ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಅಕ್ಷರ ಸಂಸಾರ

Vishwanath S
Updated On : 4 Sept 2013, 6:16 am

ತಾನು ಸಂಸಾರಸ್ಥನಾದರೆ ಬಡ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುತ್ತೆ ಎಂಬ ಕಾರಣದಿಂದ, ಅವಿವಾಹಿತನಾಗೇ ಉಳಿದು ಫುಲ್‌ಟೈಮ್ ಮೇಸ್ಟ್ರಾಗಿಯೇ ಉಳಿದ ವ್ಯಕ್ತಿಯ ಬಗ್ಗೆ ಕೇಳಿದ್ದೀರಾ? ಬಡ ಮಕ್ಕಳನ್ನು ತಮ್ಮ ಆಶ್ರಮದಲ್ಲಿಯೇ ಇಟ್ಟುಕೊಂಡು ಅವರಿಗೆ ಉಚಿತ ಟ್ಯೂಷನ್ ಹೇಳಿ ಅವರ ಬಾಳಲ್ಲಿ ಬೆಳಕಾಗಿರುವ ಈ ನಿವೃತ್ತ ಶಿಕ್ಷಕರ ಹೆಸರು ಬಿ.ಜಿ. ಅಣ್ಣಿಗೇರಿ.
ಗದಗದ ಬಿ.ಜಿ. ಅಣ್ಣಿಗೇರಿ ಗುರುಗಳು ಮೂಲತಃ ರೋಣ ತಾಲೂಕಿನ ಮುದೇನಗುಡಿ ಗ್ರಾಮದವರು. 1954ರಿಂದ ಶಿಕ್ಷಕ ವೃತ್ತಿ ಆರಂಭಿಸಿದ ಇವರು ನಿವೃತ್ತಿಯಾಗಿಯೇ 20 ವರ್ಷ ಕಳೆದಿವೆ. ಆದರೂ ಮಕ್ಕಳಿಗೆ ಅಕ್ಷರ ಕಲಿಸೋದನ್ನ ನಿಲ್ಲಿಸಿಲ್ಲ. ಜೀವನದ ಕೊನೆಯುಸಿರು ಇರೋವರೆಗೂ ಅಕ್ಷರ ಕಲಿಸಬೇಕು ಅನ್ನೋದು ಅವರ ಮಹದಾಸೆ. ಮದುವೆ ಆದ್ರೆ ಮನಸ್ಸು ಬೇರೆ ಕಡೆ ಹರಿದಾಡುತ್ತೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡೋಕೆ ಆಗೋಲ್ಲ ಎಂಬ ಕಾರಣದಿಂದಲೇ ಮದುವೆಯಾಗದೇ ಉಳಿದಿದ್ದಾರೆ!

ಮಹನೀಯರೇ ಪ್ರೇರಣೆ
1957ರಿಂದ ಶಿಕ್ಷಣ ಕಲಿಸುವ ಜತೆಗೆ ಬಡ ಮಕ್ಕಳಿಗೆ ಉಚಿತ ಮನೆಪಾಠ ಹೇಳಲು ಆರಂಭಿಸಿದರು. ಸ್ವಾಮಿ ರಾಮತೀರ್ಥರು, ಸ್ವಾಮಿ ವಿವೇಕಾನಂದ ಮತ್ತು ರಾಮಕೃಷ್ಣ ಪರಮಹಂಸರ ಸಂದೇಶಗಳು ಇವರ ಮನಸ್ಸಿನ ಮೇಲೆ ಆಗಾಧ ಪರಿಣಾಮ ಬೀರಿದವು. ಅವರನ್ನೇ ಆದರ್ಶವಾಗಿರಿಸಿಕೊಂಡು ಮೂಲ ಗ್ರಾಮ ಮುದೇನಗುಡಿ ಬಿಟ್ಟು ಗದಗದಲ್ಲಿ ನೆಲೆಸಿದರು. ಬದುಕಿನುದ್ದಕ್ಕೂ ಪರೋಪಕಾರ ತತ್ವವನ್ನೇ ಮಕ್ಕಳಿಗೆ ನಿರಂತರ ಪಾಠ ಮಾಡಿದ್ದಾರೆ.

ಶಿಕ್ಷಣ ಆಶ್ರಮ
ಸರ್ಕಾರದಿಂದ ತಮಗೆ ಬರುತ್ತಿದ್ದ ಸಂಬಳದಲ್ಲೇ ಬಡಮಕ್ಕಳಿಗೆ ಶೈಕ್ಷಣಿಕ ಸವಲತ್ತು, ಉಚಿತ ಮನೆಪಾಠ, ಹೊಟ್ಟೆ ತುಂಬ ಊಟವನ್ನೂ ನೀಡತೊಡಗಿದರು. ನಂತರ ಇಂತಹ ಮಕ್ಕಳಿಗೆ ಆಶ್ರಮ ಆರಂಭಿಸಿದರು. 10 ಬಡ ಮಕ್ಕಳಿಂದ ಆರಂಭವಾದ ಆಶ್ರಮ ನಂತರ ಈಗ 100 ಮಕ್ಕಳವರೆಗೆ ಬಂದು ತಲುಪಿದೆ. ನಿತ್ಯ 100ಕ್ಕೂ ಹೆಚ್ಚು ಮಕ್ಕಳು ಊಟ ಹಾಗೂ ಉಚಿತ ಶಿಕ್ಷಣ ಪಡೆಯುತ್ತಿದ್ದಾರೆ.
ಬೆಳಗ್ಗೆ 6 ಗಂಟೆಯಿಂದ 8 ಗಂಟೆ ಮತ್ತು ಸಂಜೆ 5 ಗಂಟೆಯಿಂದ 7ರವರೆಗೆ ಮನೆಪಾಠ. ಇಂಗ್ಲಿಷ್, ಸಮಾಜ ವಿಜ್ಞಾನ ಮತ್ತು ಗಣಿತ ವಿಷಯಗಳ ಕಲಿಕೆ. ಇವರ ಕೈಯಲ್ಲಿ ಕಲಿತ ಅನೇಕರು ಅಮೆರಿಕ, ಜರ್ಮನಿ, ಬೆಂಗಳೂರು, ಮುಂಬೈ ಸೇರಿದಂತೆ ವಿವಿಧ ಕಡೆಗಳಲ್ಲಿ ಉನ್ನತ ಹುದ್ದೆಗಳಲ್ಲಿದ್ದಾರೆ. ಇವರ ಕಾರ್ಯ ನೋಡಿ 2000ರಲ್ಲಿ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ.

- ಶಿವಕುಮಾರ ಕುಷ್ಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments