ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಸ್ವಾದಭರಿತ ಕಾಫಿ

Vishwanath S
Updated On : 6 Sept 2013, 2:20 am

'ಬೈಟು ಕಾಫಿ'ಗೆ ವರ್ಷ ತುಂಬಿದ್ದು ಹರ್ಷವಾಗಿದೆ. 'ಬೈಟು ಕಾಫಿ' ನನಗೆ ಬರೆಯುವ ಅವಕಾಶ ನೀಡಿದೆ.  ಮುಂದೆಯೂ ಈ 'ಬೈಟು ಕಾಫಿ' ಮತ್ತಷ್ಟು ಸ್ವಾದಭರಿತವಾಗಿ ಬರುವುದೆಂಬ ವಿಶ್ವಾಸ ನನಗಿದೆ.
-ಮಂಜುನಾಥ್ ಎಲ್.ಕೆ., ಬೆಂಗಳೂರು.

ಒಂದು ರು. ಹೆಚ್ಚು ನೀಡಲು ರೆಡಿ!
ಬೈಟು ಕಾಫಿಯ ಬಣ್ಣ, ರುಚಿ, ಪರಿಮಳವನ್ನು ಸವಿದ ನಮಗೆ, ಈಗ ಕೆಲವು ದಿನ ಬರುತ್ತಿರುವ ಭಾರಿ ಜಾಹೀರಾತುಗಳು ಸ್ವಲ್ಪ ಕಿರಿಕಿರಿ ಅನ್ನಿಸುತ್ತಿವೆ. ಜಾಹೀರಾತನ್ನು ಕಡಿಮೆ ಮಾಡಿ ವಾರದ 5 ದಿನದ ಬದಲು 7 ದಿನವೂ 'ಬೈಟು ಕಾಫಿ' ಕೊಟ್ಟರೆ ಒಂದು ರುಪಾಯಿ ಹೆಚ್ಚಿಗೆ ಕೊಟ್ಟು ಕೊಂಡು ಓದಲು ಏನೂ ಬೇಸರವಿಲ್ಲ. ಇಷ್ಟು ದಿವಸ 'ಬೈಟು ಕಾಫಿ' ಸವಿಯುತ್ತಾ ವರ್ಷ ಕಳೆದದ್ದೇ ಗೊತ್ತಾಗಲಿಲ್ಲ. ಇನ್ನೂ ಸ್ವಲ್ಪ ಹೆಚ್ಚಿಗೆ ಮನರಂಜನೆಯನ್ನು ನೀಡಿದರೆ ಕಾಫಿಯ ಸ್ವಾದ ಇನ್ನಷ್ಟು ಅಧಿಕವಾಗಬಹುದೇನೋ. ಪತ್ರಿಕೆ ಬಂದ ಕೂಡಲೇ ಕಾಫಿಯ ಕಪ್ ಜೊತೆಗೆ ಕೈಗೆತ್ತಿಗೊಳ್ಳುವುದು. 'ಬೈಟು ಕಾಫಿ' ತಂಡಕ್ಕೆ ಶುಭ ಹಾರೈಕೆಗಳು.
-ಓಂ ಚನ್ನೇಶ, ಅರಬಿಳಚಿ ಕ್ಯಾಂಪ್, ಭದ್ರಾವತಿ


ಹೀಗೆಯೇ ಮುಂದುವರಿಯಲಿ
ಮುಂಜಾವಿನ ಕಾಫಿಯ ಸ್ವಾದ ಸವಿಯುತ್ತಿರುವಾಗ 'ಬೈಟು ಕಾಫಿ' ತನ್ನ ವಿಷಯ ವೈವಿಧ್ಯದೊಂದಿಗೆ ಮನೋರಂಜನಾತ್ಮಕ ವಿಷಯಗಳಿಂದ ಮೆದುಳಿಗೆ ಮೇವನ್ನು ಒದಗಿಸುತ್ತಿದೆ. ಸಾಹಿತ್ಯ, ಆರೋಗ್ಯ, ಕ್ರೀಡೆ, ಪದಬಂಧ, ಕಿರುಗಥೆ, ಕವನ, ಮಕ್ಕಳ ರಂಜನೆ, ಪ್ರತಿಭಾ ಪರಿಚಯ, ವಿಜ್ಞಾನ, ಜಾನಪದ, ಆಧ್ಯಾತ್ಮ, ಸಿನಿಮಾ, ಹೀಗೆ ಹತ್ತು ಹಲವು ವಿಚಾರಗಳನ್ನು ಸತತವಾಗಿ ಒಂದು ವರ್ಷ ಕಾಲ ಓದುಗರಿಗೆ ಒದಗಿಸಿ ಈಗ ಎರಡನೆಯ ವರ್ಷದತ್ತ ಸಾಗುತ್ತಿರುವ ಈ 'ಬೈಟು ಕಾಫಿ'ಯು ನಿರಂತರವಾಗಿ ಸಾಗಿ ಸಂಭ್ರಮಿಸಲಿ. ಎಲ್ಲಾ ವಯೋವಾನದ ಅಭಿರುಚಿಯ ಸಂಗಾತಿಯಾಗಿ ಮುಂದುವರೆಯಲಿ. ಎರಡನೇ ವರ್ಷದ ಮೊದಲ ಸಂಚಿಕೆ ಸಂಗ್ರಹ ಯೋಗ್ಯವಾಗಿದೆ. ತಂಡಕ್ಕೆ ಅಭಿನಂದನೆಗಳು.
-ಯು.ಎನ್. ಸಂಗನಾಳಮಠ, ಹೊನ್ನಾಳಿ


ಪ್ರಚೋದಕ ಮಾಹಿತಿ ಕೋಶ
ಬೈಟು ಕಾಫಿಗೆ ತುಂಬಿದೆ
ವರುಷ
ಓದುಗನಿಗೆ ತಂದಿದೆ
ಹರುಷ
ಘಮ ಘಮ
ಸ್ವಾದದ ಸವಿಯಾದ
ರುಚಿ, ಇಮ್ಮಡಿಗೊಂಡಿತು
ಓದುಗನ ಅಭಿರುಚಿ
'ಅಭಿನಂದನೆಗಳು' ಬೈಟು ಕಾಫಿ-ಬಳಗಕ್ಕೆ
ಹತ್ತು ಹಲವು ವಿಚಾರಗಳ ಸದಭಿರುಚಿಯ
ವಿಚಾರ ಪ್ರಚೋದಕ ಮಾಹಿತಿ
ಹಲವು ಪ್ರತಿಭೆಗಳನ್ನು ಬೆಳಕಿಗೆ ತಂದ ಕೀರ್ತಿ
ಬೈಟು ಕಾಫಿಗೆ.
-ಕಿರಣ್‌ಕುಮಾರ್ ಎಚ್.ಎನ್.,  ಹಳೇಹಳ್ಳಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments