ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಸೇಬುರಸ ಕುಡಿದರೆ ಗ್ಯಾಸ್ಟ್ರಿಕ್ ಹೆಚ್ಚುವುದು ಹೌದಾ?

Lingaraj Badiger
Updated On : 30 Oct 2013, 6:20 am

ಕೆಲವರಿಗೆ ಹಾಲಿನ ಅಲರ್ಜಿ. ಹಾಲು ಕುಡಿದರೆ ಹೊಟ್ಟೆಯಲ್ಲಿ ಏನೋ ತಳಮಳ ಆದ ಅನುಭವ. ಒಮ್ಮೊಮ್ಮೆ ಹೊಟ್ಟೆ ಉಬ್ಬರಿಸುವುದು, ಗ್ಯಾಸ್ಟ್ರಿಕ್ ಬಾಧೆ ಭಾದೆ ಕೂಡ ಕಾಡಬಹುದು. ಆದರೆ ಅದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಹಾಲು ಕೂಡ ಗ್ಯಾಸ್ಟ್ರಿಕ್‌ನಂಥ ತೊಂದರೆಗಳನ್ನು ಉಲ್ಬಣಗೊಳಿಸುವ ಸಂಭವ ಇರುತ್ತದೆ ಎನ್ನುವುದು ಬಹಳಷ್ಟು ಮಂದಿಗೆ ಗೊತ್ತೇ ಇರುವುದಿಲ್ಲ.
ಎಲ್ಲರಿಗೂ ಹೀಗಾಗುತ್ತದೆ ಅಂತಲ್ಲ ಅಥವಾ ಹಾಲು ಗ್ಯಾಸ್ಟ್ರಿಕ್ ಹೆಚ್ಚಿಸುತ್ತದೆ ಎನ್ನುವ ತೀರ್ಪು ಕೊಡುವುದೂ ಸರಿಯಲ್ಲ. ಯಾರಲ್ಲಿ ಲ್ಯಾಕ್ಟೋಸ್ ಅಲರ್ಜಿ ಇರುತ್ತದೆಯೋ ಅಂಥವರಿಗೆ ಮಾತ್ರ ಹಾಲು ಕುಡಿದರೆ ಸಮಸ್ಯೆ ಆಗುತ್ತದೆ. ನಮಗೆಲ್ಲ ಗೊತ್ತಿರುವಂತೆ ಸಕ್ಕರೆಯಲ್ಲಿ ಹಾಲು ಇರು ತ್ತದೆ. ಅದನ್ನೇ ಲ್ಯಾಕ್ಟೋಸ್ ಎನ್ನುವುದು. ನಮ್ಮ ದೇಹದಲ್ಲಿ ಲ್ಯಾಕ್ಟೇಸ್ ಎನ್ನುವ ಕಿಣ್ವಗಳೂ ಇರುತ್ತವೆ. ಇವು ಹಾಲಿನಲ್ಲಿರುವ ಲ್ಯಾಕ್ಟೋಸ್ ಜೀರ್ಣವಾಗಲು ನೆರವಾಗುತ್ತವೆ. ಕೆಲವು ವ್ಯಕ್ತಿಗಳಲ್ಲಿ ಲ್ಯಾಕ್ಟೇಸ್‌ನ ಕೊರತೆ ಇರುತ್ತದೆ. ಅಂಥವರಲ್ಲಿ ಲ್ಯಾಕ್ಟೋಸ್ ಸುಲಭವಾಗಿ ಜೀರ್ಣವಾಗುವುದಿಲ್ಲ. ಹೀಗಾಗಿ ಹಾಲು ಕುಡಿದಾಗ ಗ್ಯಾಸ್ಟ್ರಿಕ್ ತೊಂದರೆ ಕಾಣಿಸಿಕೊಳ್ಳುತ್ತದೆ. 'ಲ್ಯಾಕ್ಟೋಸ್ ಅಲರ್ಜಿ' ಇರುವವರು ಎರಡು ಕಪ್ ಹಾಲು ಕುಡಿದರೆ ಅವರಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ಎಂಟು ಪಟ್ಟು ಅಧಿಕವಾಗುತ್ತದೆ ಎನ್ನುತ್ತದೆ ಒಂದು ಆರೋಗ್ಯ ವರದಿ. ಹಾಗಂತ ನೀವೇನೂ ಗಾಬರಿ ಬೀಳಬೇಕಿಲ್ಲ. ಹಾಲು ಕುಡಿದಾಗ ನಿಮಗೆ ಹೊಟ್ಟೆಯಲ್ಲಿ ಯಾವುದೇ ರೀತಿಯ ಕಿರಿಕಿರಿ ಆಗಿಲ್ಲ ಎಂದಾದರೆ ನಿಮಗೆ ಲ್ಯಾಕ್ಟೋಸ್ ಅಲರ್ಜಿ ಇಲ್ಲ ಎಂದೇ ಅರ್ಥ. ನೀವು ಧೈರ್ಯವಾಗಿ ಹಾಲು ಕುಡಿಯುವುದನ್ನು ಮುಂದುವರಿಸಬಹುದು.

ನಮ್ಮ ದೇಹದಲ್ಲಿ ವಾಯುವಿನ ಉತ್ಪಾದನೆ ತೀವ್ರಗೊಳಿಸುವ ಇನ್ನೊಂದು ಪದಾರ್ಥ ಎಂದರೆ ಸುಲಭವಾಗಿ ಕರುವ ನಾರು. ಓಟ್ ಹೊಟ್ಟು, ಸೇಬು ಮೊದಲಾದವುಗಳಲ್ಲಿ ಕರಗುವ ನಾರು ಜಾಸ್ತಿ ಇರುತ್ತದೆ. ಇವು ನೇರವಾಗಿ ದೊಡ್ಡಕರುಳಿನ ಭಾಗದಲ್ಲಿ ಶೇಖರಗೊಂಡು, ಗ್ಯಾಸ್ ಉತ್ಪಾದಕ ಬ್ಯಾಕ್ಟೀರಿಯಾಗಳಿಗೆ ಭರ್ಜರಿ ಮೇವು ಒದಗಿಸುತ್ತವೆ. ಕೆಲವರಲ್ಲಿ ಕಾಲು ಗ್ಲಾಸ್ ಸೇಬುರಸ ಗ್ಯಾಸ್ಟ್ರಿಕ್ ಬಾಧೆಯನ್ನು ನಾಲ್ಕುಪಟ್ಟು ಹೆಚ್ಚಿಸಿದ ವರದಿಗಳಿವೆ. ಒಮ್ಮೊಮ್ಮೆ ಹೊಟ್ಟೆ ಮತ್ತು ಸಣ್ಣಕರುಳಿನಿಂದ ದೊಡ್ಡಕರುಳಿಗೆ ನುಸುಳಿಬಿಡುವ ಅಲ್ಪಪ್ರಮಾಣದ ಪಿಷ್ಟಗಳು ಕೂಡ ಗ್ಯಾಸ್ಟ್ರಿಕ್ ತೊಂದರೆಯನ್ನು ತೀವ್ರಗೊಳಿಸುತ್ತವೆ. ಗೋಧಿ, ಓಟ್ಸ್, ಆಲೂಗಡ್ಡೆ, ಕಾಳುಗಳು, ಬ್ರೆಡ್, ಗೋಧಿ ಹಿಟ್ಟಿನಿಂದ ಮಾಡಿದ ಪಾಸ್ತಾಗಳು ಕೂಡ ಕೆಲವು ಸಲ ಗ್ಯಾಸ್ ಉತ್ಪಾದನೆಗೆ ವೇಗ ನೀಡುತ್ತವೆ. ಕಾರ್ಬೊಹೈಟ್ರೇಟ್‌ಗಳಲ್ಲಿ ಅತ್ಯಂತ ನಿರುಪದ್ರವಿ ಎಂದರೆ ಅನ್ನ ಎನ್ನುವುದು ಸಂಶೋಧಕರ ಅಭಿಪ್ರಾಯ.

- ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement