ಸಿಂಪಿಯ ದುರದೃಷ್ಟ
ತನ್ನ ಸಡಿಲವಾದ ಮುತ್ತೊಂದು ಸಮುದ್ರದ ತಟದಲ್ಲಿರುವ ಬಂಡೆಕಲ್ಲಿನ ಬಿರುಕಿನಲ್ಲಿ ಬಿದ್ದಿರುವುದನ್ನು ಸಿಂಪಿಯೊಂದು ನೋಡಿತು. ತುಂಬ ಕಷ್ಟಪಟ್ಟು ಆ ಮುತ್ತನ್ನು ಅದು ಮರಳಿ ಪಡೆಯಿತು. ಅನಂತರ ಆ ಮುತ್ತನ್ನು ತನ್ನ ಪಕ್ಕದಲ್ಲಿದ್ದ ಎಲೆಯೊಂದರ ಮೇಲೆ ಇಟ್ಟಿತು.
ಮನುಷ್ಯರು ಮುತ್ತಿಗಾಗಿ ಹುಡುಕುತ್ತಾರೆ ಎಂದು ಅದಕ್ಕೆ ಗೊತ್ತಿತ್ತು. ಅದು ಯೋಚಿಸಿತು'ಈ ಮುತ್ತನ್ನು ನೋಡಿ ಅವರು ಅದರತ್ತ ಆಕರ್ಷಿತರಾಗುತ್ತಾರೆ ಮತ್ತು ನನ್ನನ್ನು ಬಿಟ್ಟುಬಿಡುತ್ತಾರೆ.'
ಒಂದಿ ದಿನ ಮುತ್ತಿಗಾಗಿ ಹುಡುಕಾಟ ನಡೆಸುವ ಮುಳುಕ ಆ ಸಮುದ್ರದಲ್ಲಿ ಕಾಣಿಸಿಕೊಂಡ. ಮುತ್ತನ್ನು ಹೊಂದಲು ಸಿಂಪಿ ಎಲ್ಲಿದೆಯೆಂದು ಹುಡುಕುವುದಕ್ಕಷ್ಟೇ ಆತ ಒಗ್ಗಿಹೋಗಿದ್ದನಲ್ಲದೆ, ಎಲೆಯ ಮೇಲಿರುವ ಮುತ್ತನ್ನು ಹುಡುಕುವುದಕ್ಕಲ್ಲ.
ಆದುದರಿಂದ ಆತ ಮುತ್ತಿಲ್ಲದ ಆ ಸಿಂಪಿಯನ್ನು ಗಬಕ್ಕನೆ ಹಿಡಿದ. ಪಕ್ಕದ ಎಲೆಯ ಮೇಲಿದ್ದ ಮುತ್ತು ಜಾರಿ ಮತ್ತೊಮ್ಮೆ ಬಂಡೆಕಲ್ಲಿನ ಎಡೆಯನ್ನು ಸೇರಿತು.
ನೀತಿ: ಎಲ್ಲಿ ಹುಡುಕಬೇಕೆಂದು ನಮಗೆ ಸರಿಯಾಗಿ ಗೊತ್ತಿದೆ; ಆ ಕಾರಣದಿಂದಲೇ ದೇವರನ್ನು ಕಂಡುಕೊಳ್ಳುವಲ್ಲಿ ನಾವು ವಿಫಲರಾಗುತ್ತೇವೆ.
- ನಂದಿನಿ ಡಿ. ಕಾಮತ್