವರ ಬಳಿ ಇರುತ್ತದೆ. ಎಫ್‌ಐಆರ್(ಪ್ರಥಮ ಮಾಹಿತಿ ವರದಿ)ನ ನಂಬರ್ ಅವರಿಗೆ ತಿಳಿಸಿದರೆ, ಅದರ ಮಾಹಿತಿ ಸಿಬ್ಬಂದಿಯಿಂದ ಸಿಗುತ್ತದೆ.

- ಶಾಂತ ತಮ್ಮಯ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement