ರಬ್ಬರ್ನ ಕತೆ
ರಬ್ಬರ್ ಪ್ರಾಚೀನ ಇತಿಹಾಸ ಹೊಂದಿದೆ. ಇದನ್ನು ಒಂದು ಬಗೆಯ ಸಸ್ಯದಿಂದ ಪಡೆಯಲಾಗುತ್ತದೆ. ರಬ್ಬರ್ ಹಿಗ್ಗಿಸಬಹುದಾದ ಒಂದು ಪದಾರ್ಥ. ಅದನ್ನು ಅದರ ಮೂಲ ಉದ್ದದ ಎಂಟು ಪಟ್ಟು ಹೆಚ್ಚು ಉದ್ದವಾಗಿ ಹಿಗ್ಗಿಸಬಹುದು. 'ಲೇಟೆಕ್ಸ್' ಎನ್ನುವ ಬಿಳಿ ದ್ರವ ರಬ್ಬರ್ ಮರಗಳಿಂದ ಹೊರಬರುತ್ತದೆ. ಅದರಿಂದ ರಬ್ಬರ್ ತಯಾರಾಗುತ್ತದೆ. ಈ ದ್ರವ ಒಣಗಿದಾಗ ರಬ್ಬರ್ ಆಗುತ್ತದೆ. ಈ ರೀತಿ ಪಡೆದ ರಬ್ಬರ್ ಅನ್ನು ಸಹಜ ರಬ್ಬರ್ ಎನ್ನುತ್ತೇವೆ. ನಾನೂರಕ್ಕೂ ಹೆಚ್ಚು ಬಗೆಯ ಗಿಡಗಳಿಂದ ಬರುವ ರಸದಿಂದ ರಬ್ಬರ್ ಅನ್ನು ತಯಾರಿಸಬಹುದು. ಅತ್ಯಧಿಕ ರಬ್ಬರ್ ಕೊಡುವ ಗಿಡದ ಹೆಸರು ಹೆವಿಯ ಬ್ರೆಸಿಲಿಯೆನ್ಸಿಸ್. ಇದರ ಎತ್ತರ ಸುಮಾರು 120 ಅಡಿ. ಅತ್ಯಂತ ಹೆಚ್ಚು ರಬ್ಬರ್ ಕೊಡುವ ಮತ್ತೊಂದು ಗಿಡದ ಹೆಸರು ಕ್ಯಾಸ್ಟಿಲ್ಲ.
ರಬ್ಬರ್ ನಮಗೆ ತುಂಬಾನೇ ಉಪಯುಕ್ತ. ದಿನಬಳಕೆಯ ಅನೇಕ ವಸ್ತುಗಳು ರಬ್ಬರ್ನಿಂದ ತಯಾರಾಗುತ್ತದೆ. ಟೈರ್ಗಳು, ಟ್ಯೂಬ್ಗಳು, ಪೈಪ್ಗಳು, ಮಳೆಅಂಗಿಗಳು, ಜಮಖಾನೆ, ಒದ್ದೆಯಾಗದ ಬಟ್ಟೆಗಳೆಲ್ಲ ರಬ್ಬರ್ನಿಂದಲೇ ತಯಾರಾಗುತ್ತವೆ. ರಬ್ಬರನ್ನು ಕೆಲವು ದ್ರವಗಳಲ್ಲಿ ಕರಗಿಸಬಹುದು. ಆದ್ದರಿಂದ ಅದಕ್ಕೆ ಯಾವುದೇ ಆಕಾರವನ್ನಾಗಲೀ ಕೊಡಬಹುದು.
= ಹರಳಹಳ್ಳಿ ಪುಟ್ಟರಾಜು,
ಪಾಂಡವಪುರ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.