ಮೌಂಟ್ ಎವರೆಸ್ಟ್ ಹೆಸರು ಹೇಗೆ ಬಂತು?
ಮೌಂಟ್ ಎವರೆಸ್ಟ್ ವಿಶ್ವದಲ್ಲೇ ಎತ್ತರದ ಶಿಖರ. ಅದರ ಎತ್ತರ 8848 ಮೀಟರ್. ಈ ಶಿಖರಕ್ಕೆ ಈ ಹೆಸರು ಬಂದ ಕಥೆ ತುಂಬಾ ಸ್ವಾರಸ್ಯಕರವಾಗಿದೆ. ಹಿಂದೆ ನೇಪಾಳಿಯರು ಇದನ್ನು 'ಸರ್ಗಮಾತ' ಎಂದು ಕರೆಯುತ್ತಿದ್ದರು. 1852ರಲ್ಲಿ ಭಾರತ ಸರ್ಕಾರ ಸಮೀಕ್ಷಾ ತಂಡವೊಂದನ್ನು ಕಳುಹಿಸಿತು. ಈ ತಂಡದಲ್ಲಿ ಸರ್ವೇಯರ್ ಆಗಿದ್ದ ಜನರಲ್ ಸರ್ ಜಾರ್ಜ್ ಎವರೆಸ್ಟ್ ಮತ್ತು ಬಂಗಾಳಿ ಗುಮಾಸ್ತ ರಾಧಾನಾಥ್ ಹಾಗೂ ಇತರ ಅನೇಕ ವ್ಯಕ್ತಿಗಳಿದ್ದರು. ಶಿಖರದ ಸರಿಯಾದ ಜಾಗ ಮತ್ತು ಎತ್ತರವನ್ನು ರಾಧಾನಾಥ್ ಕಂಡುಹಿಡಿದರು. ಅವರು ಎಲ್ಲ ವಿಷಯವನ್ನೂ ಜಾರ್ಜ್ ಎವರೆಸ್ಟ್ಗೆ ರವಾನಿಸುತ್ತಿದ್ದರು. ಅನಂತರ ಈ ಶಿಖರಕ್ಕೆ ಹೆಸರಿಡುವ ಪ್ರಶ್ನೆ ಬಂದಾಗ ರಾಧಾನಾಥ್ರನ್ನು ನಿರ್ಲಕ್ಷಿಸಿ, ಜಾರ್ಜ್ ಎವರೆಸ್ಟ್ನ ಹೆಸರನ್ನೇ ಇಡಲಾಯಿತು!
- ಹರಳಹಳ್ಳಿ ಪುಟ್ಟರಾಜು