ದೂತಿಯ ಜಾಣ್ಮೆ
ಮುಖರಮಧೀರಂ ತ್ಯಜಮಂಜೀರಂ ರಿಪುಮಿವ ಕೇಲಿಸುಲೋಲಂ
ಚಲ ಸಖಿ ಕುಂಜಂ ಸತಿಮಿರಪುಂಜಂ ಶೀಲಯ ನೀಲನಿಚೋಲಂ
ಉರಸಿ ಮುರಾರೇರುಪಹಿತಹಾರೇ ಘನ ಇವ ತರಲಬಲಾಕೇ
ತಡಿದಿವ ಪೀತೇ ರತಿವಿಪರೀತೇ ರಾಜಸಿ ಸುಕೃತವಿಪಾಕೇ
ಪ್ರಣಯಕಾವ್ಯಗಳಲ್ಲೆಲ್ಲ ಉತ್ಕೃಷ್ಟವೆನಿಸಿದ ಜಯದೇವನ 'ಗೀತಗೋವಿಂದ'ದಿಂದ ಆಯ್ದ ಇನೊಂದು ಪದ್ಯವಿದು. ಸನಿವೇಶ: ರಾಧೆ- ಮಾಧವರಿಬ್ಬರೂ ಪರಸ್ಪರ ಮುನಿಸಿಕೊಂಡಿದ್ದಾರೆ. ಕತ್ತಲಾಗಿದೆ. ಶ್ರೀಕೃಷ್ಣ, ಉದ್ಯಾನದ ಲತಾಕುಂಜದಲ್ಲಿ ವಿರಹತಪ್ತನಾಗಿ ಮೈಚೆಲ್ಲಿದ್ದಾನೆ. ಇತ್ತ ಮನೆಯಲ್ಲಿ ರಾಧೆ ಕೂಡ ನಿಸ್ತೇಜಳಾಗಿ ಕೂತಿದ್ದಾಳೆ. ಇಬ್ಬರಿಗೂ ಸಮೀಪಿಸಲು ಸ್ವಾಭಿಮಾನ ಬಿಡದು. ಇವರನು ಸಂಧಾನ ಮಾಡಿಸಿ ಒಂದಾಗಿಸಲು ಪರದಾಡುತ್ತಿರುವ ದೂತಿ, ಇದೀಗ ತಾನೆ ಶ್ಯಾಮನ ಬಳಿಗೆ ಹೋಗಿ ಬಂದಿದ್ದಾಳೆ. ರಾಧೆಗೆ ರಾಜಿಸೂತ್ರ ಹೇಳಿಕೊಡುತ್ತಿದ್ದಾಳೆ:
'ರಾಧೇ, ಈಗ ಉದ್ಯಾನದಲ್ಲಿ ಲತಾಮಂಟಪದೆಡೆಯಲ್ಲೆಲ್ಲ ಕತ್ತಲೆ ಕವಿದಿದೆ. ನೀನು ಕಪ್ಪುಡುಗೆ ಧರಿಸಿ ಹೋದರೂ ಗೊತ್ತಾಗದು. (ಕತ್ತಲಲ್ಲಿ ರಾಜಿಯಾಗಲು ಏನೂ ಕಷ್ಟವಿಲ್ಲ!) ಆದರೆ ಕಾಲಲ್ಲಿ ಗಿಲಿಗಿಲಿ ಸಪ್ಪಳ ಮಾಡುತ್ತಿರುವ ಈ ಗೆಜ್ಜೆಗಳನು ತೆಗೆದುಬಿಡು. ಅದು ಇತರರಿಗೆ ನಿನ ಇರವನು ಗೊತ್ತುಮಾಡಿಸುವುದಷ್ಟೇ ಅಲ್ಲ, ನಿಮ್ಮಿಬ್ಬರ ಕ್ರೀಡೆಯ ವಿವರವನೂ ಜಗಜ್ಜಾಹೀರುಗೊಳಿಸುತ್ತದೆ. ಪ್ರೇಮಸಲ್ಲಾಪಕ್ಕೆ ಗೆಜ್ಜೆ ಒಂದು ವಿಘ! ಇನು, ಈ ಕತ್ತಲಲ್ಲಿ ಕೃಷ್ಣನ ಪತ್ತೆ ಹಚ್ಚುವುದು ಹೇಗೆಂದು ಕೇಳಿದೆಯಾ? ಅದೇನೂ ಕಷ್ಟವಿಲ್ಲ. ಆತನ ಕಪ್ಪು ಮೈಯಲ್ಲಿ, ಕುತ್ತಿಗೆಯಲ್ಲಿ ಧರಿಸಿರುವ ಮುತ್ತಿನ ಹಾರ ಬೆಳ್ಳಕ್ಕಿ ಸಾಲಿನಂತೆ ಮಿಂಚುತ್ತದೆ! ಅಷ್ಟು ಸಾಕಲ್ಲವೇ? ಆ ಎದೆಯನು ನೀನು ಪುರುಷಾಯತ ಮೂಲಕ ಪಡೆಯಲಿದ್ದೀಯಲ್ಲವೆ!?'
- ಹರಿಹರ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.