'ಸಿಂಗಾರೆವ್ವ ಮತ್ತು ಅರಮನೆ'
ಎಲ್ಲ ಪಾತ್ರಗಳಲ್ಲೂ ಪರಕಾಯ ಪ್ರವೇಶ ಮಾಡಿದಂತೆ ನಟಿಸುವ ಖ್ಯಾತ ರಂಗಕರ್ಮಿ ಲಕ್ಷ್ಮೀ ಚಂದ್ರಶೇಖರ್ ಅವರ ಕನ್ನಡ ಏಕವ್ಯಕ್ತಿ ರಂಗ ಪ್ರಸ್ತುತಿ 'ಸಿಂಗಾರವ್ವ ಮತ್ತು ಅರಮನೆ' ಮರುಪ್ರದರ್ಶನಗೊಳ್ಳಲಿದೆ. ಕ್ರಿಯೇಟಿವ್ ಥಿಯೇಟರ್ ಈ ಕಾರ್ಯಕ್ರಮ ಆಯೋಜಿಸಿದೆ. ಏಕಪಾತ್ರಾಭಿನಯ ಕ್ಷೇತ್ರದಲ್ಲಿ ಅನುಪಮ, ಅಮೋಘ ದಾಖಲೆ ನಿರ್ಮಿಸಿದ ಲಕ್ಷ್ಮೀ ಚಂದ್ರಶೇಖರ್ ನಟನೆಯ, ಡಾ. ಚಂದ್ರಶೇಖರ್ ಕಂಬಾರರ ಇದೇ ಹೆಸರಿನ ಕಾದಂಬರಿಯನ್ನು ನಾಟಕಕ್ಕೆ ಅಳವಡಿಸಿ, ಸೌಮ್ಯವರ್ಮ ನಿರ್ದೇಶಿಸಿದ್ದಾರೆ. ಅನೇಕ ರಾಷ್ಟ್ರೀಯ ನಾಟಕೋತ್ಸವಗಳಲ್ಲಿ ಹಾಗೂ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಈ ನಾಟಕ ಪ್ರದರ್ಶನಗೊಂಡಿದ್ದು, ಪ್ರೇಕ್ಷಕರ, ವಿಮರ್ಶಕರ ಪ್ರಶಂಸೆಗೆ ಪಾತ್ರವಾಗಿದೆ. ಅಮೆರಿಕದ ಲಾಸ್ಏಂಜಲೀಸ್ನಲ್ಲಿ ನಡೆದ ಸ್ತ್ರೀ ನಾಟಕೋತ್ಸವದಲ್ಲಿ ಪ್ರದರ್ಶನಗೊಂಡಿರುವ ಏಕೈಕ ಭಾರತೀಯ ನಾಟಕ ಇದಾಗಿದೆ. ದಿನಾಂಕ: 05-09-2013, ಸ್ಥಳ: ರಂಗಶಂಕರ, ಸಮಯ: ಸಂಜೆ 7.30, ಹೆಚ್ಚಿನ ವಿವರಗಳಿಗೆ 9620604479 ಸಂಪರ್ಕಿಸಿ.