ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಅಪಾಯದಲ್ಲೂ ಉಪಾಯ ತೋರಿ ಪಾರಾದ ಸ್ವಾಮೀಜಿ!

Vishwanath S
Updated On : 6 Sept 2013, 2:19 am

ಅಪಾಯ ಎದುರಾದಾಗ  ಧೈರ್ಯ ಕಳೆದುಕೊಳ್ಳದ ದಿಟ್ಟತನ ಸ್ವಾಮಿ ವಿವೇಕಾನಂದರದು. ಅವರ ಮಾತಿನಲ್ಲಿ ಕಾಣುವ ಕೆಚ್ಚು, ಶೌರ್ಯ, ಶ್ರೀಮಂತಿಕೆ, ಸಂದರ್ಭೋಚಿತ ಕುಶಲತೆಗಳನ್ನು ಅವರು ವಾಸ್ತವ ಜೀವನವನ್ನು ಎದುರಿಸಿದ ರೀತಿಯಲ್ಲಿ ಕಾಣುತ್ತೇವೆ.
ಒಮ್ಮೆ ವಿವೇಕಾನಂದರು ಸಾಧು ಸಂತರು ವಾಸವಾಗಿರುವ ಕಾಠೇವಾಡದ ಲಿಂಬ್ಡಿಗೆ ಬಂದರು. ಈ ಸಾಧುಗಳು ಸ್ವಾಮೀಜಿಯನ್ನು ಆದರದಿಂದ ಸ್ವಾಗತಿಸಿ, ಉಳಿದುಕೊಳ್ಳಲು ವ್ಯವಸ್ಥೆ ಮಾಡಿದರು. ಆದರೆ ಒಂದೆರಡು ದಿನಗಳಲ್ಲೇ ಸ್ವಾಮೀಜಿಗೆ ಗೊತ್ತಾಯಿತು, ಈ ಸಾಧುಗಳೆಲ್ಲ ಕೀಳುಮಟ್ಟದ ವಾಮಾಚಾರಿಗಳು ಎಂದು. ತಕ್ಷಣ ಅಲ್ಲಿಂದ ಹೊರಡಲು ನಿರ್ಧರಿಸಿದರು. ಆದರೆ ಕೋಣೆಯ ಬಾಗಿಲಿಗೆ ಹೊರಗಿನಿಂದ ಬೀಗ ಹಾಕಲಾಗಿತ್ತು. ಸ್ವಾಮೀಜಿ ಅಲ್ಲಿಂದ ಪಾರಾಗುವ ಉಪಾಯವನ್ನು ಯೋಚಿಸುತ್ತಿರುವಾಗ, ಸಾಧುಗಳ ಮುಖಂಡನಿಂದ ಕರೆಬಂತು.
'ಏನಪ್ಪಾ, ನಿನ್ನ ಮುಖದ ಕಳೆಯನ್ನು ನೋಡಿದರೆ ಬಹಳ ಸಾಧನೆ ಮಾಡಿ, ಒಳ್ಳೆಯ ಶಕ್ತಿಯನ್ನು ಪಡೆದುಕೊಂಡಿರುವಂತೆ ಕಾಣುತ್ತೀ! ಈಗ ನಿನ್ನ ಆ ತಪಸ್ಸಿನ ಫಲವನ್ನೆಲ್ಲ ನಮಗೆ ಕೊಟ್ಟುಬಿಡಬೇಕು. ನಾವು ಸಾಧನೆ ಮಾಡಿ ಸಿದ್ಧಿ ಪಡೆದುಕೊಳ್ಳಲು ನಿನ್ನ ಬ್ರಹ್ಮಚರ್ಯವನ್ನು ಭಂಗ ಮಾಡಲಿದ್ದೇವೆ' ಎಂದ. ಸ್ವಾಮೀಜಿ ಧೃತಿಗೆಡದೆ, ಅಲ್ಲಿಂದ ತಪ್ಪಿಸಿಕೊಳ್ಳಲು ಉಪಾಯವನ್ನು ಸಿದ್ಧಪಡಿಸಿಕೊಂಡರು. ಪ್ರತಿದಿನ ತಮ್ಮ ಕೋಣೆಗೆ ಬರುತ್ತಿದ್ದ ಹುಡುಗನ ಸಹಾಯ ಪಡೆದು, ಮಡಕೆಯ ಚೂರಿನಲ್ಲಿ ಇದ್ದಿಲಿನಿಂದ ಬರೆದು, ಅಲ್ಲಿಯ ರಾಜನಿಗೆ ತಲುಪಿಸುವಂತೆ ಹೇಳಿದರು. ಸಂದೇಶ ಓದಿದ ರಾಜ, ತಕ್ಷಣ ಸೈನಿಕರನ್ನು ಕಳಿಸಿ ಸ್ವಾಮೀಜಿಯನ್ನು ಬಿಡಿಸಿದ.


-ಆನಂದ ಎಸ್.ಎನ್.
anandsn193@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement