ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಜನ ಸಂಸ್ಕೃತಿ ಉತ್ಸವ

Rashmi Kasaragodu
Updated On : 28 Oct 2013, 12:44 pm

ಡಿ.ಕೆ. ಚೌಟರ 75ರ ಸಂಭ್ರಮದ ವಿಶಿಷ್ಟ ಸಾಹಿತ್ಯ ಕೃತಿ, ನಂಜುಂಡಸ್ವಾಮಿ ತೊಟ್ಟವಾಡಿ ಸಂಪಾದಿಸಿರುವ 'ಪಚ್ಚೆ ತೆನೆ' ಗ್ರಂಥ ಬಿಡುಗಡೆ ಹಾಗೂ ಡಾ. ಡಿ.ಕೆ. ಚೌಟರಿಗೆ ಸಮರ್ಪಣಾ ಸಮಾರಂಭ ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಲಾಗಿದೆ. ಇದಲ್ಲದೇ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಅಕ್ಟೋ ಬರ್ 28, 29 ಹಾಗೂ 30ರಂದು ನಡೆಯಲಿದೆ.
ಅಕ್ಟೋಬರ್ 28ರಂದು ಸಂಜೆ 5.30ಕ್ಕೆ ದಕ್ಷಿಣ ಕನ್ನಡದ ನೂರು ಜನ ಮಹಿಳೆಯರಿಂದ 'ಚೆಂಡೆ' ವಾದನ, 6 ಗಂಟೆಗೆ ಸಿಂಧುಗುಜರನ್ ಮೊಯಿಲೊಟ್ಟು ಮತ್ತು ಬಳಗದವರಿಂದ ಪಾಡ್ದನ ಹಾಗೂ ಸತೀಶ್ ಶೆಟ್ಟಿ ಮತ್ತು ಬಳಗದವರಿಂದ 'ಭಾಗವತಿಕೆ'. ರಾತ್ರಿ 8 ಗಂಟೆಗೆ 'ಸಮರ ರಂಗ ಕಲೆ ತಾಲೀಮ್ ಗರಡಿ ಕಲೆ' ಪ್ರದರ್ಶನ.
ಅಕ್ಟೋಬರ್ 29ರಂದು ಸಂಜೆ 5.30ಕ್ಕೆ ಪ್ರಜ್ಞಾ ಚೌಟ ಹಾಗೂ ದಿ. ಎಂ.ಪಿ. ಪ್ರಕಾಶ್ ಅಭಿನಯಿಸಿರುವ ಸಾಕ್ಷ್ಯಚಿತ್ರ 'ಹಾತಿ' ಪ್ರದರ್ಶನ. ಅಕ್ಟೋಬರ್ 30ರಂದು ಸಂಜೆ 7.30ಕ್ಕೆ ಚಲನಚಿತ್ರ ಸಂಗೀತ ನಿರ್ದೇಶಕ ಸಂದೀಪ್ ಚೌಟರಿಂದ ಸಂಗೀತ ರಸ ಸಂಜೆ ಕಾರ್ಯಕ್ರಮ.
ಸ್ಥಳ: ರವೀಂದ್ರ ಕಲಾಕ್ಷೇತ್ರ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement