ಸಾಂಝಿ ಗಣಪ
ಸೃಜನಶೀಲ ಕಲಾವಿದ ಬಣ್ಣವನ್ನು ಹೊರತುಪಡಿಸಿ ತನಗೆ ಸಾಧ್ಯವಿರುವೆಡೆಯೆಲ್ಲಾ ಕಲಾಕೃತಿ ರಚಿಸಲು ಹೊಂಚುತ್ತಾನೆ. ಮೈಸೂರಿನ ಎಸ್.ಎಫ್. ಹುಸೇನಿಯ ಕೈಗೆ ಕಾಗದ ಹೀಗೆ ಸಿಕ್ಕಿ ಗಣಪನಾಗಿದೆ. ಇದಲ್ಲದೆ ಇವರ ಬಳಿ ಸಾವಿರಾರು 'ಬೆಂಕಿಪೊಟ್ಟಣ ಗಣೇಶ'ರೂ ಇದ್ದಾರೆ.
ಗಣಪತಿ ಮೂರ್ತಿ, ಮುಖವಾಡ ಮುಂತಾದ 3ಡಿ ಅವತಾರಗಳನ್ನು ಅವರು ಸೃಷ್ಟಿಸಬಲ್ಲರು. ಇದಕ್ಕೆ ಬಳಕೆಯಾಗಿರುವ ವಸ್ತು ಮಾತ್ರ ಶುಭ್ರ ಬಿಳಿ ಬಣ್ಣದ ಕಾಗದ ಹಾಗೂ ಕತ್ತರಿ. ಈ ಕಲೆಯ ಹೆಸರು ಸಾಂಝಿ ಕಾಗದ ಕತ್ತರಿ ಕಲೆ. ಮೂಲತಃ ಮೈಸೂರಿನವರಾದ ಹುಸೇನಿ ಬೆಂಗಳೂರಿನ ಜಯನಗರದಲ್ಲಿ ಸಾಂಝಿ ಕಲೆ ಗ್ಯಾಲರಿ ನಡೆಸುತ್ತಿದ್ದಾರೆ. ಧಾರವಾಡ ವಿಶ್ವವಿದ್ಯಾಲಯದಲ್ಲಿ ಲಲಿತಕಲಾ ಪದವಿ. ಸಾಂಝಿ ಕಲೆಗಾಗಿ 5 ಬಾರಿ ರಾಜ್ಯ ಪ್ರಶಸ್ತಿ ಇವರದ್ದಾಗಿದೆ. ವಿವಿಧ ಮುಖಭಾವದ ಸಾವಿರಕ್ಕೂ ಅಧಿಕ ಮಾಸ್ಕ್ಗಳನ್ನು ತಯಾರಿಸಿದ್ದಾರೆ. ಜಪಾನ್ ಹಬ್ಬದಲ್ಲಿ 4 ಬಾರಿ ಪಾಲ್ಗೊಂಡಿದ್ದು, ಇವರ ಕಲೆಗಾರಿಕೆಯನ್ನು ಸಾಕ್ಷ್ಯಚಿತ್ರಕ್ಕೆ ಬಳಸಿಕೊಂಡಿದ್ದಾರೆ. ಮುಂಬೈನ ಗ್ಯಾಲರಿಯಲ್ಲಿ ಪ್ರದರ್ಶನಗೊಂಡಿವೆ. ಇವರಲ್ಲಿ ಗಣೇಶನ ಮುಖಚಿತ್ರವಿರುವ ಸಾವಿರಾರು ಬೆಂಕಿಪೊಟ್ಟಣಗಳಿವೆ. ಇವು ನಾನಾ ಕಂಪನಿಯ, ನಾನಾ ಭಾಷೆಯವು ಹಾಗೂ ನಾನಾ ಕಡೆ ಹೋದಾಗ ಸಂಗ್ರಹಿಸಿದ್ದು.
'ತನ್ನ ತಾಯಿ ರಂಗೋಲಿ ಮತ್ತು ಕರಕುಶಲ ವಸ್ತುಗಳನ್ನು ತಯಾರಿಸುತ್ತಿದ್ದರು. ಅಮ್ಮನೇ ತನಗೆ ಸ್ಪೂರ್ತಿ. ಕಲೆ ಎಲ್ಲರಿಗೂ ತಿಳಿಯಬೇಕು. ಇದಕ್ಕಾಗಿ 4 ವರ್ಷದಿಂದ 21 ಜಿಲ್ಲೆಗಳಲ್ಲಿ ಶಾಲೆ ಮಕ್ಕಳಿಗೆ, ಸಾರ್ವಜನಿಕರಿಗೆ ಈ ಕಲೆ ಕಲಿಸುತ್ತಿದ್ದೇನೆ. ಈ ಕಲೆ ತಾಳ್ಮೆ, ಏಕಾಗ್ರತೆ, ಸ್ಮರಣ ಶಕ್ತಿ ವೃದ್ಧಿಸುತ್ತದೆ' ಎನ್ನುತ್ತಾರೆ ಹುಸೇನಿ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.