ಪುಟ್ಟ ಗಣೇಶ
ಗಣೇಶನ ಹಬ್ಬ ಹತ್ತಿರವಾಗುತ್ತಿದ್ದಂತೆ ಎಲ್ಲೆಡೆ ಆಳೆತ್ತರದ ವರ್ಣರಂಜಿತ ಗಣಪನ ಮೂರ್ತಿಗಳು ರಾರಾಜಿಸುತ್ತಿವೆ. ಪರಿಸರ ಸ್ನೇಹಿ ಗಣೇಶನ ಮೂರ್ತಿಯನ್ನು ಪೂಜಿಸಿ ಎಂದು ಎಲ್ಲರೂ ಹೇಳುತ್ತಿದ್ದರೂ, ಬಣ್ಣದ ಗಣಪನನ್ನು ಪೂಜಿಸುವುದನ್ನು ಹೆಚ್ಚಿನವರು ಬಿಟ್ಟಿಲ್ಲ.
ಈ ನಿಟ್ಟಿನಲ್ಲಿ ಮುಂಬಯಿಯಲ್ಲಿ ನೆಲೆಸಿರುವ ಕನ್ನಡದ ಹುಡುಗ ಅಭ್ಯುದಯ ಕೃಷ್ಣ ಈ ಬಾರಿ ಮನೆಯಲ್ಲಿಯೇ ಪರಿಸರ ಸ್ನೇಹಿ ಗಣೇಶನನ್ನು ಸ್ವತಃ ತಾನೇ ಮಾಡಿದ್ದಾನೆ. ಹತ್ತು ವರ್ಷದ ಹುಡುಗನ ಆಸಕ್ತಿ ಮತ್ತು ಕಲಾವಂತಿಕೆ ಕಂಡಾಗ ಸಂತಸವೆನಿಸುತ್ತದೆ. ಇವನನ್ನು ಕಂಡ ಇವನ ಆಟದ ಗೆಳತಿ ಅದೇ ಅಪಾರ್ಟ್ ಮೆಂಟ್ನಲ್ಲಿರುವ ಮತ್ತೊಬ್ಬ ಹುಡುಗಿ ಜಾಹ್ನವಿಯೂ ಗಣಪನ ವಿಗ್ರಹವನ್ನು ತಾನೇ ಮಾಡಿದ್ದಾಳೆ. ಈ ಮಕ್ಕಳು ಇಂದು ಹಾಕಿರುವ ಹಾದಿಯನ್ನು ಮತ್ತೊಂದಷ್ಟು ದೊಡ್ಡವರು ಮತ್ತು ಮಕ್ಕಳೂ ಸಹಾ ಪಾಲಿಸಲಿ ಮತ್ತು ನಮ್ಮ ಪರಿಸರವನ್ನು ಕಾಪಾಡಲಿ ಎನ್ನುವುದು ಇವರ ತಾಯಂದಿರಾದ ಮೀರಾ ರಮಣ್ ಮತ್ತು ವಿದ್ಯಾ ಅವರ ಕಳಕಳಿ.
- ಮಂಜುಳಾ ರಾಜ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.