ಪುಟಾಣಿಗಳಿಂದ ಭೀಷ್ಮೋತ್ಪತ್ತಿ
ಬೆಂಗಳೂರಿನ ಯಕ್ಷಕಲಾ ಅಕಾಡೆಮಿ ತನ್ನ ಪ್ರತಿಭಾನ್ವಿತ ಬಾಲಕಲಾವಿದರಿಂದ 'ಭೀಷ್ಮೋತ್ಪತ್ತಿ' ಪ್ರಸಂಗವನ್ನು ಪ್ರಸ್ತುತಪಡಿಸಲಿದೆ. ಈ ಯಕ್ಷಗಾನ ಪ್ರದರ್ಶನವು ಯಕ್ಷಗುರು ಕೃಷ್ಣಮೂರ್ತಿ ತುಂಗರ ಸಾರಥ್ಯದಲ್ಲಿ ಪ್ರದರ್ಶನಗೊಳ್ಳಲಿದೆ. 1900ರಲ್ಲಿ 'ಭೀಷ್ಮೋತ್ಪತ್ತಿ' ಪ್ರಸಂಗವನ್ನು ರಚಿಸಿದವರು ಹಲಸಿನಹಳ್ಳಿ ನರಸಿಂಹ ಶಾಸ್ತ್ರಿಯವರು. ಈ ಪ್ರದರ್ಶನದಲ್ಲಿನ ವಿಶೇಷತೆಯೆಂದರೆ, ಸಾಂಪ್ರದಾಯಿಕ ಒಡ್ಡೋಲಗ, ಅಂಬಿಗನ ಒಡ್ಡೋಲಗ, ಪ್ರಾಂತೀಯ ಭಾಷೆಯ ಸೊಗಡು, ವಿಶೇಷ ಬೆಳಕಿನ ವಿನ್ಯಾಸ. 'ಸರ್ವಸ್ವ' ಆಯೋಜಿಸಿರುವ ಈ ಯಕ್ಷಗಾನ ಪ್ರದರ್ಶನ, ಸೆಪ್ಟೆಂಬರ್ 7, ಶನಿವಾರ ಸಂಜೆ 7 ಗಂಟೆಗೆ ಕೆ.ಎಚ್. ಕಲಾಸೌಧ, ರಾಮಾಂಜನೇಯ ಗುಡ್ಡ, ಹನುಮಂತನಗರ ಇಲ್ಲಿ ನಡೆಯಲಿದೆ. ವಿವರಗಳಿಗೆ ಸಂಪರ್ಕಿಸಿ: 9880046769, 9986474787.