ಗಣೇಶ ಚತುರ್ಥಿ
ಭಾರತದಲ್ಲಿ ಅತಿ ವೈಭವದಿಂದ ಆಚರಿಸುವ ಹಬ್ಬ ಗಣೇಶ ಚತುರ್ಥಿ. ಪ್ರತಿವರ್ಷ ಭಾದ್ರಪದ ಮಾಸ ಶುಕ್ಲಪಕ್ಷದ ಚತುರ್ಥಿಯ ದಿನ ಈ ಹಬ್ಬ ಆಚರಿಸಲಾಗುತ್ತದೆ.
ಅಂದು ಆದಿ ಪೂಜಿತ, ಬುದ್ಧಿ ಪ್ರದಾಯಕ, ಸಿದ್ಧಿದಾಯಕ, ಗಣಗಳ ಅಧಿಪತಿ, ಚಿಣ್ಣರ ಪ್ರೀತಿಯ ದೇವ, ಮೋದಕ-ಗರಿಕೆ ಪ್ರಿಯ, ಗಣೇಶನ ಉತ್ಸವದ ಸಡಗರದಲ್ಲಿ ನಾಡಿಗೆ ನಾಡೇ ಮಿಂದೇಳುತ್ತದೆ.
ಗಣೇಶನ ಕೈಯಲ್ಲಿರುವ ಅಂಕುಶ ಅಹಂ ನಿಯಂತ್ರಣದ ಪ್ರತೀಕ. ಪಾಶ ಹುಚ್ಚೆದ್ದ ಮನಸ್ಸಿಗೆ ಕಡಿವಾಣಹಾಕುವ ಸಂಕೇತ. ಮೊರದಗಲದ ಕಿವಿ ಸತ್ಯವನ್ನು ಅಸತ್ಯದಿಂದ ಬೇರ್ಪಡಿಸಲು ವಿವೇಕವನ್ನು ಬಳಸಬೇಕೆಂಬ ಸಂದೇಶ ಸಾರುತ್ತದೆ.
ಭಾವ, ಭೌತಿಕ, ವಿಜ್ಞಾನ ಜಗತ್ತನ್ನು ಸರಿಸಮನಾಗಿ ವ್ಯಾಪಿಸಿರುವ ವಿಘ್ನನಿವಾರಕ ಗಣಪತಿಯ ತಲೆಯು ಆತ್ಮದ ಪ್ರತೀಕವಾದರೆ, ದೇಹ ಮಾಯೆಯ ಪ್ರತೀಕ.
ಅದೆಷ್ಟೇ ಹಬ್ಬಗಳಿದ್ದರೂ ಗಣೇಶ ಚೌತಿಗೆ ವಿಶೇಷ ಮಹತ್ವವಿದೆ. ಗಣೇಶನ ಆಳ್ವಿಕೆಗೆ ಒಳಪಟ್ಟಿರುವ 21 ತತ್ತ್ವಗಳಲ್ಲಿ ಕೊನೆಯದು ಮನಸ್ಸು.
ಆದಿವಂದಿತ ಶ್ರೀ ಗಣೇಶನನ್ನು ದ್ವಾದಶ (12) ನಾಮ ಸ್ತೋತ್ರ ಪಠಣದೊಂದಿಗೆ ಪೂಜಿಸುವ, 21 ನಮಸ್ಕಾರ ಮಾಡುವ ಪದ್ಧತಿ ಇಂದಿಗೂ ಆಚರಣೆಯಲ್ಲಿದೆ.
ಹಬ್ಬದಂದು ಶ್ರೀ ಗಣೇಶನಿಗೆ ಪ್ರಿಯವಾದ ಮೋದಕ, ಕರಿಗಡಬು ನೈವೇದ್ಯ ಮಾಡಿ, ಅಷ್ಟೋತ್ತರ ಶತ ನಾಮಾವಳಿಗಳಿಂದ (108 ನಾಮ) ಪೂಜಿಸಲಾಗುತ್ತದೆ. ಮಂಗಳ ಮೂರ್ತಿಯನ್ನು ಪ್ರತಿದಿನ ಪೂಜಿಸು ವುದರಿಂದ ಎಲ್ಲವೂ ಮಂಗಳಕರ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.