ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಗಂಜಿಯಲ್ಲಿರುವ ತಾಕತ್ತಿನ ಬಗ್ಗೆ ಗೊತ್ತಾ?

Vishwanath S
Updated On : 22 Sept 2013, 2:53 am

ಅತಿಸಾರವಾದಾಗ ಆಹಾರ ಸೇವಿಸದೇ ಇರುವುದು ತಪ್ಪು ಎನುವುದನು ಅರ್ಥ ಮಾಡಿಕೊಂಡೆವು. ಭೇದಿಯಾದವರಿಗೆ ಎಂಥ ಆಹಾರ ಕೊಡಬೇಕು? ಅದನು ಮನೆಯಲ್ಲೇ ಮಾಡಿಕೊಳ್ಳುವುದು ಹೇಗೆ? ಆ ಕುರಿತು ಸ್ವಲ್ಪ ಚರ್ಚೆ ಮಾಡೋಣ.
ಅನದ ಗಂಜಿ ನಮಗೆಲ್ಲ ಗೊತ್ತು. ಅತಿಸಾರದಿಂದ ಬಳಲುವವರಿಗೆ ಇದು ಅತ್ಯುತ್ತಮ ಆಹಾರ. ಅತಿ ಶೀಘ್ರದಲ್ಲಿ ತನ ಪರಿಣಾಮ ಬೀರಲು ಆರಂಭಿಸುತ್ತದೆ. ತಜ್ಞರ ಪ್ರಕಾರ, 'ಗಂಜಿ ಅತಿಸಾರದ ಅವಧಿಯನು ಶೇ. 50ರಷ್ಟು ಕಡಿಮೆ ಮಾಡುತ್ತದೆ. ಅತಿಸಾರದ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದಂತೆ ಗಂಜಿ ಸೇವನೆ ಆರಂಭಿಸಿದರೆ ಮೂರು ಗಂಟೆಯ ಒಳಗಾಗಿ ತಕ್ಕಮಟ್ಟಿಗೆ ನಿಯಂತ್ರಣಕ್ಕೆ ತರಲು ಸಾಧ್ಯವಿದೆ'. ಸಾಮಾನ್ಯವಾಗಿ ಅತಿಸಾರ ಮೂರು ದಿನಗಳವರೆಗೆ ಇರುತ್ತದೆ. ಆದರೆ ಶೀಘ್ರದಲ್ಲಿ ಗಂಜಿ ಸೇವಿಸಲು ಆರಂಭಿಸಿದರೆ ಒಂದು ಅಥವಾ ಎರಡು ದಿನಗಳಲ್ಲೇ ಭೇದಿಯನು ನಿಯಂತ್ರಿಸಲು ಸಾಧ್ಯವಿದೆ. ಅಂಗಡಿಗಳಲ್ಲಿ ಸಿಗುವ ರೀಹೈಡ್ರೇಶನ್ ಪಾನೀಯಗಳಿಗಿಂತ ಇದು ಬಹಳ ಪರಿಣಾಮಕಾರಿ ಎನುವುದು ಅವರ ಅಭಿಮತ.
ಗಂಜಿ ಅಂದಮೇಲೆ ನೀರನು ಬಸಿಯುವುದಿಲ್ಲ. ಆದರೆ ಅನದ ಅಗುಳು ತೀರಾ ಗಟ್ಟಿಯಾಗಿರಬಾರದು. ಪುಟ್ಟ ಮಕ್ಕಳಿಗೆ ತಿನಿಸುವಾಗ ಅಗುಳನು ನುರಿದು ತಿನಿಸುತ್ತೇವಲ್ಲ, ಆ ಥರ ನುರಿಯಬೇಕು. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿಕೊಳ್ಳಬಹುದು. ಅನೇಕ ಪ್ರಯೋಗಗಳನು ನಡೆಸಿ ಗಂಜಿ ಪರಿಣಾಮಕಾರಿ ಆಹಾರ ಎನುವುದನು ವೈದ್ಯ ವಿಜ್ಞಾನವೂ ಒಪ್ಪಿಕೊಂಡಿದೆ. ಗಂಜಿ ತೀರಾ ತೆಳುವಾಗಿರಬೇಕು ಅಂತೇನೂ ಇಲ್ಲ. ಕುಡಿಯಲು ಸಾಧ್ಯ ಆಗುವಷ್ಟು ದಪ್ಪ (ಮಂದ) ಮಾಡಿಕೊಳ್ಳಬಹುದು. ಆದರೆ ಉಪ್ಪನು ಜಾಸ್ತಿ ಬಳಸಕೂಡದು. ಅದು ರುಚಿಗೆ ಮಾತ್ರ. ಹೆಚ್ಚು ಅಂದರೆ ಒಮ್ಮೆ ಕಾಲು ಚಹಾ ಚಮಚದಷ್ಟು ಉಪ್ಪು ಹಾಕಿಕೊಳ್ಳಬಹುದು. ಅತಿಯಾದ ಉಪ್ಪು ಬಳಸುವುದು ಕೂಡ ಕೆಲವರಿಗೆ ಆಗಿಬರದೇ ಇರಬಹುದು. ಯಾವ ಕಾರಣಕ್ಕೂ ಸಕ್ಕರೆಯನು ಬೆರೆಸಲೇಕೂಡದು. ಹಾಗೆ ಮಾಡಿದರೆ ವಿರುದ್ಧ ಪರಿಣಾಮಗಳನು ಬೀರುವ ಆಹಾರ ಪದಾರ್ಥಗಳನು ದೇಹಕ್ಕೆ ಸೇರಿಸಿದಂತೆ ಆಗುತ್ತದೆ ಮತ್ತು ಅದರಿಂದ ಅತಿಸಾರ ಕಡಿಮೆಯಾಗುವ ಬದಲು ಹೆಚ್ಚೇ ಆಗಬಹುದು.
ನೀರಿನಂಥ ದ್ರಾವಣವನು ಮೊದಲೇ ಕುಡಿದು, ಅನದ ಅಗುಳನು ಆಮೇಲೆ ಸೇವಿಸುವುದೂ ಸರಿಯಾದ ಕ್ರಮ ಅಲ್ಲ. ಅವೆರಡನೂ ಚೆನಾಗಿ ಮಿಶ್ರ ಮಾಡಿ, ಒಟ್ಟೊಟ್ಟಿಗೇ ಸೇವಿಸಬೇಕು. ದೊಡ್ಡವರಿಗೆ ಮಾತ್ರವಲ್ಲ, ಪುಟ್ಟ ಮಕ್ಕಳಿಗೂ ಗಂಜಿ ನೀಡಬಹುದು. ಅವರಿಗೆ ಪ್ರತಿ ನಿಮಿಷಕ್ಕೆ ಎರಡು ಚಮಚದಂತೆ ನಿರಂತರವಾಗಿ ಕುಡಿಸುತ್ತಿರಬಹುದು. ಮಗು ಎಷ್ಟು ಕಾಲ ಸೇವಿಸುತ್ತದೆಯೊ ಅಷ್ಟು ಕಾಲ ಕೊಡಬಹುದು. ತನಗೆ ಬೇಡ ಎನಿಸಿದಾಗ ಮಗು ಉಗುಳುತ್ತದೆ. ಆಗ ಪ್ರಮಾಣ ಕಡಿಮೆ ಮಾಡಿ, ಅಂತರವನು ಸ್ವಲ್ಪ ಹೆಚ್ಚಿಸಿಕೊಳ್ಳಬಹುದು. ದೊಡ್ಡವರು ಗಂಟೆ ಅಥವಾ ಎರಡು ಗಂಟೆಗೊಮ್ಮೆ ಸೇವಿಸಬಹುದು. ಅನದ ಗಂಜಿ ಬೇಸರ ತರಿಸಿದರೆ ಓಟ್ಸ್ ಮತ್ತು ಗೋಧಿ ಕ್ರೀಂ ಬಳಸಿಯೂ ಗಂಜಿ ಮಾಡಿಕೊಡಬಹುದು. ಆದರೆ ಅವನು ಚೆನಾಗಿ ಬೇಯಿಸುವುದಕ್ಕೆ ಮರೆಯಬಾರದು.


-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement