ಕಲಾ ಉತ್ಸವ-2013
ಎಐಎಂ ಸಂಘಟನೆ ಸೆಪ್ಟೆಂಬರ್ 22ರಂದು 'ಬೆಂಗಳೂರು ಅಂತಾರಾಷ್ಟ್ರೀಯ ಸಾಂಸ್ಕೃತಿಕ ಕಲಾ ಉತ್ಸವ-2013'ನ್ನು ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ತ್ರಿವಿಧ ನೃತ್ಯ ಕಾರ್ಯಕ್ರಮವಿದೆ. ಮೊದಲನೆಯದು, ಪ್ರೀತಿ ಸುಂದರಾಜನ್ ಅವರಿಂದ ಆಧುನಿಕ, ಸಮಕಾಲೀನ ನೃತ್ಯ ಪ್ರದರ್ಶನ. ಎರಡನೆಯದು, ಒಡಿಸ್ಸಾ-ಜಾರ್ಖಂಡ್-ಪಶ್ಚಿಮ ಬಂಗಾಳದ ಸುಪ್ರಸಿದ್ಧ ನೃತ್ಯ ಸರೈಕೆಲ್ಲಾ ಚಾವು ಡ್ಯಾನ್ಸ್‌ನ್ನು ಪ್ರಸ್ತುತಪಡಿಸುವವರು ಪಂಡಿತ್ ಗೋಪಾಲ್ ಪ್ರಸಾದ್ ದುಬೆ ಹಾಗೂ ಮೂರನೆಯದು ತಿಲಕ್ ಫರ್ನಾಂಡೋ ಮತ್ತು ತಂಡದವರಿಂದ ಶ್ರೀಲಂಕಾದ ಜಾನಪದ ನೃತ್ಯ ಪ್ರದರ್ಶನ. ಈ ಎಲ್ಲ ಕಾರ್ಯಕ್ರಮವನ್ನು ಫ್ರೀಡಮ್ ಪಾರ್ಕ್‌ನಲ್ಲಿ ಆಯೋಜಿಸಲಾಗಿದೆ.
ಇದೇ ಸಂದರ್ಭದಲ್ಲಿ ಕರ್ನಾಟಕ ಜಾನಪದ ಸಂಗೀತ ಹಾಗೂ ನೃತ್ಯ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ.
ದಿನಾಂಕ: 22-09-2013, ಸ್ಥಳ: ಫ್ರೀಡಮ್ ಪಾರ್ಕ್, ಶೇಷಾದ್ರಿ ರಸ್ತೆ, ಮಹಾರಾಣಿ ಕಾಲೇಜ್ ಎದುರು, ಬೆಂಗಳೂರು-560001, ಸಮಯ: ಸಂಜೆ 6.30, ವಿವರಗಳಿಗೆ 9980327800 ಸಂಪರ್ಕಿಸಿ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.