ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಪರಿವ್ರಾಜಕರಾಗಿ ಕಂಡ ವಾಸ್ತವ ಭಾರತ

Vishwanath S
Updated On : 8 Sept 2013, 2:23 am

ಸ್ವಾಮಿ ವಿವೇಕಾನಂದರು ಪರಿವ್ರಾಜಕರಾಗಿ ದೇಶದಾದ್ಯಂತ ಸಂಚಾರಕ್ಕೆ ಹೊರಟರು. ಸರ್ವವನ್ನೂ ತ್ಯಾಗ ಮಾಡಿದ ಅವರು ಉನ್ನತ ಅಧಿಕಾರಿಗಳ, ರಾಜಮಹಾರಾಜರ ಅತಿಥಿಯಾಗಿ ಉಳಿಯುತ್ತಿದ್ದುದು ಜನರಲ್ಲಿ ಅನುಮಾನಕ್ಕೆಡೆಮಾಡಿತು. ವಾಸ್ತವವೆಂದರೆ, ಅವರು ಪಾಳುಬಿದ್ದ ದೇವಾಲಯದಲ್ಲೋ, ಊರಾಚೆಯ ಆಲದ ಮರದ ನೆರಳಿನಲ್ಲೋ ಮಲಗುತ್ತಿದ್ದುದು ಅಷ್ಟೇ ಸತ್ಯ. ಯಾರ ಔತಣ, ಆತಿಥ್ಯಗಳಿಂದಲೂ ವಿಚಲಿತರಾಗದೆ ಒಬ್ಬ ಭಿಕಾರಿ ಸನ್ಯಾಸಿಯಂತೆಯೇ ಸಾಗಿದರು ಸ್ವಾಮೀಜಿ. ಅವರ ಬಳಿಯಿದ್ದುದು ಪುಸ್ತಕಗಳ ಗಂಟು, ಕಾವಿಬಟ್ಟೆ ಮತ್ತು ದಂಡ-ಕಮಂಡಲು ಮಾತ್ರ.
ಅವರು ಉನ್ನತ ಹುದ್ದೆಯ ಅಧಿಕಾರಿಗಳು, ದಿವಾನರು, ರಾಜರುಗಳನ್ನು ಭೇಟಿ ಮಾಡುತ್ತಿದ್ದುದಕ್ಕೂ ಕಾರಣವಿತ್ತು. 'ಯಾರ ಕೈಯಲ್ಲಿ ಅಧಿಕಾರ-ಹಣ ಇದೆಯೋ ಅವರ ಹೃದಯ ಗೆಲ್ಲಲು ಸಾಧ್ಯವಾದರೆ ನನ್ನ ಉದ್ದೇಶ ಶೀಘ್ರವಾಗಿ ಕೈಗೂಡುತ್ತದೆ. ಒಬ್ಬ ಮಹಾರಾಜನ ಮೇಲೆ ಪ್ರಭಾವ ಬೀರುವುದರ ಮೂಲಕ ಪರೋಕ್ಷವಾಗಿ ಸಾವಿರಾರು ಜನರಿಗೆ ನೆರವಾಗಬಹುದು' ಎನ್ನುತ್ತಿದ್ದರು. ಅವರ ಪಾಲಿಗೆ ತ್ಯಾಗ ಮತ್ತು ಸೇವೆಗಳೇ ಆದರ್ಶದ ಎರಡು ಕಣ್ಣುಗಳಾಗಿದ್ದವು.
ಹೀಗೆ ಸಂಚರಿಸುತ್ತಾ ಸ್ವಾಮೀಜಿ ಪೋರ್‌ಬಂದರಿನ ದಿವಾನರಾದ ಶಂಕರ ಪಾಂಡುರಂಗರನ್ನು ಭೇಟಿಯಾದರು. ದಿವಾನರು 'ನೀವು ಈ ದೇಶದಲ್ಲಿ ಹೆಚ್ಚಿನದೇನನ್ನೂ ಸಾಧಿಸಲಾರಿರಿ. ಏಕೆಂದರೆ ನಿಮ್ಮನ್ನು ಅರ್ಥಮಾಡಿಕೊಳ್ಳಬಲ್ಲವರು ಬಹಳ ಕಡಿಮೆ. ನೀವು ಪಾಶ್ಚಾತ್ಯ ರಾಷ್ಟ್ರಗಳಿಗೆ ಹೋಗಿ ಅಲ್ಲಿಯ ಜನರಿಗೆ ನಮ್ಮ ಸನಾತನ ಧರ್ಮವನ್ನು ಪ್ರಚಾರ ಮಾಡುವುದರಿಂದ ಅವರಿಗೆ ಹೊಸ ಬೆಳಕನ್ನು ನೀಡಬಲ್ಲಿರಿ' ಎಂದು ಮರುವರ್ಷ ನಡೆಯಲಿರುವ 'ಧರ್ಮಸಮ್ಮೇಳನ'ದಲ್ಲಿ ಭಾಗವಹಿಸುವಂತೆ ಸಲಹೆ ನೀಡಿದರು.


-ಆನಂದ ಎಸ್.ಎನ್.
anandsn193@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement