ಅಮಾಯಕತೆ
ಮನೆಯ ಹಜಾರದಲ್ಲಿ ಕುಳಿತಿದ್ದ ಅಣ್ಣ ತಮ್ಮಂದಿರಿಬ್ಬರ ಮಧ್ಯೆ ಆಸ್ತಿಗಾಗಿ ದೊಡ್ಡ ಜಗಳ ನಡೆಯುತ್ತಿತ್ತು. ಏನೂ ಅರಿಯದ ಪುಟ್ಟ ಕಂದ 'ಐಸ್ ಕ್ರೀಂ' ಕೊಡಿಸೆಂದು ಜಗಳವಾಡುತ್ತಿದ್ದ ದೊಡ್ಡಪ್ಪನ ಪಂಚೆ ಎಳೆಯುತ್ತಿತ್ತು!
ಸ್ವಾತಂತ್ರ್ಯ
'ಗಾಂಧೀಜಿ ದೇಶಕ್ಕೆ ಸ್ವಾತಂತ್ರ್ಯ ಕೊಡ್ಸಿದ್ರೂ ನಂಗೆ ಇನೂ ಯಾಕೆ ಸಿಕ್ಕಿಲ್ಲ' ಅಂತ ಅಕ್ಕಪಕ್ಕದ ಮನೆಯವರಿಗೆ ಕೇಳಿಸುವಂತೆ ಆಕೆ ಕೂಗಾಡುತ್ತಿದ್ದಳು. 'ನಿನ ಪ್ರಶೆಗೆ ಉತ್ತರಿಸಲು ಅವಕಾಶ ಕೊಡು' ಎಂದು ಗಂಡ ಅವಳಲ್ಲಿ ಸ್ವಾತಂತ್ರ್ಯ ಬೇಡುತ್ತಿದ್ದ!
ಪರಹಿತ
ಆತ ಕುಡಿದು ಬಂದು ಹೊಡೆದರೂ ಆ ಮಡದಿ ಆತನಿಗೆ ಹೊಟ್ಟೆತುಂಬ ಅನವಿಕ್ಕುತ್ತಿದ್ದಳು. ಬೆಳಗಿನಿಂದ ದಾರಿಹೋಕರು ಮೂತ್ರಿಸಿದರೂ ಸಂಜೆಗೆ ಬೆಳಕನೀಯುತ್ತಿದ್ದ ಲೈಟುಕಂಬ ಅವಳಿಗೆ ಸಾಂತ್ವನ ಹೇಳುತ್ತಿತ್ತು!
ಪುಸ್ತಕ
ಆಕೆ ಈಗ ತಾನೇ ಬಿಡುಗಡೆಯಾಗಿ ಪ್ರಸಿದ್ಧಿಯಾಗಿದ್ದ ಪುಸ್ತಕವೊಂದನು ಕೊಂಡು ತಂದು ಓದಲಾರಂಭಿಸಿದಳು.
ಆಗಲೇ ಗೊತ್ತಾಗಿದ್ದು, ಅದರಲ್ಲಿದ್ದವೆಲ್ಲ ಆಕೆಯು ತಿರಸ್ಕರಿಸಿದ್ದ ಹುಡುಗ ಬರೆದ ಪ್ರೇಮಪತ್ರಗಳು!
- ಸಂತೋಷ್‌ಕುಮಾರ್ ಎಂ.ಎಲ್.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.