ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಯಾಕೆ ಹೊಡೆಯುತ್ತಾರೆ?

ಹೆಣ್ಣಿನ ಮನದಲ್ಲಿ ಏನಿರುತ್ತದೆ ಎಂದು ಹೇಳುವುದು ಕಷ್ಟವಂತೆ. ಇದನ್ನು ಹೇಳಿದವನೂ ಗಂಡಸೇ ಇರಬೇಕು. ಹೆಚ್ಚಿನ ಸಂಸ್ಕೃತ ಕವಿಗಳು ಗಂಡಸರೇ ಆದ್ದರಿಂದ,...

Rashmi Kasaragodu
Updated On : 28 Oct 2013, 12:43 pm

ಹೆಣ್ಣಿನ ಮನದಲ್ಲಿ ಏನಿರುತ್ತದೆ ಎಂದು ಹೇಳುವುದು ಕಷ್ಟವಂತೆ. ಇದನ್ನು ಹೇಳಿದವನೂ ಗಂಡಸೇ ಇರಬೇಕು. ಹೆಚ್ಚಿನ ಸಂಸ್ಕೃತ ಕವಿಗಳು ಗಂಡಸರೇ ಆದ್ದರಿಂದ, ಹೆಣ್ಣಿನ ಮನಸ್ಸಿನಲ್ಲಿ ವಿಷವೂ ತಲೆಯಲ್ಲಿ ದುಷ್ಟ ವಿಚಾರಗಳೂ ತುಂಬಿಕೊಂಡೇ ಇರುವಂತೆ ಚಿತ್ರಿಸಿದ್ದಾರೆ. ಅದೇ ಗಂಡಸರ ವಿಚಾರಕ್ಕೆ ಬಂದಾಗ ಅದು 'ರಸಿಕತೆ'ಯಾಗುತ್ತದೆ.
ಇರಲಿ. ಈ ವಿಚಾರವನ್ನೂ ಚಮತ್ಕಾರಯುತವಾಗಿ, ಯಾರೂ ನೋಯದಂತೆ ಹೇಳಿದವರೂ ಕಡಿಮೆ ಏನಿಲ್ಲ. ಅವರಲ್ಲಿ ಭರ್ತೃಹರಿ ಒಬ್ಬ. ಅವನ ಶೃಂಗಾರಶತಕದಲ್ಲಿ ಬರುವ ಪದ್ಯವಿಂತಿದೆ:

ಮಧು ತಿಷ್ಠತಿ ವಾಚಿ ಯೋಷಿತಾಂ ಹೃದಿ ಹಾಲಾಹಲಮೇವ ಕೇವಲಮ್
ಅತ ಏವ ನಿಪೀಯತೇಧರೋ ಹೃದಯಂ ಮುಷ್ಟಿಭಿರೇವ ತಾಡ್ಯತೇ


ತರುಣಿಯರ ಮಾತುಗಳಲ್ಲಿ ಸವಿಯಾದ ಜೇನು ತುಂಬಿರುತ್ತದೆ. ಆದ್ದರಿಂದಲೇ ಮಾತಿಗೆ ನೆಲೆಯಾದ ಆ ತುಟಿಗಳನ್ನು ಪ್ರಿಯಕರರು ಕುಡಿದು ಸವಿಯುತ್ತಾರೆ. ಆದರೆ ತರುಣಿಯರ ಹೃದಯದಲ್ಲಿ ತುಂಬಿರುವುದು ಕೇವಲ ವಿಷ. ಆದ್ದರಿಂತಲೇ ಅವುಗಳನ್ನು ಹೊಡೆಯುವುದು, ಹಿಂಡುವುದು!
ರತಿಸಮಯದಲ್ಲಿ ನಡೆಯುವ ಎರಡು ಅನಿವಾರ್ಯ ಕಲಾಪಗಳನ್ನು ಕವಿ ಕಂಡದ್ದು ಹೀಗೆ. ಕ್ರೀಡಾತುರದಲ್ಲಿ ವಕ್ಷಸಂಪತ್ತನ್ನು ಮೆಲ್ಲಗೆ ಹೊಡೆಯುವುದು ತಾಡನ ಎನಿಸಿಕೊಳ್ಳುತ್ತದೆ. ಇನ್ನು ಮರ್ದನವಂತೂ ಗೊತ್ತಿದ್ದದ್ದೇ. ಅದು ವಿಷಕ್ಕೆ ಸಲ್ಲಿಸಿದ ಪ್ರತಿರೋಧವಂತೆ! ಕವಿ ಬುದ್ಧಿವಂತ ನಿಜ, ಆದರೆ ಯಾಕೋ ಅವನು ಎದೆಯ ಸುಧಾರಸವನ್ನು ಈಂಟುವ ಗಂಡಸರ ಇನ್ನೊಂದು ಚಾಳಿಯ ಬಗ್ಗೆ ಮಾತೇ ಎತ್ತಿಲ್ಲ!
 
- ಹರಿಹರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement