ಗಗನವೇ ಮನೆ ಹಸುರೇ ಹಾಸಿಗೆ
ಕಾರ್ಯಸಾಧನೆಯ ಭರದಲ್ಲಿ ಮುನ್ನಡೆಯುತ್ತಿದ್ದಾಗ ಎದುರಾದ ಅಡೆತಡೆಗಳನ್ನು ಭಗವಂತನ ಕೃಪೆ ಎನ್ನುತ್ತಾರೆ ವಿವೇಕಾನಂದರು. ಸತ್ವಪರೀಕ್ಷೆ ಒಡ್ಡುವವನೂ ಅವನೇ, ಕೈಹಿಡಿದು ಮುನ್ನಡೆಸುವವನೂ ಅವನೇ ಎನ್ನುತ್ತಾ ಸತ್ಯವಂತರಾಗಿ ಸತ್ಕಾರ್ಯಗಳಲ್ಲಿ ತೊಡಗಿದವರಿಗೆ ಭಗವಂತನೇ ದಾರಿ ತೋರುತ್ತಾನೆ ಎಂಬುದನ್ನು ಚಿಕಾಗೋದಲ್ಲಿ ಸ್ವಾಮೀಜಿಗಾದ ಅನುಭವಗಳೇ ಸಾಕ್ಷಿ.
ಪ್ರೊ. ರೈಟ್‌ರವರ ಸಹಕಾರದಿಂದ ಅಧಿಕೃತ ಪತ್ರ ಬಂದ ಮೇಲೆ ಸ್ವಾಮೀಜಿ ನ್ಯೂಯಾರ್ಕ್‌ನಿಂದ ಚಿಕಾಗೋಗೆ ಪ್ರಯಾಣ ಬೆಳೆಸಿದರು. ಪ್ರಯಾಣದ ವೇಳೆ ತಾವು ಭೇಟಿಯಾಗಬೇಕಿದ್ದ ಅಧ್ಯಕ್ಷರ ಕಚೇರಿ ವಿಳಾಸದ ಚೀಟಿಯನ್ನೇ ಕಳೆದುಕೊಂಡಿದ್ದರು. ವಿಚಾರಿಸಿಕೊಂಡು ಹೋಗೋಣವೆಂದರೆ ಯಾರೂ ಇವರೊಡನೆ ಸರಿಯಾಗಿ ಮಾತನಾಡುತ್ತಿಲ್ಲ. ಕೆಲವರು ಸ್ವಾಮೀಜಿಯನ್ನು ನೀಗ್ರೋ ಎಂದು ಭಾವಿಸಿ ತಿರಸ್ಕಾರದಿಂದ ಕಾಣುತ್ತಿದ್ದರು. ಸಂಜೆಯಾಗುತ್ತಿದೆ, ಹೋಟೆಲ್‌ಗಾದರೂ ಹೋಗೋಣವೆಂದರೆ, ಹತ್ತಿರದಲ್ಲೆಲ್ಲೂ ಹೋಟೆಲ್‌ಗಳಿಲ್ಲ. ರಾತ್ರಿಯಾಯಿತು, ಸ್ವಾಮೀಜಿ ಅಲ್ಲಿಯೇ ಇದ್ದ ಗೂಡ್ಸ್‌ವ್ಯಾಗನ್‌ನಲ್ಲಿ ರಾತ್ರಿ ಕಳೆಯಲು ನಿರ್ಧರಿಸಿದರು. ಅವರಿಗೆ 'ಗಗನವೇ ಮನೆ ಹಸುರೆ ಹಾಸಿಗೆ' ಎಂಬ ತಮ್ಮ ಪರಿವ್ರಾಜಕ ದಿನಗಳು ನೆನಪಾದವು. ಅಮೆರಿಕದಲ್ಲಿ ನಿರ್ಗತಿಕರೂ, ನಿರಾಶ್ರಿತರೂ ರಾತ್ರಿವೇಳೆ ಗೂಡ್ಸ್‌ವ್ಯಾಗನ್‌ಗಳಲ್ಲಿ ಮಲಗುತ್ತಾರೆ. ಇನ್ನು ಕೆಲವೇ ದಿನಗಳಲ್ಲಿ ಅಮೆರಿಕ ಅಷ್ಟೇ ಅಲ್ಲ ಇಡೀ ಜಗತ್ತಿನಾದ್ಯಂತ ಪ್ರಸಿದ್ಧರಾಗಲಿರುವ ಸ್ವಾಮೀಜಿ ಗೂಡ್ಸ್‌ವ್ಯಾಗನ್‌ನಲ್ಲಿ ನಿಶ್ಚಿಂತರಾಗಿ ನಿದ್ರಿಸಿದರು. ನಾಗರಿಕ ಬದುಕಿನ ಕಷ್ಟಸುಖಗಳನ್ನು ಮೀರಿದ ಮುಕ್ತಜೀವವಲ್ಲವೆ!
- ಆನಂದ ಎಸ್.ಎನ್.
anandsn193@gmail.com