ಮಧುವಸ್ತ್ರ
ಮಂಗಳವಾದ್ಯಗಳು ಇದ್ದಿದ್ದರೆ, ಅದೊಂದು ಮದುವೆ ಮನೆ ಎಂದೇ ಭ್ರಮಿಸಬೇಕಾಗಿತ್ತೋ ಏನೋ. ಹೊಸ ಬಗೆಯ, ನೂತನ ವಿನ್ಯಾಸದ ಧಿರಸು ಧರಿಸಿ ಸರಭರ ಓಡಾಡುವ ಹುಡುಗ- ಹುಡುಗಿಯರು. ಹಸೆಮಣೆಯ ಶೃಂಗಾರದಲ್ಲಿ ಪ್ರತ್ಯಕ್ಷರಾಗುತ್ತಿದ್ದ ವಧು- ವರರು. ಆದರೂ ಅಲ್ಲಿ ಗಮನ ಇದ್ದದ್ದು ವಧುವರರ ಮೇಲಲ್ಲ, ಅವರು ತೊಟ್ಟಿದ್ದ ಉಡುಪುಗಳ ಮೇಲೆ.
ಇದು ಬೆಂಗಳೂರಿನ ಬಾಲ್ಡ್ವಿನ್ ಮೆಥಡಿಸ್ಟ್ ಕಾಲೇಜಿನಲ್ಲಿ ನಡೆದ ಬ್ರೈಡಲ್ ಫ್ಯಾಶನ್ ವೀಕ್ನ ನೋಟ.
ಮದುವೆಗಳ ಸೀಸನ್ ಸಮೀಪಿಸುತ್ತಿದೆ. ಈ ಸಂದರ್ಭದಲ್ಲಿ ವಧು- ವರರ ಹೊಸ ವಿನ್ಯಾಸದ ಉಡುಪುಗಳಿಗೂ ಬೇಡಿಕೆ ಬಹಳ. ಈ ನಿಟ್ಟಿನಲ್ಲಿ ಬಾಲ್ಡ್ವಿನ್ ಕಾಲೇಜಿನ ಫ್ಯಾಶನ್ ವಿದ್ಯಾರ್ಥಿಗಳು ಹೊಸ ಟ್ರೆಂಡ್ ಅನ್ನೇ ದಾಖಲಿಸಿದರು. 10ಕ್ಕೂ ಹೆಚ್ಚು ಕಾಲೇಜು ವಿದ್ಯಾರ್ಥಿಗಳು ಈ ಫ್ಯಾಶನ್ ಶೋದಲ್ಲಿ ಭಾಗವಹಿಸಿದರು. ಕವಿತಾ ಲಂಕೇಶ್, ಅನಿತಾ ಭಟ್, ರಾಜೇಶ್ ಶೆಟ್ಟಿ, ಶುಭಾ ಪೂಂಜಾ, ವಿಶಾಲ್ ಹೆಗ್ಡೆ ಮೊದಲಾದ ಗಣ್ಯರಿದ್ದರು. ರಾಜಸ್ಥಾನಿ, ಮೊಗಲ್, ಬಂಗಾಳಿ, ಪಾಶ್ಮಿಮಾತ್ಯ, ಕೇರಳ, ಕರ್ನಾಟಕ ಮುಂತಾದ ಮಾದರಿಯ ವಿವಾಹ ತೊಡುಗೆಗಳು ಇಲ್ಲಿ ರಾರಾಜಿಸಿದವು.
- ಚಿತ್ರ: ಕೆ.ರವಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.