ವರುಷ ಹರುಷ
'ಬೈಟು ಕಾಫಿ' ವಿವಿಧ ಮಾಹಿತಿಗಳ ಕಣಜ. ವಿವಿಧತೆಯಲ್ಲಿ ಏಕತೆಯ ಸಂಕೇತ. ಅದು ಒಂದು ಡಿಪಾಟರ್‌ಮೆಂಟಲ್ ಸ್ಟೋರ್ ತರಹ. ಒಂದೇ ಗವಾಕ್ಷಿಯಲ್ಲಿ ಅನೇಕ ವಿಷಯಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ ಮತ್ತು ಓದುಗರನ್ನು ಸೆರೆಹಿಡಿದು ನಿಲ್ಲಿಸುತ್ತದೆ. ನನಗೆ ಅದನ್ನು ಓದದಿದ್ದರೆ ಆ ದಿನವಿಡೀ ಏನೋ ಮಹತ್ತರವಾದುದನ್ನು ಕಳೆದುಕೊಂಡ ಅನುಭವವಾಗುತ್ತದೆ. ಅಷ್ಟು ಮಾದಕತೆಯನ್ನು ಅದು ನನ್ನಲ್ಲಿ ಉಂಟುಮಾಡಿದೆ. ನಿಮ್ಮ ದಿನಪತ್ರಿಕೆಯ ಒಂದು ಒಳ್ಳೆಯ ಗರಿಯ ಹಾಗೆ ಅದು ಕಾರ್ಯನಿರ್ವಹಿಸುತ್ತಿದೆ ಎಂದರೆ ಉತ್ಪ್ರೇಕ್ಷೆಯಾಗಲಾರದು. ಕೆಲವು ವ್ಯಕ್ತಿಗಳ ಬಗೆಗಿನ ಮಾಹಿತಿ ನನ್ನನ್ನು ಬೆರಗುಗೊಳಿಸಿದೆ. ಅವರುಗಳ ಮೊಬೈಲ್ ನಂಬರ್ ಕೊಡುವುದರಿಂದ ಅವರುಗಳನ್ನು ಸಂಪರ್ಕಿಸಲು ಸಾಧ್ಯವಾಗುತ್ತದೆ. ರನ್‌ವೇ ನನ್ನಲ್ಲಿ ಕೆಲವು ಸುಧಾರಣೆಗಳನ್ನು ತರಲು ಸಹಕಾರಿಯಾಗಿದೆ.
-ಕೆ.ವಿ. ಸೀತಾರಾಮ್, ಮಂಗಳೂರು
ಫುಲ್ ಕಾಫಿಯಲ್ಲೂ ಇಲ್ಲ ಮಜಾ
ಬೈಟು ಕಾಫಿ
ಗೆಳೆಯರೊಡನೆ ಹರಟುತ್ತಾ
ಕನ್ನಡಪ್ರಭ ಓದುತ್ತಾ
ಬೈಟು ಕಾಫಿ ಕುಡಿಯುತ್ತಾ
ಇರುವ ಮಜ
ಫುಲ್ ಕಾಫಿ
ಕುಡಿದರೂ ಸಿಗುವುದಿಲ್ಲ
-ಜಾ.ರು. ಆದಿನಾರಾಯಣಮುನಿ, ಬೆಂಗಳೂರು
ವೆರೈಟಿ ಕಾಫಿ
'ಬೈಟು ಕಾಫಿ' ಎಂಬ ಸರಳ, ಆಕರ್ಷಣೀಯ ಹಾಗೂ ಅಪರೂಪದ ಶೀರ್ಷಿಕೆಯೇ ಮನಸೆಳೆಯುವಂತಿದೆ. ಬೈಟು ಎನ್ನುವ ಆಪ್ತತೆಯ ಘಮದಿಂದ ಸುಗಂಧ ಭರಿತವಾಗಿರುವ ಕಾಫಿಯಲ್ಲಿ ಎಷ್ಟೊಂದು ಬಗೆ! ನೀವು ನೀಡುವ 'ಬೈಟು ಕಾಫಿ'ಯ ವೈವಿಧ್ಯತೆ 'ಕಾಫಿ ಡೇ' ವೆರೈಟಿಯನ್ನೂ ಮೀರಿಸುವಂತಿದ್ದು, ಹೊಸ ವಿಧದ ಕಾಫಿಗಾಗಿ ಅವರೇ ನಿಮ್ಮನ್ನು ಸಂಪರ್ಕಿಸಿದರೂ ಆಶ್ಚರ್ಯವಿಲ್ಲ! ಸರಳಭಾಷೆ-ವಿಫುಲ ಮಾಹಿತಿಯ ಆಕರ್ಷಕ ಸರಕುಗಳ ಕಣಜ 'ಬೈಟು ಕಾಫಿ' ನವ ಇತಿಹಾಸ ಸೃಷ್ಟಿಸಲಿ. ಬೈಟು ಕಾಫಿಯ ಹದ ನಿರ್ಧರಿಸುವ ಮತ್ತು ಅದನ್ನು ಸಿದ್ಧಪಡಿಸುವ ಸರ್ವರ ಶ್ರಮಕ್ಕೂ ನಮ್ಮದೊಂದು ಸಲಾಮ್.
-ಸಂದೇಶ್ ಎಚ್. ನಾಯ್ಕ, ಹಕ್ಲಾಡಿ ಕುಂದಾಪುರ
ಜಾಬ್ ಮಾಹಿತಿ ಕೊಡಿ
'ಬೈಟು ಕಾಫಿ' ನನಗೆ ಸಖತ್ ಇಷ್ಟ. ನಾವು ಇರೋದು ತಮಿಳುನಾಡಿನ ಹೊಸೂರಿನಲ್ಲಿ. ನಿತ್ಯ ಅತ್ತಿಬೆಲೆಯಿಂದ ಕನ್ನಡಪ್ರಭ ತರಿಸಿಕೊಂಡು ಓದ್ತೀವಿ. ಜಾಬ್ ಮಾಹಿತಿಯನ್ನು ಇನ್ನಷ್ಟು ವಿವರವಾಗಿ ನೀಡಿದರೆ ಚೆನ್ನಾಗಿರುತ್ತೆ.
-ರಾಘವೇಂದ್ರ, ಹೊಸೂರು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.