ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ತಲೆ ಬರಹ

Vishwanath S
Updated On : 22 Sept 2013, 2:44 am

ತಲೆ ತುಂಬ ಕೂದಲು ಇದ್ದವರಿಗೆ ತಲೆ ಬಿಸಿ ಇರುವುದಿಲ್ಲ. ಆದರೆ, ಉದುರುವ ಕೂದಲುಗಳನಿಟ್ಟುಕೊಂಡು ತಲೆ ಕೆಡಿಸಿಕೊಳ್ಳುವವರು ನೂರಾರು ಜನ. ವಯಸ್ಸಾದವರಿಗೆ ತಲೆ ಕೂದಲು ಉದುರುವುದು ಸಾಮಾನ್ಯ. ಆದರೆ, ಇತ್ತೀಚಿನ ದಿನಗಳಲ್ಲಿ ಹದಿಹರೆಯದವರಲ್ಲಿ, ವಿಶೇಷವಾಗಿ 15ರಿಂದ 30 ವರ್ಷದ ಹೆಣ್ಣುಮಕ್ಕಳಿಗೆ ಈ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಯುವ ಸಮೂಹ ಇನಿತರ ಸಮಸ್ಯೆಗಳೊಂದಿಗೆ ತಲೆ ಬಿಸಿ ಕೂಡಾ ಮಾಡಿಕೊಳ್ಳುತ್ತಿದ್ದಾರೆ ಎಂದರೆ ನೀವು ನಂಬಲೇಬೇಕು!
ಸಾಮಾನ್ಯವಾಗಿ ತಲೆ ಕೂದಲು ಉದುರಲು ಒತ್ತಡದಿಂದ ಕೂಡಿದ ಜೀವನ, ಅನುವಂಶೀಯತೆ ಹಾಗೂ ನಮ್ಮ ಜೀವನಶೈಲಿ ಕಾರಣ. ಆದರೆ, ಬೆಂಗಳೂರಿನ ಹೇರ್‌ಲೈನ್ ಇಂಟರ್‌ನ್ಯಾಷನಲ್ ಹೇರ್ ಕ್ಲಿನಿಕ್ ನಡೆಸಿದ ವೈಜ್ಞಾನಿಕ ಅಧ್ಯಯನದಲ್ಲಿ ಮತ್ತೊಂದು ಕಾರಣ ಕಂಡುಕೊಂಡಿದ್ದಾರೆ. ಅದೇನೆಂದರೆ, ನೀರು! ನಾವು ಕುಡಿಯುವ ನೀರು ಕೂಡಾ ಕೂದಲು ಉದುರಲು ಕಾರಣವಾಗುತ್ತದೆ. ಗಡಸು ನೀರಿನಿಂದ ತಲೆ ಸಾನ ಮಾಡುವುದರಿಂದ ಕೂದಲು ಉದುರುತ್ತಿದೆಯಾದರೂ ಸತು ಹೆಚ್ಚಿರುವ ನೀರನು ಕುಡಿಯುವುದರಿಂದಲೂ ಈ ಸಮಸ್ಯೆ ಉಲ್ಭಣವಾಗುತ್ತಿದೆ ಎನುತ್ತಾರೆ ಹೇರ್‌ಲೈನ್‌ನ ಡಾ. ಪ್ರಫುಲ್ಲ ಜಿ.ಕೆ.
ಬೆಂಗಳೂರಿನ ಆರ್‌ಟಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ದೊರೆಯುವ ನೀರನು ಅಧ್ಯಯನಕ್ಕೊಳಪಡಿಸಿದೆ ಹೇರ್‌ಲೈನ್ ಕ್ಲಿನಿಕ್. ಆಗ ಗೊತ್ತಾದ ಸಂಗತಿ ಎಂದರೆ ನೀರಿನಲ್ಲಿ ಸತು ಪ್ರಮಾಣ ಹೆಚ್ಚಾಗಿರುವುದು. ನೀರಿನಲ್ಲಿ ಸತು ನಿಗದಿತ ಪ್ರಮಾಣದಲ್ಲಿರಬೇಕು. ಅದು ಕೊಂಚ ಹೆಚ್ಚಾದರೂ ಇಲ್ಲವೇ ಕಡಿಮೆಯಾದರೂ ಕೂದಲು ಆರೋಗ್ಯಕ್ಕೆ ಧಕ್ಕೆಯಾಗುತ್ತದೆ ಎನುತ್ತಾರೆ ಡಾ. ಪ್ರಫುಲ್ಲ.
ಉದುರಲು ಕಾರಣವೇನು?
ವೈದ್ಯರ ಪ್ರಕಾರ ಕೂದಲು ಉದುರಲು ಮುಖ್ಯ ಕಾರಣ ಒತ್ತಡ ಮತ್ತು ಹಾರ್ಮೋನ್‌ಗಳು. ಇದನು ಹೊರತುಪಡಿಸಿ ನಾವು ಕುಡಿಯುವ ನೀರು, ಕಲುಷಿತ ಗಾಳಿ, ಬೇಕಾಬಿಟ್ಟಿಯಾಗಿರುವ ಲೈಫ್‌ಸ್ಟೈಲ್, ಕಡಿಮೆ ನಿದ್ದೆ, ಲಿವರ್ ತೊಂದರೆ. ಈ ಎಲ್ಲ ಕಾರಣಗಳಿಂದಾಗಿ ವಿಶೇಷವಾಗಿ 15 ವರ್ಷದ ಮೇಲ್ಪಟ್ಟ ಹುಡುಗಿಯರಲ್ಲೂ ಕೂದಲು ಉದುರುವಿಕೆ ಹೆಚ್ಚಾಗಿದೆ ಎನುತ್ತಾರೆ ಹೇರ್‌ಲೈನ್ ಕ್ಲಿನಿಕ್ ವೈದ್ಯರು.
ಒತ್ತಡದಿಂದಾಗಿ ದೇಹದಲ್ಲಿ ಕಾರ್ಟಿಸೋನ್ ಎನುವ ಹಾರ್ಮೋನ್ ಉತ್ಪತ್ತಿಯಾಗುತ್ತದೆ. ಇದು ಕೂದಲು ಬೆಳವಣಿಗೆಯನು ತಡೆಯುತ್ತದೆ. ನಿರಂತರ ವ್ಯಾಯಾಮದಿಂದ ಈ ಸಮಸ್ಯೆಯನು ಬಗೆಹರಿಸಿಕೊಳ್ಳಬಹುದು. ಇಷ್ಟೇ ಅಲ್ಲದೆ, ರಕ್ತದಲ್ಲಿ ಕೊಬ್ಬು ಮತ್ತು ಸಕ್ಕರೆ ಅಂಶ ಜಾಸ್ತಿಯಾದಾಗಲೂ ಕೂದಲು ಉದುರುತ್ತವೆ. ನೆತ್ತಿಯಲ್ಲಿ ಕೊಬ್ಬಿನಂಶ ಜಾಸ್ತಿ ಇರುತ್ತದೆ. ನಾವು ಪದೇ ಪದೆ ತಲೆಗೆ ಎಣ್ಣೆ ಹಚ್ಚುವುದರಿಂದ ಇನ್‌ಫೆಕ್ಷನ್ ಉಂಟಾಗಿ ಕೂದಲು ಉದುರುತ್ತದೆ. ಹಾಗಾಗಿ, ತಲೆಗೆ ಎಣ್ಣೆ ಹಚ್ಚಿ ಅರ್ಧ ಗಂಟೆ ಬಳಿಕ ನಿಗದಿತ ಪ್ರಮಾಣದಲ್ಲಿ ಶಾಂಪೂ ಬಳಸಿ, ತಲೆ ತೊಳೆದುಕೊಳ್ಳಬೇಕು. ಆಗ ಕೂದಲು ಉದುರುವುದನು ನಿಯಂತ್ರಿಸಲು ಸಾಧ್ಯ.
ಸಂರಕ್ಷಣೆ ಹೇಗೆ?
ಒತ್ತಡದಿಂದ ಕೂಡಿದ ಜೀವನಕ್ಕೆ ವಿದಾಯ ಹೇಳಿ. ನಿಮ್ಮ ಲೈಫ್‌ಸ್ಟೈಲ್‌ನಲ್ಲಿ ಬದಲಾವಣೆ ತಂದುಕೊಳ್ಳಿ. ಶುಭ್ರ ಹಾಗೂ ಶುದ್ಧವಾದ ನೀರನು ಕುಡಿಯಿರಿ. ನಿಗದಿತವಾಗಿ ವ್ಯಾಯಾಮ ಮಾಡಿ. ಎಲ್ಲಕ್ಕಿಂತ ಹೆಚ್ಚಾಗಿ ಸಾಕಷ್ಟು ಪ್ರಮಾಣದಲ್ಲಿ ನಿದ್ದೆ ಮಾಡಬೇಕು. ಕನಿಷ್ಠ 7 ಗಂಟೆಯಾದರೂ ಸುಖ ನಿದ್ದೆ ಮಾಡಬೇಕು. ಶಾಂಪೂಗಳನು ಮಿತಿಯಲ್ಲಿ ಬಳಸಿ.
ಚಿಕಿತ್ಸೆ ಹೇಗೆ?
ಎಷ್ಟೆಲ್ಲ ಪ್ರಯತಿಸಿದರೂ ಕೂದಲು ಉದುರುವುದನು ತಡೆಯಲು ಆಗದಿದ್ದರೆ ಕೊನೆಗೆ ವೈದ್ಯಕೀಯ ಹಾದಿ ಇದ್ದೆ ಇದೆ. ಕೂದಲು ಯಾವ ಪ್ರಮಾಣದಲ್ಲಿ ಉದುರುತ್ತಿದೆ ಎಂಬುದರ ಮೇಲೆ ವೈದ್ಯರು ಯಾವ ರೀತಿ ಚಿಕಿತ್ಸೆ ನೀಡಬೇಕು ಎಂಬುದನು ನಿರ್ಧರಿಸುತ್ತಾರೆ. ಅದಕ್ಕನುಗುಣವಾಗಿ ಹೇರ್‌ಲೈನರ್ ಇಂಟರ್‌ನ್ಯಾಷನಲ್ ಕ್ಲಿನಿಕ್‌ನಲ್ಲಿ ಚಿಕಿತ್ಸೆಗಳು ಲಭ್ಯವಿವೆ. ಪ್ರಮುಖವಾಗಿ ಲೇಸರ್ ಕೋಂಬ್, ಡೆರ್ಮಾ ರೋಲರ್, ಪಿಯುವಿಎ ಥೆರಪಿ, ಪಿಆರ್‌ಪಿ(ಪ್ಲೆಟೆಲೆಟ್ ರಿಚ್ ಪ್ಲಾಸ್ಮಾ), ಆಟೋಲೋಗೋಸ್ ಪ್ಲೆಟ್ಲೆಟ್ ರಿಚ್ ಪ್ಲಾಸ್ಮಾ, ಸ್ಟೆಮ್‌ಸೆಲ್ ಥೆರಪಿ ನೀಡಲಾಗುತ್ತದೆ. ಇದಲ್ಲದೆ ಹೋಮಿಯೋಪಥಿ ಹಾಗೂ ಆಯುರ್ವೇದ ಚಿಕಿತ್ಸೆಯನೂ ನೀಡಲಾಗುತ್ತದೆ. ಇವು ಹೊರತುಪಡಿಸಿ ಸರ್ಜಿಕಲ್ ಮತ್ತು ನಾನ್ ಸರ್ಜಿಕಲ್‌ವಾಗಿಯೂ ಚಿಕಿತ್ಸೆ ದೊರೆಯುತ್ತದೆ. ಇದು ಆಯಾ ರೋಗಿಗಳ ಲಕ್ಷಣಾನುಸಾರ ವೈದ್ಯರು ಚಿಕಿತ್ಸೆ ನಿರ್ಧರಿಸುತ್ತಾರೆ. ಸರ್ಜಿಕಲ್ ವಿಭಾಗದಲ್ಲಿ ಕೂದಲು ಕಸಿ, ಸ್ಟ್ರಿಪ್ ಮೆಥೆಡ್, ಸ್ಟಿಚ್‌ಲೆಸ್ ಮತ್ತು ಸ್ಕಾರ್‌ಲೆಸ್ ಶಸ್ತ್ರಚಿಕಿತ್ಸೆ, ಏಸೆಲ್ ಮ್ಯಾಟ್ರಿಕ್ಸ್, ಸ್ಕಾಲ್ಫ್ ರೆಡಕ್ಷನ್, ಹೇರ್ ಮಲ್ಟಿಪ್ಲಿಕೇಷನ್ ಪ್ರಮುಖ. ಹೇರ್‌ಲೈನರ್  ಕ್ಲಿನಿಕ್‌ನಲ್ಲಿ ಚಿಕಿತ್ಸೆ ಕೂಡಾ ಕೈಗೆಟುಕುವ ದರದಲ್ಲಿ ದೊರೆಯುತ್ತದೆ. ದೂರದ ಊರುಗಳಿಂದ ಬರುವ ರೋಗಿಗಳಿಗೆ ಸ್ವಲ್ಪ ಮಟ್ಟಿನ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲು ಸೌಲಭ್ಯವೂ ಇಲ್ಲಿದೆ. ಹೆಚ್ಚಿನ ಮಾಹಿತಿಗೆ: 080-2355117.


-ತಿಪ್ಪಾರ/ಮೂಲಿಮನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments